ಅಗ್ನಿ ಶಾಮಕ ಸೇವಾ ಸಪ್ತಾಹ ಹಿನ್ನೆಲೆ ಕೊಟ್ಟೂರು ಅಗ್ನಿ ಶಾಮಕ ದಳದಿಂದ ಶಾಲೆ ಮಕ್ಕಳಿಗೆ ಅಗ್ನಿ ಶಮನದ ಜಲ ಪ್ರಾತ್ಯಕ್ಷಿಕೆ.

0
913

ಕೊಟ್ಟೂರು:19:ಏ: ಬೆಂಕಿ ಮನುಷ್ಯನಿಗೆ ಪೂರಕವು ಹೌದು ಮಾರಕವು ಹೌದು ಇದನ್ನು ಬಳಸುವಲ್ಲಿ ಉದಾಸೀನತೆ ತೋರಿದರೆ ಸಣ್ಣ ಪ್ರಮಾಣದ ಬೆಂಕಿ ಉಲ್ಬಣಗೊಂಡು ಅನಾಹುತ ಉಂಟು ಮಾಡುತ್ತೆ ಹಾಗಾಗಿ ಮನೆಯಲ್ಲಿರುವ ಎಲ್.ಪಿ.ಜಿ ಸಿಲಿಂಡರ್ ಮತ್ತು ವಿದ್ಯುತ್ ಒಲೆಗಳ ಬಳಕೆ ಹಾಗೂ ಬೆಂಕಿ ಪೂರಿತ ಇತರೆ ಕೆಲಸಗಳಲ್ಲಿ ಸದಾ ಎಚ್ಚರಿಕೆಯಿಂದರಬೇಕು ಎಂದು ಕೊಟ್ಟೂರು ಅಗ್ನಿ ಶಾಮಕ ಠಾಣಾಧಿಕಾರಿ ಜೆ.ಲಕ್ಷ್ಮಿಕಾಂತ ಶಾಸ್ತ್ರೀ ಹೇಳಿದರು.

ಪಟ್ಟಣದ ಜ್ಞಾನ ಸುಧಾ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಅಗ್ನಿ ಶಾಮಕ ಸೇವಾ ದಿನಾಚರಣೆ ಹಾಗೂ ಏ- 14 ರಿಂದ 20 ರ ವರೆಗೆ ಸೇವಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಗ್ನಿ ಶಾಮಕ ಸಿಬ್ಬಂದಿ ಕೆ.ಹುಸೇನ್ ಶೇಖ್ ಅಗ್ನಿ ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿ ಅಗ್ನಿ ಸ್ಥಿತಿ ಮತ್ತು ಸ್ಥಳ ಹಾಗೂ ಯಾವರೀತಿ ಅವಘಡ ಸಂಬಂಧಿಸಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರೆ ಅದಕ್ಕೆ ಸಂಬಂಧಿಸಿದ ನಿಷ್ಕ್ರಿಯ ಸಾಮಾಗ್ರಿಗಳನ್ನು ತರಲು ಸಹಾಯಕವಾಗುತ್ತೆ ಎಂದು ಹೇಳಿ.

ನಂತರ ಬೆಂಕಿ ಹುರಿಯಲು ಬೇಕಾದ ಅವಶ್ಯಕ ವಸ್ತುಗಳು ಮತ್ತು ಬೆಂಕಿ ಅನಾಹುತ ಉಂಟಾದಾಗ ಕೈಗೊಳ್ಳಬೇಕಾದ ಕ್ರಮಗಳು, ಎಲ್.ಪಿ.ಜಿ ಸಿಲಿಂಡರ್ ಗಳ ನಿರ್ವಾಹಣೆ,ಅಗ್ನಿ ನಂದಕಗಳ ವಿಧಗಳು ಮತ್ತು ಉಪಯೋಗಿಸುವ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದರು.

