ರಾಜಕೀಯ ರಂಗಕ್ಕೆ ಸಮಾಜ ಸೇವಕಿ ಮಂಜುಳಾ ರೇವಡಿ ಎಂಟ್ರಿ..!!

0
277

ರೋಣ ತಾಲೂಕಿನ ರಾಜಕಾರಣ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಈ ತಾಲೂಕಿನಲ್ಲಿ ಹಲವಾರು ರಾಜಕೀಯ ನಾಯಕರು ತಮ್ಮದೇ ಆದ ತತ್ವ ಸಿದ್ದಾಂತಗಳ ಮೂಲಕ ರಾಜಕಾರಣ ಮಾಡಿ ಆ ಮೂಲಕ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ್ದಾರೆ. ಅಂತಹ ನಾಯಕರು ರಾಜಕಾರಣದಲ್ಲಿ ಸಕ್ರಿಯರಾಗಿ ತಾವು ಬೆಳೆದು ಆ ಮೂಲಕ ತಮ್ಮ ಹಿಂಬಾಲಕರನ್ನು ಬೆಳೆಸಿ ಹಿತಿಹಾಸ ನಿರ್ಮಿಸಿದ್ದಾರೆ. ಇಂತಹ ರೋಣ ರಾಜಕಾರಣದಲ್ಲಿ ಅದರಲ್ಲೂ ಗಜೇಂದ್ರಗಡದ ಸಮಾಜ ಸೇವಕಿ ಮಂಜುಳಾ ರೇವಡಿರವರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂಚಲನ ಮೂಡಿಸಿದೆ. ಇವರು ಈಗಾಗಲೇ ಇಡಿ ಗದಗ ಜಿಲ್ಲೆಯಲ್ಲಿಯೇ ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಜನರನ್ನು ಜಾಗೃತರನ್ನಾಗಿಸಿ ಆ ಮೂಲಕ ತಮ್ಮ ಅನುಪಮ ಕೊಡುಗೆಯನ್ನು ರೋಣ ತಾಲೂಕಿಗೆ, ಗಜೇಂದ್ರಗಡ ತಾಲೂಕಿಗೆ ಮತ್ತು ಗದಗ ಜಿಲ್ಲೆಗೆ ನೀಡಿದ್ದಾರೆ. ಇಂತಹ ರೇವಡಿಯವರು ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಗದಗ ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿಯಾಗಿ ಜಿಲ್ಲೆಯಾಧ್ಯಂತ ಕನ್ನಡಪರ ಕೆಲಸ ನಾಡು ನುಡಿ, ಜಲ, ಭಾಷೆಗೆ ತಮ್ಮದೇ ಆದ ಕಾಣ ಕೆಯನ್ನು ಸಲ್ಲಿಸಿದ್ದಾರೆ. ಇದು 21ನೇ ಶತಮಾನ ಮಹಿಳೆ ಪುರುಷರಿಗಿಂತ ಕಡಿಮೆಯಿಲ್ಲ ಇಂತಹ ಕಾಲಘಟ್ಟದಲ್ಲಿ ಮಂಜುಳಾ ರೇವಡಿರವರು ಗಜೇಂದ್ರಗಡದ ಇನ್ವರಿಲ್ ಕ್ಲಬ್ ಅಧ್ಯಕ್ಷರಾಗಿ ಮುಖ್ಯವಾಗಿ ತಾಲೂಕಿನಾಧ್ಯಂತ ಮಹಿಳಾ ಸಬಲಿಕರಣ ಸಂಘಟನೆ, ಮತ್ತು ಮಹಿಳೆಯನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸವನ್ನು ಗಜೇಂದ್ರಗಡ ತಾಲೂಕಾ ಇನ್ವರಿಲ್ ಕ್ಲಬ್ ಅಧ್ಯಕ್ಷೆಯಾಗಿ ಆ ಮೂಲಕ ಇವರು ಜನಪರ, ಜೀವಪರ, ಅಭಿವೃದ್ಧಿಪರ, ಕಾರ್ಯಗಳನ್ನು