ಬಳ್ಳಾರಿಯಲ್ಲಿ ಅಂಚೆ ಕಚೇರಿ ರಫ್ತು ಕೇಂದ್ರ ಆರಂಭ

0
446

ಬಳ್ಳಾರಿ,ಜು.21: ಸಣ್ಣ ಮತ್ತು ಮಾಧ್ಯಮ ಗಾತ್ರದ ಉದ್ದಿಮೆದಾರರು, ಉತ್ಪಾದಕರು, ಮಾರಾಟಗಾರರು ವಿದೇಶಗಳಿಗೆ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಸುಲಭವಾಗಲೆಂದು ಭಾರತೀಯ ಅಂಚೆ ಇಲಾಖೆಯು ಮತ್ತು ಬೇಡಿಕೆಯನುಸಾರ ಪ್ರಮುಖ ನಗರಗಳಲ್ಲಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವಿದೇಶಗಳಿಗೆ ಸರಕು ಕಳುಹಿಸಲು ಅಂಚೆಕಚೇರಿ ರಫ್ತು ಕೇಂದ್ರಗಳನ್ನು ಆರಂಭಿಸಿದೆ.
ಜಿಲ್ಲೆಯ ಪ್ರಥಮ ಅಂಚೆ ಕಚೇರಿ ರಫ್ತು ಕೇಂದ್ರವನ್ನು ನಗರದ ಪ್ರಧಾನ ಅಂಚೆ ಕಚೇರಿ ಇತ್ತೀಚೆಗೆ ಉದ್ಘಾಟಿಸಿದ್ದು, ಮುಂದಿನ ತಿಂಗಳಲ್ಲಿ ಹೊಸಪೇಟೆ ಪ್ರಧಾನ ಅಂಚೆ ಕಚೇರಿಯಲ್ಲಿ ಆರಂಭವಾಗಲಿದೆ. ಡಾಖ್ ಘರ್ ನಿರ್ಯಾತ್ ಕೇಂದ್ರಗಳಲ್ಲಿ (ಆಓಏ) ಅಂತರ್‍ರಾಷ್ಟ್ರೀಯ ಪಾರ್ಸೆಲ್ ಕಳುಹಿಸುವ ಮೂಲಕ ವ್ಯಾಪಾರದಲ್ಲಿ ವಿಸ್ತರಣೆ ಮಾಡಿಕೊಂಡು ಒಳ್ಳೆಯ ಲಾಭ ಕಾಣಬಹುದಾಗಿದೆ.

ಅಂತರ್ಜಾಲ ಆಧಾರಿತ ವ್ಯವಸ್ಥೆಯ ಮೂಲಕ, ಸುಲಭವಾಗಿ ಕಸ್ಟಮ್ಸ್ ಕ್ಲಿಯರೆನ್ಸ್ ಮಾಡಿಕೊಳ್ಳುವ ಹಾಗೂ ಮನೆಯಿಂದಲೇ ಸ್ವಯಂ ವಸ್ತುಗಳನ್ನು ಬುಕ್ ಮಾಡುವ ಸರಳೀಕೃತ ವ್ಯವಸ್ಥೆಯನ್ನು ಈ ಡಿಎನ್‍ಕೆ ವ್ಯವಸ್ಥೆಯಲ್ಲಿ ಮಾಡಲಾಗಿದೆ. ಡಿಎನ್‍ಕೆ ಸೇವೆ ಪಡೆಯಲು ಐಇಸಿ ಕೋಡ್, ಜಿಎಸ್‍ಟಿ ಸಂಖ್ಯೆ ಮತ್ತು ಎಡಿ ಕೋಡ್‍ವುಳ್ಳ ಗ್ರಾಹಕರು ಉಪಯೋಗ ಇದರ ಪಡೆಯಬಹುದು.
ಈ ಸೇವೆಯನ್ನು ಪಡೆಯಲು ಸಮೀಪದ ಅಂಚೆ ಕಚೇರಿ ಅಥವಾ ವಿಭಾಗೀಯ ಕಚೇರಿಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮಾರುಕಟ್ಟೆ ಅಧಿಕಾರಿ ನಾಗರಾಜ್‍ರಾವ್ ಮೊ.8660295657 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ವಿಭಾಗ ಅಂಚೆ ಅಧೀಕ್ಷಕರವರ ಕಚೇರಿಯ ಅಂಚೆ ಅಧೀಕ್ಷಕ ವಿ.ಎಲ್.ಚಿತಕೋಟೆ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here