ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ವತಿಯಿಂದ ಇಬ್ಬರು ಪಿಎಸ್ಐ ಗಳಿಗೆ ದಕ್ಷ ಪೋಲಿಸ್ ಅಧಿಕಾರಿ ಪ್ರಶಸ್ತಿ ನೀಡಿ ಸನ್ಮಾನ

0
170

ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಅಂಗಡಿ ಅವರ ಹುಟ್ಟು ಹಬ್ಬದ ಅಂಗವಾಗಿ ಇತ್ತೀಚೆಗೆ ಸೇವಾ ಟ್ರಸ್ಟ್ ವತಿಯಿಂದ ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ತಮ್ಮ ಕರ್ತವ್ಯ ನಿಷ್ಠೆಯೊಂದಿಗೆ ಹೆಸರಾಗಿರುವ ತುರುವಿಹಾಳ ಪಿಎಸ್ಐ ಎರಿಯಪ್ಪ ಅಂಗಡಿಯವರಿಗೆ ದಕ್ಷ ಪೊಲೀಸ್ ಅಧಿಕಾರಿ ಎಂಬ ಪ್ರಶಸ್ತಿಯನ್ನು ಹಾಗೂ ಕರ್ನಾಟಕ ಸರಕಾರದಿಂದ ಮುಖ್ಯಮಂತ್ರಿ ಪದಕ ಪ್ರಶಸ್ತಿ ಪಡೆದ ತಾವರಗೇರಾ ಪಿಎಸ್ಐ ಕುಮಾರಿ ಗೀತಾಂಜಲಿ ಶಿಂಧೆ ಅವರಿಗೆ ದಕ್ಷ ಮಹಿಳಾ ಪೋಲಿಸ್ ಅಧಿಕಾರಿ ಎಂಬ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಅಂಗಡಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಸಂಗಮೇಶ ಹಿರೇಮಠ, ತಾಲೂಕಾಧ್ಯಕ್ಷ ಮಹ್ಮದ್ ಯಾಸೀನ್, ಕಾರ್ಯದರ್ಶಿ ಮೋಹನ್ ಗೌಡ, ನಿಸಾರ್ ಖಾನ್, ಸಲ್ಮಾನ್, ಮಂಜುನಾಥ ಕಲಾಲ್, ಫಿರೋಜ್ ಖಾನ್, ಸಂಗಮೇಶ ಅಂಗಡಿ, ಶ್ರೀಶೈಲ ಸೇರಿದಂತೆ ಹಲವರಿದ್ದರು.

LEAVE A REPLY

Please enter your comment!
Please enter your name here