ವಿನೋದಾ ಕರಣಂ ಬಳ್ಳಾರಿ ಜಿಲ್ಲೆಯ ಕಸಾಪ ಅಧ್ಯಕ್ಷರಾಗಲು ಸೂಕ್ತ ಅಭ್ಯರ್ಥಿಯಾಗಿದ್ದಾರೆ.

0
169

ವಿನೋದಾ ಕರಣಂ ಅವರು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿಂತರಪಳ್ಳಿ ಗ್ರಾಮದಲ್ಲಿ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದವರು. ವಿವಾಹ ನಂತರ ಬಳ್ಳಾರಿಯಲ್ಲಿ ವಾಸವಿದ್ದಾರೆ.

ಇವರು ಎಂ.ಎ.ಕನ್ನಡ, ಎಂ.ಎ. ಇತಿಹಾಸ, ಬಿ.ಇಡಿ. ಎಂ.ಫಿಲ್, ಎಲ್.ಎಲ್.ಬಿ. ವಿದ್ಯಾಭ್ಯಾಸ ಹೊಂದಿದವರಾಗಿದ್ದಾರೆ.

ಉಪನ್ಯಾಸಕರಾಗಿ ೨೫ ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

೧)ಕವಿಬಳಗ (ಕವನ ಸಂಕಲನ)
೨)ಪಿ.ಯು.ವಿದ್ಯಾರ್ಥಿಗಳಿಗಾಗಿ ಕನ್ನಡ ವ್ಯಾಕರಣ,
೩)ಈ ಪರಿಯ ಸೊಬಗು – ಒಂದು ಅಧ್ಯಯನ, (ಸಂಶೋಧನಾ ಪ್ರಬಂಧ.)
೪) ತಾಯಿ ಪ್ರೀತಿ (ಕವನ ಸಂಕಲನ)
೫)ಕರುನಾಡ ಸಿರಿ, (ಕವನ ಸಂಕಲನ )
೬)ಚಿನ್ಮಯ, (ಮಕ್ಕಳ ಕವನ ಸಂಕಲನ)
೭)ಭಾವ ತರಂಗ, (ಕವನ ಸಂಕಲನ)
೮)ವಚನ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ, (ವಿಮರ್ಶಾತ್ಮಕ ಪ್ರಬಂಧ)
೯)ಬಾಳ ನೌಕೆಯ ಅಂಬಿಗ (ಆಯ್ದ ಲೇಖನಗಳ ಸಂಗ್ರಹ)
೧೦)ಹಣತೆ, (ಕವನ ಸಂಕಲನ)
೧೧)ಪ್ರೇಮದೀಪ (ಕವನ ಸಂಕಲನ)
೧೨)ಹೃದಯ ಕಣಜ (ಕಥಾ ಸಂಕಲನ ಸಂಕಲನ)
೧೩)ಅವನೇ ವೈಣಿಕ.. (ಕಾದಂಬರಿ) ಮೊದಲಾದ ಪುಸ್ತಕಗಳನ್ನು ಪ್ರಕಟಿಸುವುದರ ಮೂಲಕ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ.

ಜೊತೆಗೆ ವಕೀಲರೂ, ಸಂಘಟನಾಕಾರರೂ, ತೇಜು ಪ್ರಕಾಶನದ ಪ್ರಕಾಶಕರೂ ಆಗಿದ್ದಾರೆ. ಸಂಘ ಸಂಸ್ಥೆಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರಲ್ಲದೇ ಸಮಾಜ ಸೇವೆಯಲ್ಲಿಯೂ ಆಸಕ್ತಿ ಹೊಂದಿದವರಾಗಿದ್ದಾರೆ.

LEAVE A REPLY

Please enter your comment!
Please enter your name here