ಮೊಳಕಾಲ್ಮುರು: ಉದ್ಯೋಗ ಖಾತ್ರಿ ಕೆಲಸದಲ್ಲಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿರುವ ಅಧಿಕಾರಿಗಳು/ಏಜಂಟರುಗಳು.

0
96

ಮೊಳಕಾಲ್ಮುರು : ಮೊಳಕಾಲ್ಮುರು ತಾಲ್ಲೂಕಿನಲ್ಲಿ ಉದ್ಯೋಗ ಖಾತರಿ ಯೋಜನೆ ಅಂದರೆ ದುಡ್ಡಿನ ಕಾತ್ರೆ ಯೋಜನೆ ಅಂದರೂ ತಪ್ಪಾಗಲಾರದು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕೋಟಿಗಟ್ಟಲೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಿಲ್ ಮಂಜೂರು ಮಾಡಿರುತ್ತಾರೆ ಪ್ರತಿಯೊಂದು ಕೆಲಸಕ್ಕೆ ಜೆಸಿಬಿ ಯಂತ್ರಗಳನ್ನು ಉಪಯೋಗಿಸಿರುತ್ತಾರೆ ಇನ್ನು ಕೂಲಿಕಾರರ ಪಾಡೇನು ಕೂಲಿಕಾರರ ಹೆಸರಲ್ಲಿ ಹೆಸರಿಗೆ ಮಾತ್ರ NMR ತೆಗೆಯುತ್ತಾರೆ ಆದರೆ ಕೂಲಿಕಾರರನ್ನು ಕೆಲಸಕ್ಕೆ ಕರೆಯುವುದಿಲ್ಲ.

ಜೆಸಿಬಿ ಯಂತ್ರಗಳನ್ನು ಕೆಲಸಕ್ಕೆ ಕರೆಯುತ್ತಾರೆ ಎಂದು ಮೊಳಕಾಲ್ಮೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಕೂಲಿಕಾರರು ಅಧಿಕಾರಿಗಳನ್ನು ಪೊಳು  ಮಾಡುತ್ತಾರೆ ಉದ್ಯೋಗ ಖಾತ್ರಿ ಯೋಜನೆ ಅಂದರೆ ಯಾವುದೇ ಕಾಮಗಾರಿಯನ್ನು ಉದ್ಯೋಗ ಚೀಟಿ ಹೊಂದಿದ ಕೂಲಿಕಾರರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಬೇಕೆಂದು ಕೇಂದ್ರ ಸರ್ಕಾರದ ಆದೇಶ ಆದರೆ ಕೇಂದ್ರ ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದೆ ಜೆಸಿಬಿ ಯಂತ್ರಗಳನ್ನು ಬಳಸಿ ಒಂದೊಂದು ಗ್ರಾಮಪಂಚಾಯಿತಿಯಲ್ಲಿ ಕೋಟಿಗಟ್ಟಲೆ ಹಣ ಲಪಟಾಯಿಸಿದ್ದಾರೆ ನೋಡಿ ಉದ್ಯೋಗ ಚೀಟಿ ಹೊಂದಿದ ಕೂಲಿಕಾರರ ಹೆಸರಲ್ಲಿ ಹಣ ಹಾಕುತ್ತಾರೆ ಆ ಹಣವನ್ನು ಕೂಲಿಕಾರರ ಕಡೆಯಿಂದ ಹಣವನ್ನು ಬಿಡಿಸಿಕೊಳ್ಳುತ್ತಾರೆ ಅವರಿಗೆ 300 ರಿಂದ 500 ರೂಪಾಯಿ ಕೊಟ್ಟು ನಿಮಗೆ ಅದು ಮಾಡುತ್ತೇವೆ ಇದು ಮಾಡಿಸುತ್ತೇವೆ ಹೇಳಿ ಕೈತೊಳೆದುಕೊಳ್ಳುತ್ತಾರೆ ಹೀಗೆ ಉದ್ಯೋಗಖಾತ್ರಿ ದುಡ್ಡು ಬಿಡಿಸುವುದು ಅಂದರೆ ಬಹಳ ಸುಲಭ ಪ್ರತಿಯೊಂದು ಹಳ್ಳಿಯಲ್ಲಿ ನಾಲ್ಕೈದು ಯುವಕರು ಹಣವನ್ನು ಡ್ರಾ ಮಾಡುತ್ತಾರೆ ಸಂಬಂಧಪಟ್ಟ ಉದ್ಯೋಗ ಖಾತ್ರಿ ಕೆಲಸ ಮಾಡಿಸಿದ ಸದಸ್ಯರು ಅಥವಾ ಅಧ್ಯಕ್ಷರು ಆ ಯುವಕರನ್ನು ಕರೆದುಕೊಂಡು ಹೋಗಿ ಫಲಾನುಭವಿ ಕಡೆಯಿಂದ ಹೆಬ್ಬೆರಳಿನ ಗುರುತನ್ನು ಹಾಕಿಸಿಕೊಂಡು ಅವರಿಗೆ ಬೇಕಾದಾಗ ಹಣವನ್ನು ಡ್ರಾ ಮಾಡುತ್ತಾರೆ ಎಂದು ಜನರು ಹೇಳುತ್ತಾರೆ ಮೊಳಕಾಲ್ಮೂರು ತಾಲೂಕಿನಲ್ಲಿ ಪ್ರತಿಯೊಂದು ಉದ್ಯೋಗ ಖಾತ್ರಿ ಕೆಲಸ ಜೆಸಿಬಿ ಯಂತ್ರದಿಂದ ಕೆಲಸ ಮಾಡುತ್ತಾರೆ ಜೆಸಿಬಿ ಕೆಲಸ ಮಾಡುವುದನ್ನು ಇಲ್ಲಿನ ಅಧಿಕಾರಿಗಳು ನೋಡಿದರೂ ಸಹ ತಿರುಗಿ ನೋಡದ ಹಾಗೆ ಹೋಗುತ್ತಾರೆ ಅಂದರೆ ಮೊಳಕಾಲ್ಮೂರು ತಾಲೂಕಿನ ಉದ್ಯೋಗ ಖಾತ್ರಿ ಕೆಲಸಕ್ಕೆ ಕೇಂದ್ರ ಸರ್ಕಾರವೇನಾದರೂ ನೀವುಗಳು ಜೆಸಿಬಿ ಯಂತ್ರದಿಂದ ಕೆಲಸ ಮಾಡಿಸಿ ಎಂದು ಆದೇಶ ಮಾಡಿರಬಹುದಾ..?

