ಶ್ರೀ ಕೋಟೆ ಗುಡ್ಡ ಮಾರಮ್ಮನ ಕಾಣಿಕೆ ಹಣ ಉಳ್ಳವರ ಪಾಲು ಇದೆಂತಾ ದುರಂತ ನೋಡಿ..!

0
392

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ಗಡಿಭಾಗದ ಗ್ರಾಮ ಅಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಶ್ರೀ ಕೋಟೆ ( ಕೊಟ್ಟ )ಗುಡ್ಡ ಮಾರಮ್ಮನ ದೇವಸ್ಥಾನ ಈ ದೇವಸ್ಥಾನ ಪುರಾತನ ಕಾಲದಿಂದಲೂ ಇತಿಹಾಸವನ್ನು ಹೊಂದಿದ ಕೋಟೆ ಗುಡ್ಡ ಮಾರಮ್ಮ ದೇವಸ್ಥಾನಕ್ಕೆ ಪುರಾತನ ಕಾಲದಿಂದಲೂ ಒಂದು ವ್ಯವಸ್ಥಿತವಾದ ವ್ಯವಸ್ಥೆಯನ್ನು ಮಾಡುವವರು ಯಾರು ಇಲ್ಲ ಪ್ರತಿವರ್ಷ ಡಿಶಂಬರ್ ಮತ್ತು ಜನವರಿ ತಿಂಗಳಲ್ಲಿ ಪ್ರತಿ ಮಂಗಳವಾರ ಶುಕ್ರವಾರ ಲಕ್ಷಾಂತರ ಭಕ್ತರು ಸೇರುತ್ತಾರೆ ಶ್ರೀ ಕೋಟೆ ಗುಡ್ಡ ಮಾರಮ್ಮನ ದರ್ಶನಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಮತ್ತು ಬೇರೆ ಬೇರೆ ರಾಜ್ಯಗಳಿಂದ ಭಕ್ತಾದಿಗಳು ಅಮ್ಮನ ದರ್ಶನಕ್ಕೆ ಬರುತ್ತಾರೆ ಭಕ್ತಾದಿಗಳ ತನ್ನ ಸಕಲ ಇಷ್ಟಾರ್ಥಗಳು ಈಡೇರಿದಾಗ ಶ್ರೀ ಕೋಟೆಗುಡ್ಡ ಮಾರಮ್ಮ ದೇವಸ್ಥಾನಕ್ಕೆ ಭಕ್ತಾದಿಗಳು ಸಾಕಷ್ಟು ಕಾಣಿಕೆಯನ್ನು ನೀಡುತ್ತಾರೆ ಅಮ್ಮನಿಗೆ ನೀಡಿದ ಕಾಣಿಕೆಯನ್ನು ಮತ್ತು ಕಾಣಿಕೆ ಡಬ್ಬಿಗಳನ್ನು ಉಳ್ಳವರ ಪಾಲಾಗುತ್ತದೆ ಎಂದು ಭಕ್ತಾದಿಗಳು ಬೇಸರ ವ್ಯಕ್ತಪಡಿಸಿದರು ಪ್ರತಿ ಮಂಗಳವಾರ ಶುಕ್ರವಾರ ಸಾಕಷ್ಟು ಭಕ್ತಾದಿಗಳು ಅಮ್ಮನ ದರ್ಶನಕ್ಕೆ ಬರುತ್ತಾರೆ ಶ್ರೀ ಕೋಟೆಗುಡ್ಡ ಮಾರಮ್ಮ ಪುರಾತನ ಕಾಲದ ದೇವಸ್ಥಾನ ಈ ದೇವಸ್ಥಾನಕ್ಕೆ ಮಕ್ಕಳ ಆಗದಿದ್ದವರು ಅಮ್ಮನ ಹತ್ತಿರ ಬಂದು ದರ್ಶನ ಮಾಡಿಕೊಂಡು ಹೋಗುತ್ತಾರೆ ಮತ್ತು ರೈತರು ವಿಶೇಷವಾಗಿ ಅಮ್ಮನ ದರ್ಶನವನ್ನು ಮಾಡುತ್ತಾರೆ ಏಕೆಂದರೆ ರೈತರು ಸಾಕಿದ ಜಾನುವಾರಗಳಿಗೆ ಮತ್ತು ಕುರಿ ಮೇಕೆಗಳಿಗೆ ಏನಾದರೂ ಕಾಯಿಲೆ ಕಾಣಿಸಿಕೊಂಡರೆ ಅಮ್ಮನ ತೀರ್ಥವನ್ನು ತೆಗೆದುಕೊಂಡು ಹೋಗಿ ಜಾನುವಾರಗಳಿಗೆ ಮತ್ತು ಕುರಿ ಮೇಕೆಗಳಿಗೆ ಪೂಜೆ ಮಾಡಿ ಸಿಂಪಡಿಸಿದರೆ ಕಾಯಿಲೆ ಮಾಯವಾಗಿ ಹೋಗುತ್ತದೆ ಎಂದು ಇಲ್ಲಿನ ರೈತರ ಅಭಿಪ್ರಾಯ.

