ಕೊಳಚೆ ನೀರಿನಲ್ಲಿ ಗ್ರಾಮಸ್ಥರ ಜೀವನ; ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು ಕತ್ತೆ ಕಾಯುವುದರಲ್ಲಿ ಬ್ಯುಸಿ.! ಅಭಿವೃದ್ಧಿ ಶೂನ್ಯ.

0
340

ಕೊಟ್ಟೂರು:ಜುಲೈ:04:-ಸರ್ಕಾರವು ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಗ್ರಾಮ ಪಂಚಾಯಿತಿಗಳಿಗೆ ಪ್ರತಿ ವರ್ಷ ತನ್ನದೇ ಆದ ಅನುದಾನವನ್ನು ಬಿಡುಗಡೆ ಮಾಡುತ್ತೆ ಆದರೆ ಈ ಗ್ರಾಮ ಪಂಚಾಯತಿಗೆ ಅನುದಾನ ಬಿಡುಗಡೆ ಮಾಡಿದ್ದರೂ, ಈ ಗ್ರಾಮಕ್ಕೆ ಅಭಿವೃದ್ಧಿ ಮರಿಚಿಕೆಯಾಗಿದೆ!

ತಾಲೂಕಿನ ಕೆ ಅಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚಪ್ಪರದಹಳ್ಳಿ ಗ್ರಾಮದ ವಾಗಿದ್ದು, ಈ ಗ್ರಾಮದಲ್ಲಿ ಅಭಿವೃದ್ಧಿ ಮರಿಚಿಕೆಯಾಗಿಯೇ ಉಳಿದಿದೆ. ಈ ಗ್ರಾಮವು ಸುಮಾರು 2000 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ರಂಗಮಂದಿರದ ಮುಂಭಾಗದಲ್ಲಿ ಚರಂಡಿಯ ತುಂಬ ಹೂಳು ತುಂಬಿದ್ದು ಹಲವು ವರ್ಷಗಳಿಂದ ಸ್ವಚ್ಛತೆ ಇಲ್ಲದೆ ಒಂದೇ ಕಡೆ ನೀರು ಶೇಖರಣೆಯಾಗಿದ್ದು ಇದರಿಂದ ಸೊಳ್ಳೆಗಳು ಹೆಚ್ಚಾಗಿ ರೋಗರುಜಿನಿಗಳನ್ನು ಎದುರಿಸುವಂತಹ ಪರಿಸ್ಥಿತಿ ಜನರಿಗೆ ಬಂದಿದೆ.

ತಿಪ್ಪೆಗಳು ಊರಿನ ಒಳಗಡೆ ಇರುವುದರಿಂದ ವಾಸನೆ ಉಂಟಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಇದ್ದು, ಈ ಘಟಕಕ್ಕೆ ಸರಿಯಾದ ವ್ಯವಸ್ಥೆ ಇಲ್ಲ, ಈ ಘಟಕ ತುಕ್ಕು ಹಿಡಿದಿದೆ. ಶುದ್ಧ ನೀರನ್ನು ತುಂಬಲು ಹೋಗುವಾಗ ಜನರು ಎಷ್ಟೋ ಬಾರಿ ಕಾಲು ಜಾರಿ ಬಿದ್ದಿರುವ ಸನ್ನಿವೇಶಗಳು ಇವೆ. ಪುರಾತನದ ಬಾವಿ ಇದ್ದು ಈ ಬಾವಿಗೆ ಯಾವುದೇ ತಡೆಗೋಡೆ ನಿರ್ಮಿಸಿಲ್ಲ.

ಈ ಬಾವಿಯ ಹತ್ತಿರವೇ ಮಕ್ಕಳು ಆಟವಾಡುತ್ತಾರೆ. ಆಟವಾಡುವಾಗ ಆಯ ತಪ್ಪಿ ಮಕ್ಕಳು ಬಾವಿ ಒಳಗೆ ಬಿದ್ದರೆ ಹೇಗೆ ಎಂಬ ಪ್ರಶ್ನೆ ಜನರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಮಕ್ಕಳು ಭಯದ ವಾತಾವರಣದಲ್ಲಿ ಆಟವಾಡುವ ಪರಿಸ್ಥಿತಿ ಇದೆ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೂ ಮತ್ತು ಜನಪ್ರತಿನಿಧಿಗಳಿಗೂ ಹಲವು ಬಾರಿ ಮನವಿ ಮಾಡಿಕೊಂಡರು ಸ್ಪಂದಿಸುತ್ತಿಲ್ಲ ಎಂದು ಜನರು ತಮ್ಮ ಆಕ್ರೋಶವನ್ನು ಮಾಧ್ಯಮ ಮುಂದೆ ವ್ಯಕ್ತಪಡಿಸಿದರು.

ಈ ಸಮಸ್ಯೆಯ ಬಗ್ಗೆ ಕೆ ಅಯ್ಯನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.

-ಕೊಟ್ರೇಶ್
ಗ್ರಾಮ ಪಂಚಾಯತಿಯ ಸದಸ್ಯ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here