ಸಿಂಧನೂರಿನಲ್ಲಿ ನೂತನವಾಗಿ ಶ್ರೀ ವಿಶ್ವೇಶತೀರ್ಥ ಗುರುಕುಲ ಉದ್ಘಾಟನೆ

0
73

ಭಾರತದ ಪ್ರತಿಷ್ಠೆಗಳಾದ ಸಂಸಕೃತ ಮತ್ತು ಸಂಸ್ಕೃತಿಯನ್ನು ರಕ್ಷಿಸುವುದು ಭಾರತೀಯರ ಕರ್ತವ್ಯ. ಈ ಕರ್ತವ್ಯ ಪ್ರಜ್ಞೆಯಿಂದ ನಗರದಲ್ಲಿ ಪ್ರತಿಯೊಬ್ಬರಿಗೂ ಸಂಸ್ಕೃತ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ನಗರದ ಬ್ರಾಹ್ಮಣ ಓಣಿಯ ಶ್ರೀ ರಾಮ ಮಂದಿರದಲ್ಲಿ ಶ್ರೀ ವಿಶ್ವೇಶತೀರ್ಥ ಗುರುಕುಲ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವೇದಮೂರ್ತಿ ರಾಮಕೃಷ್ಣಾಚಾರ್ಯ ಗೋನವಾರ ವಹಿಸಿ ಸಂಸ್ಕೃತದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜಸೇವಕ ಡಾ.ಚನ್ನನಗೌಡ ಆರ್ ಪಾಟೀಲ್ ಮಾತನಾಡಿ, ಆಧ್ಯಾತ್ಮಕ್ಕೆ ಹತ್ತಿರವಾಗಬೇಕೆಂದರೆ ಸಂಸ್ಕೃತ ಅತ್ಯವಶ್ಯಕ ಎಂದರು. ಗುರುಕುಲದ ಮಾರ್ಗದರ್ಶಕರಾದ ಪಂಡಿತ್ ರಂಗನಾಥಾಚಾರ್ಯ ಸಾಲಗುಂದ ಮಾತನಾಡಿ, ಸಂಸ್ಕೃತ ದೇವಭಾಷಾಯಾದರು , ಸರಳ ಮತ್ತು ರಮಣೀಯ ತಮ್ಮ ಮಾತುಗಳಲ್ಲಿ ವ್ಯಾಖ್ಯಾನಿ‌ಸುವ ಮೂಲಕ ನೆರೆದಿದ್ದ ಸಭಿಕರಲ್ಲಿ ಸಂಸ್ಕೃತ ಪ್ರೇಮವನ್ನು ಹೆಚ್ಚಿಸಿದರು. ಗುರುಕುಲದ ಶಿಕ್ಷಕರಾದ ಕೊಪ್ರೇಶಾಚಾರ್ಯ ಮಠಾಧಿಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಸಂಸ್ಕೃತದ ಅವಶ್ಯಕತೆ ಹಾಗೂ ಗುರುಕುಲದ ಧ್ಯೇಯೋದ್ಧೇಶಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ನರಸಿಂಹಾಚಾರ್ಯ ಮಠಾಧೀಕಾರ, ಭೀಮಶೇನಾಚಾರ್ಯ ಮಠಾಧೀಕಾರ, ವೆಂಕಟೇಶಾಚಾರ್ಯ ಕೆಂಗಲ್, ಶ್ರೀನಿವಾಸ ಕುಲಕರ್ಣಿ, ಗೋವಿಂದಾಚಾರ್ಯ ಮಠಾಧೀಕಾರ್,ಕಾರ್ತಿಕಾಚಾರ್ಯ ಕೆಂಗಲ್,ಸಮಾಜದ ಬಂಧುಗಳು, ಹಿರಿಯರು, ಮಹಿಳೆಯರು,ಮಕ್ಕಳು ಇದ್ದರು.

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here