ಬಿಜಿಕೆರೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಜನಸಂಪರ್ಕ ಸಭೆ.!

0
225

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದ ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ಕಸಬಾ ಹೋಬಳಿ ಮಟ್ಟದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿ, ಸರ್ಕಾರಿ ನೌಕರರು ನ್ಯಾಯಯುತವಾಗಿ ಮಾಡಬೇಕಾದ ಕೆಲಸಕ್ಕೆ ಲಂಚ ಪಡೆಯುವುದು ಅಪರಾಧ ಎಂದು ಚಿತ್ರದುರ್ಗ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಡಿವೈಎಸ್‌ಪಿ ಬಸವರಾಜ್‌ ಮಗುದಮ್ ತಿಳಿಸಿದರು. ಅಧಿಕಾರಿಗಳು ತಮ್ಮ ಸೇವೆಗಳಲ್ಲಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಸಾರ್ವಜನಿಕರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡಬೇಕು. ಜನರಲ್ಲಿ ಜಾಗೃತಿ ಮೂಡಿಸಲು ಹೋಬಳಿ ಮಟ್ಟದ ಸಭೆಗಳನ್ನು ನಡೆಸಲಾಗುವುದು ಎಂದರು. ಸಾರ್ವಜನಿಕ ಹುದ್ದೆ ಬಳಸಿಕೊಂಡು ಬೇರೆ ರೀತಿಯ ವ್ಯವಹಾರ ನಡೆಸುವುದು, ಅಕ್ರಮ ಆಸ್ತಿಗಳಿಗೆ, ಸರ್ಕಾರಿ ಹುದ್ದೆ ದುರ್ಬಳಕೆ ಮಾಡಿಕೊಂಡು ಅವ್ಯವಹಾರ ಮಾಡುವುದು ಈ ರೀತಿಯ ದೂರುಗಳಿದ್ದಲ್ಲಿ ನೇರವಾಗಿ ನೀಡಲು ಸಾಧ್ಯವಾಗದಿದ್ದಲ್ಲಿ ಸಾರ್ವಜನಿಕರು 94808-06228, 08194-230600 ಸಂಖ್ಯೆಗೆ ಸಂಪರ್ಕಿಸಬಹುದು ಎಂದರು. ಶೌಚಾಲಯಗಳ ನಿರ್ಮಾಣ ಮಾಡಿಕೊಟ್ಟಿಲ್ಲದರ ಬಗ್ಗೆ, ಕುಡಿಯುವ ನೀರು, ಮೂಲಭೂತ ಸೌಕಯ್ಯಗಳು, ರೈತರಿಗೆ, ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯ ಕೆಲಸವನ್ನು ಬೇಸಿಗೆಯ ದಿನಗಳಲ್ಲಿ ನೀಡದೇ ಮಳೆ ಗಾಲದ ಆರಂಭದಲ್ಲಿ ಕೊಟ್ಟರೆ ಜಮೀನುಗಳಲ್ಲಿ ಕೆಲಸ ಮಾಡುವುದು ಬಿಟ್ಟು ಬರಲು ಕಷ್ಟವಾಗುತ್ತದೆ. ಇದರಿಂದ ಕೆಲಸಗಾರರು ಬರುವುದಿಲ್ಲ ಎಂದು ಯಂತ್ರಗಳಿಂದ ಕೆಲಸ ಮಾಡಿಸುವುದು ಎಷ್ಟು ಸರಿ? ಎಂದು ಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು. ಎಸಿಬಿಯ ಕಚೇರಿಯ ಪಿಎಸ್‌ಐ ಪ್ರವೀಣ್ ಕುಮಾರ್, ಆಂಜನೇಯ, ಸಿಬ್ಬಂದಿ ಗಳಾದ ಓಬಣ್ಣ, ಹರೀಶ್‌ಕುಮಾರ್, ಶ್ರೀಪತಿ, ಶಿರಸ್ತೇದಾರ್ ಪ್ರಾಣೇಶ್, ಬಿ.ಜಿ.ಕೆರೆ ಗ್ರಾ.ಪಂ.ಪಿಡಿಒ ಮಲ್ಲಿಕಾರ್ಜುನ್, ಬಿ.ಜಿ.ಕೆರೆ ಪೊಲೀಸ್ ಠಾಣೆಯ ಆನಂದ್ನಾ. ಮೋಸಿನ್, ಗೊಂಚಿಗಾರ್
ಮಲ್ಲಿಕಾರ್ಜುನ್, ಬೊಮ್ಮಯ್ಯ, ಚಂದ್ರಣ್ಣ, ಕಾಮಯ್ಯ, ಸುಬ್ರಮಣ್ಯ, ಇತರರಿದ್ದರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here