ಮಾಡುವ ಮೂಲಕ ಇಂದು ಮಹಿಳೆಯರ ನೆಚ್ಚಿನ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇಂದು ಸಹಕಾರಿ ರಂಗದಲ್ಲಿ ಮಹಿಳೆಯರು ಸಹ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸುವ ಭರವಸೆಯನ್ನು ಇಟ್ಟುಕೊಂಡು ಆ ಮೂಲಕ ಇವರು ಮಹಿಳಾ ಸಹಕಾರಿ ಪತ್ತಿನ ಅಧ್ಯಕ್ಷರಾಗಿ ಸಹಕಾರಿ ರಂಗದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇವರು ಸಹಕಾರಿ ರಂಗದಲ್ಲಿ ಕಟ್ಟಕಡೆಯ ಮಹಿಳೆಯರಿಗೆ ಸಾಲ ಸೌಲಭ್ಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ಮಂಜುಳಾ ರೇವಡಿರವರು ಹಲವಾರು ಶೋಷಿತರು, ಬಡವರು, ಮತ್ತು ಧಮನಿತರಿಗೆ ಸಹಕಾರಿ ಸೌಲಭ್ಯಗಳನ್ನು ಒದಗಿಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಮನಸ್ಸು ಹೂವಿನಂತದ್ದು. ಹಾಲಿನಷ್ಟೆ ಪರಿಪಕ್ವ ಬಡವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಇವರು ಮನಸ್ಸು ಮಾಡಿ ಪ್ರತಿ ವರ್ಷ 29 ಮಕ್ಕಳನ್ನು ದತ್ತು ಪಡೆದುಕೊಂಡು ಆ ಮೂಲಕ ಇವರು ಬಡಮಕ್ಕಳಿಗೆ ಶಿಕ್ಷಣ, ವಸತಿ ಸೌಕರ್ಯಗಳನ್ನು ನೀಡಿದ್ಧಾರೆ. ಮುಖ್ಯವಾಗಿ ಕನಿಷ್ಟ ನೂರಾರು ಮಕ್ಕಳು ಇವರ ಕೃಪಾಶಿರ್ವಾದದಿಂದ ಇವರ ಸಹಕಾರದಿಂದ ಇಂದು ಸಮಾಜದಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಮುಖ್ಯವಾಗಿ ಇವರು ಬಡ ಮಕ್ಕಳನ್ನು ಗುರುತಿಸಿ ಅದರಲ್ಲೂ ತಂದೆ-ತಾಯಿ ಇಲ್ಲದ ಬಡ ಅನಾಥ ಮಕ್ಕಳನ್ನು ದತ್ತು ಪಡೆದುಕೊಳ್ಳುವುದು ನಿಜಕ್ಕೂ ಇವರ ಹೃದಯವೈಶಾಲ್ಯತೆ ದೂತಕವೆಂದು ರೋಣ – ಗಜೇಂದ್ರಗಡ ತಾಲೂಕಿನ ಜನತೆ ಇಂದಿಗೂ ಸ್ಮರಿಸುತ್ತಾರೆ. ಇಂದು ಈ ಮಂಜುಳಾ ರೇವಡಿ ರವರು ರಾಯಬಾಗ ತಾಲೂಕಿನ ಬೆಂಡವಾಡ ರೇವಣ ಸಿದ್ದೇಶ್ವರ ಶಾಲೆಗೆ ಪ್ರತಿ ವರ್ಷ 1,30,000/- (ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ)ಗಳನ್ನು ನೀಡುತ್ತಾರೆ.
