ಯಶವಂತನಗರದಲ್ಲಿ ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ..!!

0
262

ಬಳ್ಳಾರಿ ಜಿಲ್ಲಾ ಸಂಡೂರು ತಾಲೂಕಿನ ಯಶವಂತನಗರ ಗ್ರಾಮದಲ್ಲಿ ಕೊರೋನ ಟಾಸ್ಕ್ ಪೋರ್ಸ್ ಕಾರ್ಯಗಾರ ಸಭೆ ನಡೆಯಿತು. ಎನ್ ಕೆ ವೆಂಕಟೇಶ್ ನೋಡಲ್ ಅಧಿಕಾರಿಗಳು ಸಾಂಕ್ರಾಮಿಕ ರೋಗದ ಬಗ್ಗೆ ಕುರಿತು ಮಾತನಾಡಿದರು, ರೋಗರುಜಿನಗಳಿಂದ ದೂರವಿರಲು ಶುದ್ಧ ನೀರು ಕುಡಿಯುವುದು,. ಬಳಕೆ ಮಾಡಬೇಕು. ತಮ್ಮ ಮನೆ ಸುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು.
ಸೊಳ್ಳೆ ಕ್ರಿಮಿಕೀಟಗಳ ವಾಸ ಸ್ಥಾನವನ್ನು ತಮ್ಮ ಪರಿಸರದಿಂದ ದೂರವಿಡಬೇಕು. ಪರಿಸರ ಸ್ವಚತ್ಛವಾಗಿಡುವ ಮೂಲಕ ರೋಗ ತಡೆಗಟ್ಟಬೇಕು ಎಂದು ಮಾಹಿತಿ ನೀಡಿದರು.

ಯಶವಂತನಗರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಂಜಿನಪ್ಪ, ತಾಲೂಕು ನೋಡಲ್ ಅಧಿಕಾರಿ ವೆಂಕಟೇಶ್ ಎನ್ ಕೆ ,ಡಾಕ್ಟರ್ ಮನ್ಸೂರಲಿ , ಡಾಕ್ಟರ್ ಚಂದ್ರಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇವಣಸಿದ್ದಪ್ಪ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಹನುಮಂತಪ್ಪ , ಆರೋಗ್ಯ ಸಹಾಯಕಿ ಧರಣಿ ಮತ್ತು ಅಮ್ಜದ್ ಅಲಿ ಅಂಗನವಾಡಿ ಕಾರ್ಯಕರ್ತೆಯರಾದ ಟಿ. ಕವಿತಾ, ಬಿ. ಶಾರದಾ, ಪವಿತ್ರ, ಮಲ್ಲಮ್ಮ ಶಿವಗಂಗಮ್ಮ, ಮತ್ತು ಆಶಾ ಕಾರ್ಯಕರ್ತೆಯರಾದ ನಿರ್ಮಲ, ಭಾಗ್ಯ, ಸುನಂದಾ, ವಸಂತ ಮತ್ತು ಪೊಲೀಸ್ ಅಧಿಕಾರಿಯಾದ ಅಲ್ಲೂ ರಪ್ಪ, ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು

ಪಿಡಿಒ ಇವರು ಮಾತನಾಡಿ ಕಾರಣ ಮುಂಜಾಗ್ರತೆ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಮತ್ತು ಅದರ ಲಕ್ಷಣಗಳ ಬಗ್ಗೆ ತಿಳಿಸಿದರು

ಡಾಕ್ಟರ್ ಮನ್ಸೂರಲಿ ಮಾತನಾಡಿ ಅವರು ಎಲ್ಲರೂ ಮನೆಯಲ್ಲಿ ಇರಬೇಕು ಮತ್ತು ಮಾಸ್ಕ್ ಹಾಕಿಕೊಂಡಿರಬೇಕು ಎಲ್ಲರೂ ಕೊರನಾ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಭಯಪಡದೆ ಕರೋನ ಟೆಸ್ಟ್ ಮಾಡಿಸಿಕೊಳ್ಳಿ ಪಾಸಿಟಿವ್ ಬಂದರೆ ಹೋಮ್ ಐಸೋಲೇಷನ್ ನಿಮ್ಮ ಮನೆಯಲ್ಲಿ ನಿಮಗೆ ಟ್ರೀಟ್ಮೆಂಟ್ ಕೊಡುತ್ತಾರೆ ಆದ್ದರಿಂದ ಯಾರು ಭಯಪಡುವ ಅವಶ್ಯಕತೆ ಇಲ್ಲ

ಆರೋಗ್ಯ ಸಹಾಯಕಿ ಧರಣಿ ಮಾತನಾಡಿ ನಮ್ಮ ಜೊತೆ ವಾರ್ಡಿನ ಗ್ರಾಮ ಪಂಚಾಯತಿಯ ಸದಸ್ಯರು ಕೂಡ ನಮಗೆ ಸಹಕರಿಸಬೇಕು ಮತ್ತು ಅವರು ಕೂಡ ಕರೋನಾ ಟೆಸ್ಟ್ ಮಾಡಿಸಲು ನಿಮ್ಮ ಸಹಕಾರ ಬೇಕು ಎಂದು ವಿನಂತಿಸಿದರು

ಅಂಗನವಾಡಿ ಕಾರ್ಯಕರ್ತೆಯರ
ಟಿ.ಕವಿತಾ ಕೂಡ ತಮ್ಮ ಅಳಲನ್ನು ತೋಡಿಕೊಂಡರು ನಾವು ಮತ್ತು ಆಶಾ ಕಾರ್ಯಕರ್ತೆಯರು ಜೊತೆಗೂಡಿ ಮನೆ ಮನೆ ಸರ್ವೆ ಹೋದಾಗ ಅಲ್ಲಿನ ವಾಸ್ತವಾಂಶ ವನ್ನು ಹೇಳಿದರು ಮನೆ ಸರ್ವೆಗೆ ಹೋದಾಗ 40 ವರ್ಷ ಮೇಲ್ಪಟ್ಟವರಿಗೆ ಬಿಪಿ ಶುಗರ್ ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬಿಪಿ ಶುಗರ್ ಮತ್ತು ಸಾಮಾನ್ಯವಾಗಿ ನೆಗಡಿ ಕೆಮ್ಮು ಜ್ವರ ಇದ್ದವರಿಗೆ ಪಲ್ಸ್ ಚೆಕ್ ಮಾಡಲು ಹೋದರೆ ಅವರು ಕರೋನಾ ಟೆಸ್ಟ್ ಮಾಡ್ತಾರೆ ಅಂತ ಅನ್ಕೊಂಡು ಬೆರಳು ಕೊಡಲು ಭಯಪಡುತ್ತಾರೆ ಆದ್ದರಿಂದ ಅಂಗನವಾಡಿ ಕಾರ್ಯಕರ್ತೆ ಮತ್ತು ಆಶಾ ಕಾರ್ಯಕರ್ತೆಯರ ಜೊತೆಗೆ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಗ್ರಾಮಸ್ಥರ ಸಹಕಾರ ಅತಿ ಮುಖ್ಯ ಎಂದು ಹೇಳಿದರು

ಟಾಸ್ಕ್ ಫೋರ್ಸ್ ಸಮಿತಿಯ ತಂಡ ಗ್ರಾಮದ ಬೀದಿ ಬೀದಿಯಲ್ಲಿ ಹೋಗಿ 49 ಜನರಿಗೆ ಕರೋನಾ ಟೆಸ್ಟ್ ಮಾಡಿಸಲಾಯಿತು

LEAVE A REPLY

Please enter your comment!
Please enter your name here