ಈ ಸಂದರ್ಭದಲ್ಲಿ ಅಪ್ಪೇನಹಳ್ಳಿ ತಾಂಡದ ಯುವಕರು ಮಾತನಾಡಿ ಶ್ರೀ ಕೊಟೆ ಗುಡ್ಡ ಮಾರಮ್ಮ ಪುರಾತನ ಕಾಲದಿಂದಲೂ ಇತಿಹಾಸವನ್ನು ಹೊಂದಿದ ದೇವಸ್ಥಾನ ಆದರೆ ಈ ದೇವಸ್ಥಾನಕ್ಕೆ ಸರಿಯಾದ ವ್ಯವಸ್ಥೆ ಇಲ್ಲ ಹುಚ್ಚಪ್ಪನ ಮದುವೇಲಿ ಉಂಡವನೇ ಜಾಣ ಯಾಕೆಂದರೆ ಈ ದೇವಸ್ಥಾನಕ್ಕೆ ಸಾಕಷ್ಟು ಕಾಣಿಕೆಯನ್ನು ಕೊಡುತ್ತಾರೆ ಆದರೆ ಈ ಕಾಣಿಕೆ ಹಣವನ್ನು ಯಾರು ಬೇಕಾದರೂ ಅವರೇ ತನ್ನ ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ ಮತ್ತು ಕಾಣಿಕೆ ಡಬ್ಬವನ್ನು ಯಾರು ಬೇಕಾದರೂ ಅವರೇ ಇಡುತ್ತಾರೆ ಒಂದು ಕಡೆ ಕಾಣಿಕೆ ಹಣದಲ್ಲಿ ದೇವಸ್ಥಾನವನ್ನು ಅಭಿವೃದ್ಧಿ ಮಾಡುತ್ತಿಲ್ಲ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಸಮುದಾಯ ಭವನವನ್ನು ನಿರ್ಮಿಸಿದ್ದಾರೆ ಈ ಸಮುದಾಯ ಭವನದಲ್ಲಿ ಅನೇಕ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದಾವೆ ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆಯವರು ಮುತ್ತು ಮುಜರಾಯಿ ಇಲಾಖೆಯವರು ಈ ದೇವಸ್ಥಾನವನ್ನು ವ್ಯವಸ್ಥಿತವಾಗಿ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತ ಮತ್ತು ಸಂಬಂಧಪಟ್ಟ ಅಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಸಮುದಾಯ ಭವನವನ್ನು ತಮ್ಮ ವಶಕ್ಕೆ ಪಡೆದುಕೊಂಡು ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಇಲ್ಲ ಅಂದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯ ಕಚೇರಿಯ ಮುಂದೆ ದರಣೆಯನ್ನು ಮಾಡುತ್ತೇವೆ ಅಪೇನಹಳ್ಳಿ ತಾಂಡ ಯುವಕರು ಎಚ್ಚರಿಕೆ ನೀಡಿದ್ದಾರೆ.

ವರದಿ :- ರಾಜಶೇಖರ್ (ರಾಜಣ್ಣ)

LEAVE A REPLY

Please enter your comment!
Please enter your name here