ನಕಲಿ‌ ಅಭ್ಯರ್ಥಿ ಸೇರಿ ಎಪಿಸಿ ಆಕಾಂಕ್ಷಿಯಾಗಿದ್ದ ಚಾಣಾಕ್ಷ ಕಳ್ಳರು ಬೆರಚ್ಚು ಸಾಕ್ಷಿಯಿಂದಾಗಿ ಧಾರವಾಡ ಎಸ್.ಪಿ.ಕೈಗೆ ಸಿಕ್ಕಿಬಿದ್ದರು.

0
133

ಧಾರವಾಡ : ಎಪಿಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಶಿವಪ್ಪ ಎಫ್ ಪಡೆಪ್ಪನವರ ಇತನ ಬದಲಾಗಿ ಬೇರೆ ವ್ಯಕ್ತಿ ದೈಹಿಕ ಸಾಮಥ್ರ್ಯ ಮತ್ತು ದೇಹದಾಢ್ರ್ಯತೆ ಪರೀಕ್ಷೆ [ET/PST] ಗೆ ಹಾಜರಾಗಿ ವಂಚನೆ ಎಸಗಿದ ಚಾಣಾಕ್ಷ ಕಳ್ಳರು ಬೆರಚ್ವು ಸಾಕ್ಷಿಯಿಂದ ಧಾರವಾಡ ಎಸ್.ಪಿ. ಕೃಷ್ಣಕಾಂತ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಧಾರವಾಡ ಜಿಲ್ಲಾ ಪೊಲೀಸ್ ಘಟಕದ ಸಶಸ್ತ್ರ ಮೀಸಲು ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು 2020-21ನೇ ಸಾಲಿನಲ್ಲಿ ಕೈಗೊಳ್ಳಲಾಗಿತ್ತು. ಅದರಂತೆ ಅರ್ಹ 1:5 ಅಭ್ಯರ್ಥಿಗಳ ದೈಹಿಕ ಸಾಮಥ್ರ್ಯ ಮತ್ತು ದೇಹದಾಢ್ರ್ಯತೆ ಪರೀಕ್ಷೆ [ET/PST] ಯನ್ನು ದಿನಾಂಕ 19-12-2020 ರಂದು ಧಾರವಾಡ ನಗರದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಕೈಗೊಳ್ಳಲಾಗಿದೆ ಮತ್ತು ಆಯ್ಕೆಯಾದ ಅಭ್ಯರ್ಥಿಗಳ ವೈಧ್ಯಕೀಯ ಪರೀಕ್ಷೆಯನ್ನು ದಿನಾಂಕ 13-01-2021 ರಂದು ಜಿಲ್ಲಾ ಆಸ್ಪತ್ರೆ, ಧಾರವಾಡದಲ್ಲಿ ನಡೆಸಲಾಗಿತ್ತು.

ಎಪಿಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಶಿವಪ್ಪ ಎಫ್ ಪಡೆಪ್ಪನವರ ದಿನಾಂಕ 17-03-2021 ನೇಮಕಾತಿ ಆದೇಶ ಪಡೆದು ಕರ್ತವ್ಯಕ್ಕೆ ದಿನಾಂಕ 03-04-2021 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾನೆ.

ಅಭ್ಯರ್ಥಿಗಳ (1) ದೈಹಿಕ ಸಾಮಥ್ರ್ಯ ಮತ್ತು ದೇಹದಾಢ್ರ್ಯತೆ ಪರೀಕ್ಷೆ ET/PST ವೈಧ್ಯಕೀಯ ಪರೀಕ್ಷೆ ಮತ್ತು (3) ನೇಮಕಾತಿ ಹೊಂದಿ ಕರ್ತವ್ಯಕ್ಕೆ ವರದಿ ಮಾಡಿದ ನಂತರ [ಪೊಲೀಸ್ ಅಧೀಕ್ಷಕರು ಧಾರವಾಡ ರವರು ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳಿಂದ ಪಡೆದ] ಬೆರಳು ಮುದ್ರೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರನ್ವಯ ಪೊಲೀಸ್ ಇನ್ಸಪೆಕ್ಟರ್, ಬೆರಳು ಮುದ್ರೆ ಘಟಕ, ಜಿ.ಪೊ.ಕ., ಧಾರವಾಡ ರವರು ಪರಿಶೀಲನೆ ಮಾಡಿ ವರದಿಯನ್ನು ನೀಡಿರುತ್ತಾರೆ.
ಬೆರಳು ಮುದ್ರೆ ತಜ್ಞರ ವರದಿಯಲ್ಲಿ ಬೆರಳು ಮುದ್ರೆಗಳನ್ನು ಪರಿಶೀಲಿಸಿದ್ದರಲ್ಲಿ ವೈಧ್ಯಕೀಯ ಪರೀಕ್ಷೆಯ ಕಾಲಕ್ಕೆ ಮತ್ತು ದೇಹದಾಡ್ರ್ಯತೆ ಪರೀಕ್ಷೆಯ ಕಾಲಕ್ಕೆ ಪಡೆದ ಎಡಗೈ ಹೆಬ್ಬರಳಿನ ಮುದ್ರೆಯೊಂದಿಗೆ ಹೊಂದಾಣಿಕೆಯಾಗಿರುವುದಿಲ್ಲ ಎಂಬ ತಜ್ಞರ ಅಭಿಪ್ರಾಯದ ವರದಿ ನೀಡಿರುತ್ತಾರೆ.

