ಬಳ್ಳಾರಿ ಕರ್ನಾಟಕ ಲೋಕಾಯುಕ್ತ ಠಾಣೆಯ ಟ್ಯಾಪ್ ಪ್ರಕರಣದಲ್ಲಿ ಕೆ. ಶ್ರೀನಿವಾಸ,ದ್ವಿತೀಯ ದರ್ಜೆ ಸಹಾಯಕ ಹಾಗೂ ರೆಕಾರ್ಡ್ ಕೀಪರ್, ತಹಶೀಲ್ದಾರರ ಕಚೇರಿ ಸಂಡೂರು ಇವರಿಗೆ ಶಿಕ್ಷೆ.

0
126

ಬಳ್ಳಾರಿ:ದಿನಾಂಕ 22.05.2014 ರಂದು ಪಿರ್ಯಾದುದಾರರಾದ ಶ್ರೀ ಟಿ. ನರಸಿಂಹ ತಂದೆ ಕುಮಾರಸ್ವಾಮಿ, ಮೆಕ್ಯಾನಿಕ್, ವಾಸ ಪಿಂಜಾರ್ ಓಣಿ, ಸಂಡೂರು ರವರು ಆರೋಪಿತರಾದ ಶ್ರೀ. ಕೆ ಶ್ರೀನಿವಾಸ, ದ್ವಿತೀಯ ದರ್ಜೆ ಸಹಾಯಕ ಹಾಗೂ ರೆಕಾರ್ಡ್ ಕೀಪರ್, ತಹಶೀಲ್ದಾರ್ ರ ಕಚೇರಿ ಸಂಡೂರು, ಬಳ್ಳಾರಿ ಜಿಲ್ಲೆ ಇವರು ಸಂಡೂರು ಹೋಬಳಿ ದೌಲತಪುರ ಗ್ರಾಮದ ಸರ್ವೇ ನಂ,332.ನೇದ್ದರ ರುದ್ರಭೂಮಿಯ ಹಳೆ ಪಹನಿಗಳ ದೃಡೀಕೃತ ಪ್ರತಿಗಳನ್ನು ವಿತರಿಸಲು ರೂ.500/-ಗಳ ಲಂಚವನ್ನು ಬೇಡಿರುತ್ತಾರೆಂಬ ಆರೋಪದ ಅಡಿಯಲ್ಲಿ ಶ್ರೀ ಗುರಣ್ಣ ಎಸ್. ಹೆಬ್ಬಾಳ, ಪೊಲೀಸ್ ನಿರೀಕ್ಷಕರು ಕರ್ನಾಟಕ ಲೋಕಾಯುಕ್ತ ಠಾಣೆ ಬಳ್ಳಾರಿ, ಇವರು ಠಾಣಾ ಅಪರಾಧ ಸಂ.03/2017 ಕಲಂ:7.13(1)(ಡಿ)ಅದಾರ 13(2)ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಕೈಗೊಂಡು, ಪೂರೈಸಿ ದಿನಾಂಕ:05/12/2014 ರಂದು ಬಳ್ಳಾರಿ ಘನ ಪ್ರದಾನ ಜಿಲ್ಲಾ ಮತ್ತು ಸತ್ರ(ವಿಶೇಷ)ನ್ಯಾಯಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದು, ಸದರಿ ನ್ಯಾಯಾಲಯವು ವಿಶೇಷ ಮೊಕದ್ದಮೆ ಸಂ,147/2014 ರಂದು ನೀಡಿದ್ದು ಇರುತ್ತದೆ, ನಂತರ ಈ ಪ್ರಕರಣವು ಸದರಿ ಘನ ಪ್ರದಾನ ಜಿಲ್ಲಾ&ಸತ್ರ(ವಿಶೇಷ)ನ್ಯಾಯಾಲಯ,ಬಳ್ಳಾರಿ ರವರ ಮುಂದೆ ವಿಚಾರಣೆ ನಡೆದು ಈ ದಿನ ದಿನಾಂಕ:12/02/2021 ರಂದು ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾoಜಲಿದೇವಿ ರವರು ಸದರಿ ಆರೋಪಿತನಿಗೆ 4 -ವರ್ಷ ಕಠಿಣ ಶಿಕ್ಷೆ ಮತ್ತು ರೂ,20.000/- ಗಳ ದಂಡ ಈ ಮೊತ್ತವನ್ನು ಕಟ್ಟದಿದ್ದಲ್ಲಿ 1-ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ.

ಸದರಿ ಪ್ರಕರಣವನ್ನು ಶ್ರೀ. ಎಸ್. ಸತೀಶ್ ಪೊಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಬಳ್ಳಾರಿ ರವರು ಪೈರವಿ ಅಧಿಕಾರಿಯಾಗಿದ್ದು, ಶ್ರೀ ಬಿ.ವಿ. ಬಸರಾಜ ಸರ್ಕಾರಿ ವಿಶೇಷ ಅಭಿಯೋಜಕರು, ಬಳ್ಳಾರಿ ರವರು ಸರ್ಕಾರದ ಪರವಾಗಿ ಮಾನ್ಯ ನ್ಯಾಯಾಲಯದಲ್ಲಿ ವಾದ ಮಂಡಿಸಿರುತ್ತಾರೆ.

LEAVE A REPLY

Please enter your comment!
Please enter your name here