ರಾಜಕೀಯ ರಂಗಕ್ಕೆ ಸೇರ್ಪಡೆ ತಲ್ಲಣದ ದೀಗಂತ
ಸಮಾಜ ಸೇವೆ ಮೂಲಕ ಖ್ಯಾತ ಸಮಾಜ ಸೇವಕಿ ಎಂದು ಗುರುತಿಸಿಕೊಂಡಿದ್ದಾರೆ. ಮಂಜುಳಾ ರೇವಡಿ ರವರು ಕಾಂಗ್ರೇಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿಕೊಂಡು ಇವರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಮಂಜುಳಾ ರೇವಡಿ ಮೇಡಂ ರವರು ರೋಣ ತಾಲೂಕಿನ ಹಿರಿಯ ಕಾಂಗ್ರೇಸ್ ಮುಖಂಡ ಮಾಜಿ ಶಾಸಕರು ಮತ್ತು ಗದಗ ಜಿಲ್ಲಾ ಡಿ.ಸಿ.ಸಿ. ಕಾಂಗ್ರೇಸ್ ಪಕ್ಷದ ಅಧ್ಯಕ್ಷರು ಇವರ ನಾಯಕತ್ವವನ್ನು ಮೆಚ್ಚಿ ಮತ್ತು ಗದಗ ಶಾಸಕರು ರಾಜಕೀಯ ರಂಗದ ಭೀಷ್ಮರಾದ ಹೆಚ್.ಕೆ. ಪಾಟೀಲ್ ನರಗುಂದದ ಮಾಜಿ ಸಚಿವ ಬಿ.ಆರ್. ಯಾವಗಲ್ ಗದಗ – ರೋಣ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಇವರ ನಾಯಕತ್ವಕ್ಕೆ ಮೇಚ್ಚಿ ಮಂಜುಳಾ ರೇವಡಿ ರವರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇವರ ಸಂಘಟನಾ ಶಕ್ತಿಯನ್ನು ಮೆಚ್ಚಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಜಿ.ಎಸ್.ಪಾಟೀಲ್ ಮಾಜಿ ಶಾಸಕರು ಮಂಜುಳಾ ರೇವಡಿ ರವರನ್ನು ನರೇಗಲ್ಲ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಇವರು ಸ್ಪರ್ಧಿಸುತ್ತಾರೆ ಎಂಬ ಸುದ್ದಿ ರಾಜಕೀಯ ಪಡಶಾಲೆಯಲ್ಲಿ ಕಂಡು ಬರುತ್ತದೆ. ತಮ್ಮ ಕಾಂಗ್ರೇಸ್ ಪಕ್ಷದ ಸೇರ್ಪಡೆ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಮಂಜುಳಾ ರೇವಡಿ ರವರು ಇವರು ನೋಡಿ ಸರ್ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೇಸ್ ಪಕ್ಷ. ಮಹಾತ್ಮ ಗಾಂಧಿಜಿಯವರು ಈ ಪಕ್ಷದ ಅಧ್ಯಕ್ಷರಾಗಿದ್ದು, ಐತಿಹಾಸಿಕ ಘಟನೆ. ಇನ್ನೂ ನೆಹರು ಇಂದಿರಾ ಗಾಂಧಿ, ರಾಜೀವ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕರ್ನಾಟಕದಲ್ಲಿ ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ, ಇನ್ನಿತರರ ನಾಯಕತ್ವ ಮೇಚ್ಚಿ ಇನ್ನೂ ನಮ್ಮ ತಾಲೂಕಿನ ದೀಮಂತ ನಾಯಕ ಬಡವರ ಬಂಧು ಶೋಷಿತರ ಆಶಾಕಿರಣ ಸಾವಿರ ಕೆರೆಯ ಸರದಾರ ಅಭಿವೃದ್ಧಿಯ ಹರಿಕಾರ ಮೂರು ಭಾರಿ ಶಾಸಕರಾಗಿ ರೋಣ ತಾಲೂಕಿನ ರಾಜಕೀಯದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿರುವ ಜಿ.ಎಸ್.ಪಾಟೀಲ್ ರವರ ನಾಯಕತ್ವಕ್ಕೆ ನಾನು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಹೀಗಾಗಿ ಮುಂಬರುವ ದಿನಮಾನಗಳಲ್ಲಿ ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತಳಾಗಿ ದುಡಿಯುತ್ತೇನೆ. ಮತ್ತು ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಪಕ್ಷದ ಸಿದ್ದಾಂತಕ್ಕೆ ಮೆಚ್ಚಿ ನಾನು ಆ ಮೂಲಕ ಹಗಲಿರುಳು ದುಡಿಯುತ್ತೇನೆಂದು ತಿಳಿಸಿದರು.

LEAVE A REPLY

Please enter your comment!
Please enter your name here