ಆದ್ದರಿಂದ ಅಭ್ಯರ್ಥಿಯಾದ ಶಿವಪ್ಪ ಎಫ್ ಪಡೆಪ್ಪನವರ ನೇಮಕಾತಿ ಹೊಂದುವ ಉದ್ದೇಶದಿಂದ ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಯಿಸುವ ಉದ್ದೇಶದಿಂದ ಮಂಜುನಾಥ ಕರಿಗಾರನನ್ನು ಸಂಪರ್ಕಿಸುತ್ತಾನೆ. ಆತನು ಬಸವರಾಜ ಮೇಲ್‍ಮಟ್ಟಿ ಸಾ: ನಲ್ಲನಟ್ಟಿ ತಾ: ಗೋಕಾಕ ನೇತೃತ್ವದ ತಂಡದವರು ಈ ಕೆಲಸದಲ್ಲಿ ಸಹಾಯ ಮಾಡುತ್ತಾರೆ ಅಂತಾ ಹೇಳಿ ಅವರನ್ನು ಪರಿಚಯಿಸುತ್ತಾನೆ. ನಂತರ ಶಿವಪ್ಪನು, ಬಸವರಾಜ ಮೇಲ್‍ಮಟ್ಟಿ, ರವರಿಗೆ ಬದಲಿ ಒಬ್ಬನನ್ನು ನಿಲ್ಲಿಸಿ ಪರೀಕ್ಷೆ ಪಾಸ್ ಮಾಡಿಕೊಡಲು ಕೇಳಿಕೊಳ್ಳುತ್ತಾನೆ ಅದಕ್ಕೆ ಮೇಲ್‍ಮಟ್ಟಿಯು 2,30,000/- ರೂಪಾಯಿಗೆ ಬೇಡಿಕೆ ಇಟ್ಟು ಪಡೆದುಕೊಳ್ಳುತ್ತಾನೆ.

ಈ ಗುಂಪಿನಲ್ಲಿರುವ ಬಸವರಾಜ ದೇವರಮನಿ 1,95,000/- ರೂಗಳು, ಆನಂದ ಕೋಳೂರ 30,000/- ರೂಗಳನ್ನು ಹಂಚಿಕೊಂಡಿರುತ್ತಾರೆ. ಆ ಗುಂಪು ಆನಂದ ಕೋಳೂರು ರವರನ್ನು ಶಿವಪ್ಪ ಎಫ್ ಪಡೆಪ್ಪನವರ ಬದಲಿಗೆ ದೈಹಿಕ ಪರೀಕ್ಷೆಗೆ ಹಾಜರಾಗುವಂತೆ ಮಾಡಿ ಅರ್ಹತೆ ಪಡೆದಿದ್ದು ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾಗಿರುತ್ತಾನೆ.

ಈ ಪ್ರಕರಣದ ಆರೋಪಿ ಆನಂದ ಕೋಳೂರನು ಹಾಸನದ ನಗರದ ಬಡವಾಣೆ ಠಾಣೆ ಇದೇ ತರಹದ ಪ್ರಕರಣವೊಂದರಲ್ಲಿ ಭಾಗಿಯಾಗಿರುತ್ತಾನೆ ಎನ್ನಲಾಗಿದೆ. ಸರ್ಕಾರಕ್ಕೆ ವಂಚಿಸಿ ಬೇರೆ ವ್ಯಕ್ತಿಯನ್ನು ತನ್ನ ಬದಲಾಗಿ ಹಾಜರಾಗಿ ಸಹಿ ಮಾಡುವಂತೆ ದೈಹಿಕ ಪರೀಕ್ಷೆಗೆ ಹಾಜರಾಗಲು ದುಷ್ಪ್ರೇರಣೆ ನೀಡಿದ್ದು, ಅದರಂತೆ ಬೇರೆ ವ್ಯಕ್ತಿ ಶಿವಪ್ಪ ಎಫ್ ಪಡೆಪ್ಪನವರ ಇತನ ಹೆಸರಿನಲ್ಲಿ ದೈಹಿಕ ಪರೀಕ್ಷೆಗೆ ಹಾಜರಾಗಿ ತಾನೇ ನೈಜ ಅಭ್ಯರ್ಥಿ ಎಂದು ನಂಬಿಸಿ ಸುಳ್ಳು ದಾಖಲಾತಿಗಳನ್ನು ನೀಡಿ ವಂಚನೆ ಎಸಗಿ ಶಿವಪ್ಪ ಎಫ್ ಪಡೆಪ್ಪನವರ ಇತನು ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಕಾರಣರಾಗಿ ಮೋಸ ವಂಚನೆ ಅಪರಾಧ ಎಸಗಿರುವುದು ದಾಖಲಾತಿಗಳಿಂದ ಕಂಡುಬಂದಿದ್ದು, ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ನೀರೀಕ್ಷಕರು ಉಪ-ನಗರ ಪೊಲೀಸ್ ಠಾಣೆ, ಧಾರವಾಡ ರವರಲ್ಲಿ ದೂರು ಸಲ್ಲಿಸಲಾಗಿದೆ.

ಅರ್ಜಿ ಸಲ್ಲಿಸುವಾಗ ಮತ್ತು ದೈಹಿಕ ಪರೀಕ್ಷೆಗೆ ಹಾಜರಾಗುವಾಗ ನೀಡಿದ ಬೆರಚ್ಚು ಸಾಕ್ಷಿಯಿಂದಾಗಿ ಈ ಖದೀಮರು ಎಸ್.ಪಿ. ಕೃಷ್ಣಕಾಂತ ಅವರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಪ್ರಕರಣ ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಜಿಲ್ಲಾ ಪೊಲೀಸ್ ವಿಭಾಗದ ಬೆರಚ್ಚು ತಜ್ಞ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿ, ಬಹುಮಾನ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here