ಇನ್ನು ಮೊಳಕಾಲ್ಮೂರು ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಸೋಷಿಯಲ್ ಆಡಿಟ್ ಎಂದು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಡಿಟ್ ಮಾಡುತ್ತಾರೆ ಜೆಸಿಬಿ ಯಂತ್ರದಿಂದ ಕೆಲಸ ಮಾಡಿಸಿದ್ದನ್ನು ಏನೆಂದು ಆಡಿಟ್ ಮಾಡುತ್ತಾರೆ ಸೋಷಿಯಲ್ ಆಡಿಟ್ ಮಾಡುವ ಸಿಬ್ಬಂದಿ ಎದುರೇ ಜೆಸಿಬಿ ಯಂತ್ರದಿಂದ ಕೆಲಸ ಮಾಡಿದರೂ ಸಹ ಕಣ್ಣಿದ್ದರೂ ಕುರುಡರಂತೆ ಸಾಗಿ ಹೋಗುತ್ತಾರೆ ಮೊಳಕಾಲ್ಮುರು ತಾಲೂಕಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಯಂತ್ರಗಳನ್ನು ಬಳಸಿ ಕೆಲಸ ಮಾಡುತ್ತಾರೆ ಎಂದು ಪಕ್ಕದ ತಾಲೂಕಿನ ಜನರು ಪೊಳು ಮಾಡುತ್ತಾರೆ ಮೊಳಕಾಲ್ಮುರು ತಾಲ್ಲೂಕಿನ ಉದ್ಯೋಗ ಖಾತ್ರಿಯ ಬಗ್ಗೆ ಅನೇಕ ಪತ್ರಿಕೆಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡಿದರೂ ಸಹ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು  ಸಂಬಂಧಪಟ್ಟ ಗ್ರಾಮಪಂಚಾಯಿತಿಯ PDO ಗಳನ್ನು ಅಮಾನತು ಮಾಡಿಲ್ಲ ಆದರೆ ಇಲ್ಲಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಿಂದೆ ನಡೆದಿರುವ ಅಧಿಕಾರಿಯ ದಾರಿಯಲ್ಲಿ ಸಾಗಿ ಹೋಗುತ್ತಾರೆ ತಾಲೂಕು ಪಂಚಾಯಿತಿಯ ಅಧಿಕಾರಿಗಳು ತನ್ನ ಅಧಿಕಾರವನ್ನು ಚಲಾಯಿಸಿದರೆ ಗ್ರಾಮ ಪಂಚಾಯಿತಿಯ ಪಿಡಿಒಗಳು ಅವರವರ ಕೆಲಸವನ್ನು ಜವಾಬ್ದಾರಿಯಿಂದ ಮಾಡುತ್ತಾರೆ ಮೊಳಕಾಲ್ಮೂರು ತಾಲ್ಲೂಕಿನ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಿಮ್ಮ ಪಕ್ಕದ ತಾಲೂಕು ಕೂಡ್ಲಿಗಿ ತಾಲೂಕಿಗೆ ಉದ್ಯೋಗ ಖಾತ್ರಿ ಕೆಲಸ ನಡೆಯುವಾಗ ಒಮ್ಮೆ ಬಂದು ನೋಡಿ ಒಂದೊಂದು ಗ್ರಾಮಪಂಚಾಯಿತಿಯಲ್ಲಿ 500 ರಿಂದ 1000 ಜನರು ಕೂಲಿ ಕೆಲಸವನ್ನು ಮಾಡುತ್ತಾರೆ ಇದು ನಿಜವಾದ ಉದ್ಯೋಗ ಖಾತ್ರಿ ಕೆಲಸ ಕೂಲಿಕಾರರಿಗೆ ಸೇರಬೇಕಾದ ಹಣ ಅವರಿಗೆ ಸೇರುತ್ತದೆ ಮೊಳಕಾಲ್ಮೂರು ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಎಂದರೆ ದುಡ್ಡಿನ ಜಾತ್ರೆ ಯೋಜನೆ ಎಂದು ಕರೆಯುತ್ತಾರೆ ಉದ್ಯೋಗ ಖಾತ್ರಿಗೆ ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿಯ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈಗಾಗಲೇ ನಾವು ಸುದ್ದಿ ಪ್ರಕಟಣೆ ಮಾಡಿರುವುದನ್ನು ಮತ್ತು ದಾಖಲೆಯನ್ನು ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒಮ್ಮೆ ನಾವೇ ಎಲ್ಲಾ ದಾಖಲಾತಿಗಳನ್ನು ತೋರಿಸುತ್ತೇವೆ ಯಾಕೆಂದರೆ ಮೊಳಕಾಲ್ಮೂರು ತಾಲೂಕಿನಲ್ಲಿ ಸುದ್ದಿ ಮಾಡಿದರೆ ಇಲ್ಲಿನ ಸ್ಥಳೀಯ ಜನರು ನೀವುಗಳು ಏನೇ ಸುದ್ದಿ ಮಾಡಿದರು ತಾಲೂಕು ಪಂಚಾಯಿತಿ ಅಧಿಕಾರಿಗಳು ಕಣ್ಣಿದ್ದರೂ ಕುರುಡರಂತೆ ನಟಿಸುತ್ತಾರೆ ಅವರಿಗೆ ಸೇರಬೇಕಾದ ಕಾಂಚಾಣ ಅವರಿಗೆ ಸೇರಿದರೆ ಯಾವ ಕೆಲಸವಾದರೂ ಮಾಡಿದರು ನೋಡುವುದಿಲ್ಲ ಮೊಳಕಾಲ್ಮೂರು ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಆದರೆ ಪತ್ರಿಕೆಯಲ್ಲಿ ಸಹ ಸುದ್ದಿ ಮಾಡಿದರು ಯಾವೊಬ್ಬ ಪಿಡಿಓರವರನ್ನು ಅಮಾನತ್ತು ಮಾಡಿಲ್ಲ ಸಾಮಾನ್ಯ ಜನರು ಪತ್ರಿಕೆ ವರದಿಗಾರರನ್ನು ಪ್ರಶ್ನೆ ಮಾಡುತ್ತಾರೆ.

ವರದಿ :- ನಂದೀಶ್ ನಾಯಕ

LEAVE A REPLY

Please enter your comment!
Please enter your name here