ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕುಷ್ಠರೋಗದ ಬಗ್ಗೆ ನಿರ್ಲಕ್ಷ್ಯ ಬೇಡ, ಜಾಗೃತರಾಗಿರಿ : ಟಿ.ನಾಗರಾಜ್

0
87

ಬಳ್ಳಾರಿ,ಫೆ.05 :ಯಾವುದೇ ಸ್ಪರ್ಶ ಜ್ಞಾನವಿಲ್ಲದ ಸ್ಥಿತಿ ಇರುವುದು ಕುಷ್ಠರೋಗದ ಲಕ್ಷಣವಾಗಿರಬಹುದು. ಕುಷ್ಠರೋಗದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸಬೇಡಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಟಿ.ನಾಗರಾಜ್ ಹೇಳಿದರು.
ಹರಪನಹಳ್ಳಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಶಂಕರನಹಳ್ಳಿ ತಾಂಡದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಹದ ಮೇಲೆ ತಿಳಿ ಬಿಳಿ ತಾಮ್ರ ಬಣ್ಣದ ಮಚ್ಚೆಗಳು ಕಾಣಿಸುವುದು, ಕೈ ಮತ್ತು ಕಾಲುಗಳಲ್ಲಿ ಜೋಮು ಹಿಡಿದು ಸ್ಪರ್ಶಜ್ಞಾನ ಇಲ್ಲದಂತಾಗುವುದು ಕುಷ್ಠರೋಗದ ಲಕ್ಷಣಗಳಾಗಿವೆ. ಈ ಭಾಗಗಳಲ್ಲಿ ಗಾಯವಾದರೂ ನೋವಾಗುವುದಿಲ್ಲ. ಮುಖ ಮತ್ತು ಕೈ ಕಾಲುಗಳಲ್ಲಿ ಎಣ್ಣೆ ಸವರಿದಂತೆ ಹೊಳಪು ಇರುವುದು ಕುಷ್ಠರೋಗದ ಲಕ್ಷಣವಾಗಿರಬಹುದು ಎಂದರು.
ಕುಷ್ಠರೋಗವನ್ನು ನಿರ್ಲಕ್ಷ್ಯ ವಹಿಸಿದರೆ ಅಂಗವಿಕಲತೆ ಉಂಟಾಗುವ ಸಂಭವ ಇರುತ್ತದೆ. ಅಂದರೆ ಕಣ್ಣಿನ ರೆಪ್ಪೆಗಳ ಮೇಲ್ಭಾಗ ಮುಚ್ಚಲು ಆಗದೆ ಇರುವುದು, ಕೈ ಬೆರಳುಗಳು ಸೆಟೆದು ಬಾಗಿಸಲು ಬಾರದಿರುವುದು, ಮುಖ ವಿರೂಪವಾಗುವುದು, ಮೂಗು ಚಪ್ಪಟೆಯಾಗುವುದು, ಕಾಲಿನ ಪಾದ ಮುರುಟಿಕೊಂಡು ಸ್ಪಶರ್Àಜ್ಞಾನ ಕಳೆದುಕೊಳ್ಳುವ ಸಂಭವ ಇರುತ್ತದೆ ಎಂದು ಕಾರ್ಯಕ್ರಮದಲ್ಲಿ ಕುಷ್ಠರೋಗದ ಲಕ್ಷಣಗಳನ್ನು ವಿವರಿಸಿದ ಅವರು ಈ ರೀತಿಯ ಚಿನ್ಹೆಗಳು ಯಾರಿಗಾದರೂ ಕಂಡು ಬಂದ ಕೂಡಲೇ ಸಮೀಪದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗಿ ವೈದ್ಯರನ್ನು ಕಾಣುವ ಮೂಲಕ ಉಚಿತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಇದರಲ್ಲಿ 2 ರೀತಿಯ ಚಿಕಿತ್ಸಾ ವಿಧಾನಗಳಿವೆ. 5 ಮಚ್ಚೆಗಳಿಗಿಂತ ಕಡಿಮೆ ಇದ್ದರೆ ಅದನ್ನು ಪಿ.ಬಿ. ಚಿಕಿತ್ಸೆ ಎಂದು, 5 ಮಚ್ಚೆಗಳಿಗಿಂತ ಹೆಚ್ಚಿದ್ದರೆ ಎಂ.ಬಿ ಚಿಕಿತ್ಸೆ ಎಂದು ಪರಿಗಣಿಸಲಾಗುವುದು. ಒಮ್ಮೆ ಚಿಕಿತ್ಸೆಯನ್ನು ಆರಂಭಿಸಿದರೆ ಅವಧಿ ಪೂರ್ಣಗೊಳ್ಳುವವರೆಗೆ ನಿಲ್ಲಿಸದಂತೆ ಪಡೆದುಕೊಂಡಿದ್ದೇ ಆದರೆ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಒಐಊP ಅನಂದವರು, ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಊರಿನ ಅನೇಕ ಮುಖಂಡರು ಹಾಗೂ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here