ಸಂಗೀತಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದ್ದು ವಿದ್ಯಾರ್ಥಿಗಳು ಕಲೆ,ಸಂಗೀತದ ಮೂಲಕ ತಮ್ಮ ಬದುಕನ್ನು ರೂಪಿಸಿಕೊಳ್ಳಬಹುದಾಗಿದೆ

0
94

ಕೂಡ್ಲಿಗಿಃ ಹಿಂದಿನಿಂದ ಕಾಲದಲ್ಲಿ ಸಹ ಸಂಗೀತ ಕ್ಷೇತ್ರಕ್ಕೆ ಬಹಳ ಮಹತ್ವಕೊಟ್ಟಿದ್ದಾರೆ.ಅದರ ವ್ಯಾಪ್ತಿ ವಿಶಾಲವಾದದು, ಸಂಗೀತವನ್ನು ಪಡೆಯಲು ಇಂದು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಕೋರ್ಸ್ ಆಗಿದೆ. ಈಗಾಗಿ ಸಂಗೀತ ಆಸಕ್ತಿ ವಿದ್ಯಾರ್ಥಿಗಳು ಪಿಯುಸಿ ಮುಗಿದ ತಕ್ಷಣ ಹಂಪಿ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಷಯದಲ್ಲಿಯೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯಬಹುದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ತಿಮ್ಮಣ್ಣ ಭೀಮರಾಯ ತಿಳಿಸಿದರು.
ಅವರು ತಾಲೂಕಿನ ಹೊಸಹಳ್ಳಿಯಲ್ಲಿ ಕಲ್ಯಾಣ ಕರ್ನಾಟಕ ಸಾಂಸ್ಕøತಿಕ ಕಲಾ ಸಂಘ ತಿಮ್ಮನಹಳ್ಳಿ ಹಾಗೂ ಕನ್ನಡಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕ್ರುತಿಕ ವೈಭವ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಿದ್ದರು.
ಸಂಗೀತಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದ್ದು ವಿದ್ಯಾರ್ಥಿಗಳು ಕಲೆ,ಸಂಗೀತದ ಮೂಲಕ ತಮ್ಮ ಬದುಕನ್ನು ರೂಪಿಸಿಕೊಳ್ಳಬಹುದಾಗಿದೆ ಎಂದರು. ಗ್ರಾಮೀಣ ಭಾಗದಲ್ಲಿ ರಂಗಕಲಾವಿದರು, ಸಂಗೀತ ಕಲಾವಿದರು ಅಪಾರ ಸೇವೆ ಸಲ್ಲಿಸಿದ್ದರೂ ಇದೂವರೆಗೂ ಅವರನ್ನು ಗುರುತಿಸುವ ಅವರ ಜೀವನಕ್ಕೆ ಆಸರೆಯಾಗುವ ಕಾರ್ಯಕ್ರಮಗಳು ನಡೆಯದೇ ಇರುವುದು ವಿಪರ್ಯಾಸ ಎಂದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಅಮೃತಾ ಮತ್ತು ಲಾವಣ್ಯ ತಂಡದಿಂದ ಭರತನಾಟ್ಯ, ಡಿ.ಓ.ಮುರಾರ್ಜಿ ತಂಡದಿಂದ ಸುಗಮ ಸಂಗೀತ, ಗುರುಶಂಕ್ರಪ್ಪ ಮತ್ತು ತಂಡದವರಿಂದ ಜಾನಪದ ಸಂಗೀತ, ತಿಮ್ಮಣ್ಣ ಮತ್ತು ತಂಡದಿಂದ ವಚನ ಸಂಗೀತ, ಹೊಸಹಳ್ಳಿಯ ರಾಗಸಂಗಮ ಕಲಾ ಬಳಗದ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ಡಿ.ಬಿ.ನಿಂಗರಾಜ್ ಅವರ ಕಂಠಸಿರಿಯಿಂದ ಮೂಡಿಬಂದ ಶರಣರ ವಚನ ಗಾಯನ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿತು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಯು.ಜಗನ್ನಾಥ್, ಹುಡೇಂ ಕೃಷ್ಣಮೂರ್ತಿ, ಆಲೂರು ಹೆಚ್. ನಿಂಗಪ್ಪ , ಹೂಡೇಂ ತಾ.ಪಂ.ಸದಸ್ಯ ಜಿ.ಪಾಪನಾಯಕ, ಭೀಮಣ್ಣ ಗಜಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹೊಸಹಳ್ಳಿಯ ನಾಗೇಂದ್ರಪ್ಪ, ವಕೀಲರಾದ ಚನ್ನಪ್ಪ, ಎಚ್ಚರಿಕೆ ವರದಿಗಾರ ಸಿದ್ದಾಪುರ ಈಶ್ವರಪ್ಪ, ಸಕಲಾಪುರದಹಟ್ಟಿ ಯಲ್ಲಪ್ಪ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here