ನೀರಿನಲ್ಲಿ ಮತ್ತು ಪ್ರವಾಹದಲ್ಲಿ ಸಿಲಿಕಿಕೊಂಡವರನ್ನು ರಕ್ಷಿಸುವ ವಿಧಾನ ಸೇರಿದಂತೆ ಹಲವಾರು ಕ್ರಮಗಳ ಬಗ್ಗೆ ಉಪನ್ಯಾಸ ನೀಡಿ ಮಕ್ಕಳಿಗೆ ಮತ್ತು ಪೋಷಕರಿಗೆ ಹಾಗೂ ಶಿಕ್ಷಕ ವೃಂದದವರಿಗೆ ಅಗ್ನಿ ಅವಘಡ ಮತ್ತು ಶಮನದ ಬಗ್ಗೆ ಜಾಗೃತಿ ಮೂಡಿಸಿದರು.

ನಂತರ ಶಾಲಾ ಆವರಣದಲ್ಲಿ ಅಗ್ನಿ ಶಾಮಕ ದಳದ ಲಕ್ಷ್ಮಣ, ಶಶಿಧರ, ಮಂಜುನಾಥ ನಾಯ್ಕ್,ಸುನೀಲ್ ನಾಯ್ಕ್,ಜಗನಾಥ ರೆಡ್ಡಿ,ಮೋಹನ್ ತಂಡ ಅಣಕು ಪ್ರದರ್ಶನದ ಮೂಲಕ ಜಲ ವಾಹನದಿಂದ ಪ್ರಾತ್ಯಕ್ಷಿಕೆ ನಡೆಸಿದರು.

ಉಪನ್ಯಾಸ ಮತ್ತು ಜಲ ವಾಹನ ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಜ್ಞಾನ ಸುಧಾ ಶಾಲೆಯ ಮುಖ್ಯೋಪಾಧ್ಯಾಯರು ಗೀತಾ ಮತ್ತು ಶಾಲಾ ಶಿಕ್ಷಕರಾದ ರಾಜಶೇಖರ್ ಸೇರಿದಂತೆ ಉಳಿದ ಶಿಕ್ಷಕರು ಮತ್ತು ಪೋಷಕರು, ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.ಶಿಕ್ಷಕಿ ವೀಣಾ ಪ್ರಾರ್ಥಿಸಿದರು, ಕರಿಬಸಪ್ಪ ಶಿಕ್ಷಕರು ಸ್ವಾಗತಿಸಿದರು, ಸಹನ ಶಿಕ್ಷಕಿ ನಿರೂಪಣೆ ನೆರವೇರಿಸಿದರು, ಚಂದ್ರನಾಯ್ಕ ವಂದನಾರ್ಪಣೆ ನೆರವೇರಿಸಿದರು.

ಅಗ್ನಿ ಸಂಭವಿಸಿದ ತಕ್ಷಣ ಬೆಂಕಿ ಸ್ಥಿತಿ ಅರಿತು ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿ ,ಸ್ಥಳ, ಯಾವುದರಿಂದ ಅಗ್ನಿ ಉಂಟಾಗಿದೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಕರೆ.

ಮನೆಯಲ್ಲಿ ಎಲ್.ಪಿ.ಜಿ ಸಿಲಿಂಡರ್ ಬಳಕೆಯಲ್ಲಿ ಸದಾ ಜಾಗೃತಿ ಇರಲಿ.

ಪ್ರತಿಯೊಬ್ಬರಿಗೂ ಅಗ್ನಿ ಶಮನದ ಜ್ಞಾನ ಅತ್ಯವಶ್ಯಕ.

ವಿದ್ಯುತ್,ಇಂದನ ಮತ್ತು ಎಲ್.ಪಿ.ಜಿ ಅಗ್ನಿ ಅವಘಡದ ಶಮನಕ್ಕೆ ಒಂದೇ ವಿಧಾನ ಬಳಕೆ ಸಲ್ಲದು.

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here