ಬಳ್ಳಾರಿ ಜಿಲ್ಲಾ (ಗ್ರಾಮೀಣ) ಮಹಿಳಾ ಕಾಂಗ್ರೆಸ್ ವತಿಯಿಂದ ಮೈಸೂರು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಖಂಡಿಸಿ ಸಂಡೂರುನಲ್ಲಿ ಪ್ರತಿಭಟನೆ.

0
292

ಸಂಡೂರು:ಆಗಸ್ಟ್:೨೭; ಮೈಸೂರು ಚಾಮುಂಡಿ ಬೆಟ್ಟದ ಲಲಿತಾದ್ರಿಪುರ ಬೆಟ್ಟದಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತಾ ಸರ್ಕಾರ ಹಾಗೂ ಅತ್ಯಾಚಾರಿ ವಿರುದ್ಧ ಘೋಷಣೆಗಳನ್ನು ಕೂಗುತ್ತ ತಾಲೂಕು ಕಚೇರಿಯ ಅವರಣದಲ್ಲಿ ತಹಶೀಲ್ದಾರ್ ಗೆ ಮನವಿಪತ್ರವನ್ನು ಸಲ್ಲಿಸಿದರು

ಮನವಿಪತ್ರವನ್ನು ಸಲ್ಲಿಸಿ ಬಳ್ಳಾರಿ ಜಿಲ್ಲಾ (ಗ್ರಾಮೀಣ)ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಆಶಾಲತಾ ಸೋಮಪ್ಪ ಅವರು ಮಾತನಾಡುತ್ತ…

ಮೈಸೂರಿನ ಚಾಮುಂಡಿ ಬೆಟ್ಟದ ಲಲಿತಾದ್ರಿಪುರ ಬೆಟ್ಟದಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ನಡೆದಿರುವುದು ಅತ್ಯಂತ ದುರದೃಷ್ಟಕರ ಹಾಗೂ ಖಂಡನಿಯವಾಗಿದೆ, ಮೈಸೂರು ರಾಜ್ಯದ ಹಿರಿಮೆಗೆ ತನ್ನದೇ ವೈಶಿಷ್ಟತೆಯನ್ನು ಪಡೆದಂತಹ ವಿಶ್ವ ಪರಂಪರೆಯ ಪ್ರವಾಸಿ ತಾಣವಾಗಿದ್ದು, ಇಂತಹ ಅಹಿತಕರ ಘಟನೆಯ ಬಗ್ಗೆ ರಾಜ್ಯದ ಗೃಹ ಸಚಿವರು ತೀವ್ರ ಲಘುವಾಗಿ ಮಾತನಾಡಿದ್ದಾರೆ. ವಿದ್ಯಾರ್ಥಿನಿಯು ಅ ಸಮಯದಲ್ಲಿ ಅಲ್ಲಿಗೆ ಹೋಗಿರುವುದೇ ಮೊದಲ ತಪ್ಪು ಎಂದು ಹೇಳಿರುವುದು ಗೃಹ ಸಚಿವರ ಕಾರ್ಯ ವೈಖರಿ ಮತ್ತು ಆಡಳಿತ ವೈಫಲ್ಯ ಎತ್ತಿ ತೋರಿಸುತ್ತದೆ. ಅ ಹೆಣ್ಣುಮಗಳು ಅಷ್ಟು ಹೊತ್ತಿಗೆ ಏಕೆ ಹೋಗಬೇಕಿತ್ತು ಎಂದು ಸಚಿವರು ಕೇಳುತ್ತಾರೆ ಅಂದರೆ ಈ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ ಎಂಬುದು ಇವರ ಮಾತಿನಿಂದ ಸ್ಪಷ್ಟವಾಗಿ ಘೋಚರಿಸುತ್ತದೆ.

ಈ ಘಟನೆಯಲ್ಲಿ ಪೋಲೀಸರ ವೈಫಲ್ಯ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್. ಟಿ.ಸೋಮಶೇಖರ್ ಹೇಳಿರುವುದು ಮೊದಲು ತಾವು ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮಂತ್ರಿಗಳ ಮಾತುಗಳಿಂದ ಮೈಸೂರು ಜಿಲ್ಲಾಡಳಿತದ ವೈಫಲ್ಯ ಎತ್ತಿ ತೋರಿಸುತ್ತದೆ ಮೈಸೂರು ಘಟನೆ ಕಾನೂನು ಸುವ್ಯಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಸರ್ಕಾರ ನಿದ್ರೆಯಿಂದ ಎದ್ದೇಳುವ ಜೊತೆಗೆ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ, ಇಂತಹ ದುರ್ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿ ಮಹಿಳೆಯರಿಗೆ ರಕ್ಷಣೆ ನೀಡಬೇಕೆಂದು ಅಗ್ರಹಿಸುತ್ತಾ ಈ ಪ್ರತಿಭಟನೆಯ ಮೂಲಕ ಸರ್ಕಾರ ತಪ್ಪಿತಸ್ಥರನ್ನು ಈ ಕೂಡಲೇ ಬಂಧಿಸಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕೆಂದು ಬಳ್ಳಾರಿ ಜಿಲ್ಲಾ (ಗ್ರಾಮೀಣ)ಮಹಿಳಾ ಕಾಂಗ್ರೇಸ್ ವತಿಯಿಂದ ಆಗ್ರಹಿಸಿದರು.

ಈ ಸಂಧರ್ಭದಲ್ಲಿ ಬಳ್ಳಾರಿ ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೇಸ್ ಅಧ್ಯಕ್ಷರಾದ ಆಶಾಲತಾ ಸೋಮಪ್ಪ, ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಅನಿತಾ ವಸಂತ್ ಕುಮಾರ್, ಪುಷ್ಪಾ ಉಪಾಧ್ಯಕ್ಷರು ಬಳ್ಳಾರಿ ಜಿಲ್ಲಾ ಮಹಿಳಾ ಕಾಂಗ್ರೇಸ್, ಈರಮ್ಮ ಮಹಿಳಾ ಕಾಂಗ್ರೇಸ್ ತಾಲೂಕು ಅಧ್ಯಕ್ಷರು,ರೇಖಾ ವಕೀಲರು-ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರು, ಹೆಚ್.ಸುಮಿತ್ರಾ, ಈಶ್ವರಿ, ಎಸ್.ಜಿ.ಸವಿತಾ, ಸಿ.ಎಲ್ ಕೌಶಲ್ಯ, ಸುಧಾ ವಿ ಘೋರ್ಪಡೆ, ಸುಷ್ಮಾ ಎಂ ಜೆ, ಅನುಪಮ, ಕವಿತಾ ಪಿ,ಸಂಧ್ಯಾ ಹಾಗೂ ಪಕ್ಷದ ಮಹಿಳಾ ಕಾರ್ಯಕರ್ತೆಯರು ಇತರೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಬಾಗಿಯಾಗಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here