ಸೈಬರ್ ಅಪರಾಧಗಳು ಹೆಚ್ಚಾಗಿದ್ದು ವಿದ್ಯಾರ್ಥಿಗಳು ಜಾಗೃತರಾಗಬೇಕು- ಎ.ಎಸ್.ಐ. ಕುಬೇರ್

0
32

ಸಂಡೂರುರ್ಡಿ: 24 ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಬಳಕೆ ಮಾಡುವ ಮೂಲಕ ಮೊಬೈಲ್ ನಿಂದ ದೂರವಿದ್ದಷ್ಟು ಅಪಾಯ ಕಡಿಮೆ ಎಂದು ಸೈಬರ್ ಕ್ರೈಮ್ ಜಾಗೃತಿದಳದ ಎ.ಎಸ್.ಐ.ಕುಬೇರ್ ತಿಳಿಸಿದರು. ಅವರು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಪರಾಧ ತಡೆಯ ಕಾರ್ಯಕ್ರಮದಲ್ಲಿ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿ ಇಂದು ಪ್ರತಿ ಹೆಜ್ಜೆಯಲ್ಲಿಯೂ ಸಹ ಮೊಬೈಲ್ ಬಳಕೆ ಮಾಡುತ್ತೇವೆ, ಅದರಲ್ಲೂ ಹಣಕಾಸಿನ ವ್ಯವಹಾರ ಹೆಚ್ಚಾಗುತ್ತಿದೆ, ಅಂತಹ ಸಂದರ್ಭದಲ್ಲಿ ಸುಳ್ಳು ಅ್ಯಪ್‍ಗಳ ಹಾವಳಿ ಹೆಚ್ಚಾಗಿದೆ, ಬಹುಮಾನ ನೀಡುತ್ತೇವೆ ಎಂದು ಇನ್ಸ್ಟಾಲ್ ಮಾಡಿಸಿ ನಿಮ್ಮ ಮೊಬೈಲ್ ಡಾಟಾವನ್ನು ಕದಿಯುತ್ತಿದ್ದಾರೆ, ಅಲ್ಲದೆ ಹಣವನ್ನೂ ಸಹ ದೋಚುವುದು ನಡೆಯುತ್ತಿದೆ, ಅಲ್ಲದೆ ನೀವು ತೆಗೆದ ಪೋಟೋಗಳನ್ನು ಸಹ ಕದ್ದು ನಿಮ್ಮನ್ನೇ ಬ್ಲಾಕ್ ಮೇಲ್ ಮಾಡುವ ವಿಡಿಯೋಗಳನ್ನು ಬಿಡುತ್ತಾರೆ ಅದ್ದರಿಂದ ಅನಾವಶ್ಯಕವಾಗಿ ಪೋಟೋಗಳನ್ನು ಅಪ್‍ಲೋಡ್ ಮಾಡುವುದು, ಫಾರ್‍ವರ್ಡಮಾಡುವುದು ಸರಿಯಾದುದಲ್ಲ, ಇದರಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿದ್ದು ಅದರಲ್ಲೂ ವಿದ್ಯಾರ್ಥಿಗಳು ಬಹು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ವಹಣಾ ಶಾಸ್ತ್ರದ ಉಪನ್ಯಾಸಕ ಶಂಕರಗೌಡ ಅವರು ಮಾತನಾಡಿ ಮೋಬೈಲ್ ದೀಪವಿದ್ದಂತೆ ಅದು ಬೆಳಕನ್ನು ನೀಡುತ್ತದೆ, ಅದರೆ ಅಷ್ಟೆ ಅಪಾಯಕಾರಿಯಾಗಿಯೂ ಕಾರ್ಯನಿರ್ವಹಿಸುತ್ತದೆ ದೀಪ ಹೇಗೆ ಬೆಂಕಿ ಹಚ್ಚುತ್ತದೆಯೋ ಅದೇ ರೀತಿಯಾಗಿದೆ, ಎಷ್ಟೋ ವಿದ್ಯಾರ್ಥಿಗಳು ವಿಡಿಯೋಗಳ ಬ್ಲಾಕ್ ಮೇಲ್ ತಂತ್ರಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅದ್ದರಿಂದ ಪದವಿ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಬಳಸಿ ಎಂದರು.

ಪತ್ರಕರ್ತರಾದ ಬಸವರಾಜ ಬಣಕಾರ ಮಾತನಾಡಿ ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳು ಓದಿಗಿಂತ ಹೆಚ್ಚಾಗಿ ಮೊಬೈಲ್ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದು ಜ್ಞಾನದ ಕೊರತೆ ಉಂಟಾಗುತ್ತಿದೆ, ಓದುಗಾರಿಕೆ, ಗ್ರಂಥಾಲಯದ ಬಳಕೆ, ನೆನಪಿನ ಶಕ್ತಿ ಇಲ್ಲವಾಗುತ್ತಿದೆ, ಅಲ್ಲದೆ ಅನಾವಶ್ಯಕ ಅಪಾಯಗಳನ್ನು ಮೊಬೈಲ್ ಮೂಲಕ ಆಹ್ವಾನಿಸುತ್ತಿದ್ದು ಲಕ್ಷಾಂತರ ಹಣ ಕಳೆದುಕೊಳ್ಳುವುದರ ಜೊತೆಗೆ ತಮ್ಮ ತನವನ್ನೂ ಕಳೆದುಕೊಂಡು ಮಾನಸಿಕ ಅಸ್ವಸ್ಥರಾಗಿರುವುದನ್ನು ಕಾಣುತ್ತೇವೆ ಅದ್ದರಿಂದ ವಿದ್ಯಾರ್ಥಿಗಳು ಎಚ್ಚರವಹಿಸಬೇಕೆಂದರು.

ಪ್ರಾಂಶುಪಾಲರಾದ ಬಸವರಾಜ್.ಹೆಚ್. ಅವರು ಮಾತನಾಡಿ ಮೊಬೈಲ್ ಬೇಕು ಅದು ಅಮೃತವಾಗಬೇಕೇ ವಿನಹ ವಿಷವಾಗಬಾರದು, ಇಂದು ವಿದ್ಯರ್ಥಿಗಳು ವಿಷವಾಗಿಸಿಕೊಳ್ಳುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು, ಕಛೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here