ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಸಾಹಿತಿ, ಎ.ಎಸ್. ಮಕಾನದಾರ ನೇಮಕ

0
170

ಗಜೇಂದ್ರಗಡ: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದಲ್ಲಿ ಕನ್ನಡ ಭಾಷಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ
ಸರ್ಕಾರದ ಭಾಷಾ ನೀತಿ ಅನುಷ್ಠಾನದಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳುವಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ ಐವರನ್ನೊಳಗೊಂಡ  ಜಿಲ್ಲಾ ಕನ್ನಡ ಜಾಗೃತಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.ಎ ಎಸ್. ಮಕಾನದಾರ. ಹಿರಿಯ ಸಾಹಿತಿ ಪ್ರೊ. ಚಂದ್ರ ಶೇಖರ್ ವಸ್ತ್ರದ.ಮುಂಡರಗಿಯ ಪ್ರೊ. ಬಿ ಆರ್. ಪೊಲೀಸ್ ಪಾಟೀಲ್.ನರಗುಂದದ  ಅನಿಲ ಕುಮಾರ್ ಎಸ್. ಕೊಟ್ಟನ ಕೇರಿ. ಕೊಣ್ಣೂರಿನ ಮಹಾಂತೇಶ್ ಪಿ ವಾಲಿ ಆಯ್ಕೆ ಆಗಿದ್ದಾರೆ. 
ಗದಗ ಜಿಲ್ಲೆ ಗಜೇಂದ್ರಗಡದ 
ಅಕ್ಕಡಿಸಾಲಿನ ಕವಿ, ಎ.ಎಸ್.ಮಕಾನದಾರವರು  ಸಾಹಿತ್ಯ ವಲಯದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದು ಅನೇಕ ಮೌಲ್ಯಯುತ ಸಾಹಿತ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ನಿರಂತರ ಪ್ರಕಾಶನದ ಮೂಲಕ ಯುವ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹಿಸುವ ಕಾರ್ಯ ಕೂಡ ಅವಿರತವಾಗಿ ನಡೆಸಿದ್ದಾರೆ ಹೊಸ ಬರಹಗಾರರ ಕೃತಿ ಗಳ ಪ್ರಕಟಣೆ ನಾಡಿನ ಪ್ರತಿಭಾವಂತ ಸಾಧಕರಿಗೆ ಮಕಾನದಾರ ಸಾಹಿತ್ಯ ಪ್ರತಿಷ್ಠಾನದ ಮೂಲಕ ಗುರುತಿಸಿ ಗೌರವಿಸುವ ಕಾರ್ಯ ಸದ್ದಿಲ್ಲದೇ ಸಾಗಿಸಿದ್ದಾರೆ. ಮಕಾನದಾರ ಅವರ ಮೂರು ದಶಕದ ಕಾವ್ಯ ಅಕ್ಕಡಿಸಾಲು ಕವನ ಸಂಕಲನ ಕೃತಿ ಐದು ಭಾಷೆಗಳಿಗೆ ಅನುವಾದಗೊಂಡಿದೆ. ಅಮ್ಮನ ಬಿಕ್ಕಳಿಕ ನಿಲ್ಲಿಸುವಿರಾ ಎನ್ನುವ ಪದ್ಯ ಕುವೆಂಪು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿರುವುದು ವಿಶೇಷವಾಗಿದೆ.
ನ್ಯಾಯಾಂಗಇಲಾಖೆಯಲ್ಲಿದ್ದುಕೊಂಡೆ ತಮ್ಮ ವೃತ್ತಿಯೊಂದಿಗೆ ಸಾಹಿತ್ಯ ವಲಯದಲ್ಲಿ ಅಗಾಧ ಸಾಧನೆಗೈದಿರುವ ಮಕಾನದಾರರು ಈ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಕ್ಕೆಹಿರಿಯ ಸಾಹಿತಿ  ಆರ್.ಕೆ ಭಾಗವಾನ್, ತಾಲೂಕಾ ಕಸಾಪ ಅಧ್ಯಕ್ಷ ಐ.ಎ.ರೇವಡಿ, ಪತ್ರ ಕರ್ತ ದಾವಲಸಾಬ ತಾಳಿಕೋಟಿ, ಜಿ.ಎಸ್.ವಡ್ಡರ, ಎ.ಡಿ.ಕೋಲಕಾರ, ಎಮ್.ಎಚ್.ಕೋಲಕಾರ, ಫಯಾಜ್ ತೋಟದ, ಪುರಸಭೆ ಸದಸ್ಯ ಶಿವರಾಜ್ ಘೋರ್ಪಡೆ,ಹೋರಾಟಗಾರ  ಎಮ್.ಎಸ್.ಹಡಪದ, ಯು ಆರ್ ಚೆನ್ನಮ್ಮನವರ,  ಅಭಿನಂದನೆ ಸಲ್ಲಿಸಿದ್ದಾರೆ

ವರದಿ:-ವಿದ್ಯಾಶ್ರೀ. ಬಿ.ಬಳ್ಳಾರಿ

LEAVE A REPLY

Please enter your comment!
Please enter your name here