ಕುಮಾರಸ್ವಾಮಿ ದೇಗುಲಕ್ಕೆ ನೂತನ ಟ್ರಸ್ಟ್‌ ರಚಿಸಿ: ವೆಂಕಟರಾವ್‌ ಘೋರ್ಪಡೆ ಆಗ್ರಹ

0
27

ಬಳ್ಳಾರಿ ಜಿಲ್ಲೆಯ ಸಂಡೂರು ನಿಂದ ಸುಮಾರು 10 ಕಿ.ಮೀ ದೂರದಲ್ಲಿರುವ
ಪುರಾಣ ಪ್ರಸಿದ್ಧ ಕುಮಾರಸ್ವಾಮಿ ದೇವಸ್ಥಾನಕ್ಕೆ ಭಕ್ತರಿಗೆ ಬರುವ ಭಕ್ತರಿಗೆ ಮೂಲ ಸೌಕರ್ಯಗಳು ದೊರೆಯುವಂತಾಗಬೇಕು ಈ ಹಿನ್ನೆಲೆಯಲ್ಲಿ ದೇವಸ್ಥಾನ ಸುವ್ಯವಸ್ಥಿತ ಆಡಳಿತಕ್ಕಾಗಿ ನೂತನ ಟ್ರಸ್ಟ್ ರಚನೆಯ ಅಗತ್ಯವಿದೆ ಎಂದು ರಾಜ್ಯ ಪಂಚಾಯತ್ ರಾಜ್ ಪರಿಷತ್ ಅಧ್ಯಕ್ಷ ಹಾಗೂ ಘೋರ್ಪಡೆ ರಾಜವಂಶಸ್ಥ ರಾಜಮನೆತನದ ಪ್ರಮುಖರಾದ ವೆಂಕಟರಾವ್ ಘೋರ್ಪಡೆ
ಬೇಸರವನ್ನು ವ್ಯಕ್ತಪಡಿಸಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಆಡಳಿತವನ್ನು ಕುಮಾರಸ್ವಾಮಿ ದೇವಸ್ಥಾನ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಈ ಬಾರಿಯ ಜಾತ್ರೆ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಹಲವು ರೀತಿಯ ಅವ್ಯವಸ್ಥೆ ಉಂಟಾಗಿದ್ದು, ಜಾತ್ರೆಗೆ ಬಂದ ಭಕ್ತರಿಗೆ ದರ್ಶನಕ್ಕೆ ತೊಂದರೆಯಾಗಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಹಲವರು ಪ್ರವೇಶಿಸಿದ್ದಾರೆ.

ಜಾತ್ರೆ ಸಮಯದಲ್ಲಿ ಭಕ್ತರಿಗೆ ನೀಡುವ ವಿಶೇಷ ಪ್ರಸಾದದ ಬೆಲೆ ಏರಿಕೆ ಮತ್ತು ವ್ಯತ್ಯಾಸಗಳನ್ನು ಮಾಡಿದ್ದು ಸರಿಯಾದ ಕ್ರಮವಾಗಿರಲಿಲ್ಲ, ಕಾರಣ ಅಲಂಕಾರ ದರ್ಶನಕ್ಕಾಗಿ 300, 600, ಹಾಗೂ ಮಳಿಗೆಗಳ ಅನುಮತಿ 4000/- ರೂಪಾಯಿಗೆ ಕೊಟ್ಟಿದ್ದು ಸಹ ಕಂಡುಬಂದಿದೆ, ಅದ್ದರಿಂದ ಎಲ್ಲಾ ಭಕ್ತಾದಿಗಳಿಗೆ ಒಂದೇ ರೀತಿಯಲ್ಲಿ ವಿತರಣೆ ಮಾಡುವುದು ಬಹುಮುಖ್ಯವಾದುದು, ಅಲ್ಲದೆ ದೇವಸ್ಥಾನಕ್ಕೆ ಟ್ರಸ್ಟ್ ರಚನೆಯನ್ನು ಮಾಡುವುದು ಅತಿ ಅಗತ್ಯವಾಗಿದೆ, ಹಾಗೇ
ದರ್ಶನದ ಟಿಕೆಟ್ ಹಾಗೂ ಪ್ರಸಾದದ ದರವನ್ನು ಹೆಚ್ಚಿಸಿದ್ದರ ಕುರಿತು
ಸಾರ್ವಜನಿಕರು ಸಂಘ ಸಂಸ್ಥೆಗಳು ದೂರಿದ್ದಾರೆ ಎಂದರು.

ದೇವಸ್ಥಾನದ ಆಡಳಿತದ ಅಧಿಕಾರ ಘೋರ್ಪಡೆ ರಾಜವಂಶಸ್ಥರಿಗೆ ದೊರೆತದ್ದು 1726ರಲ್ಲಿ ಸ್ವಾತಂತ್ರ್ಯ ನಂತರ ರಾಜರಿಗೆ ನೀಡುತ್ತಿದ್ದ ವಿಶೇಷ ಸೌಲತ್ತುಗಳನ್ನು
ಸರ್ಕಾರ ರದ್ದುಗೊಳಿಸಿದ ಮೇಲೆ ನಮ್ಮ ತಂದೆಯವರಾದ ಯಶವಂತರಾವ್ ಘೋರ್ಪಡೆಯವರು 1972ರಲ್ಲಿ ಸುಮಾರು 4500 ಎಕರೆ ಅರಣ್ಯ ಪ್ರದೇಶವನ್ನು ಸರ್ಕಾರಕ್ಕೆ ಮರಳಿಸಿದರು. ಅದಕ್ಕೆ ಪ್ರತಿಫಲವಾಗಿ ದೇವರಾಜ್ ಅರಸು ಅವರ ನೇತೃತ್ವದ ಸರ್ಕಾರ ಕುಮಾರಸ್ವಾಮಿ ದೇವಸ್ಥಾನಕ್ಕೆ 500 ಎಕರೆ ಜಾಗವನ್ನು ಬಿಟ್ಟು ಕೊಟ್ಟಿದೆ. ಈ ಜಾಗದಲ್ಲಿ ಕೆಲ ಪ್ರದೇಶ ಈಗ ಒತ್ತುವರಿಯಾಗಿದೆ. ಸರ್ಕಾರ ಇದನ್ನು ತೆರವುಗೊಳಿಸಿ, ಸರ್ವೆ ನಡೆಸಿ, ದೇವಸ್ಥಾನಕ್ಕೆ ಅದರ ಜಾಗವನ್ನು ಒಪ್ಪಿಸಬೇಕಿದೆ. ಎಂದರು.

ದೇವಸ್ಥಾನದ ಜಾಗವನ್ನು ಹದ್ದುಬಸ್ತುಗೊಳಿಸುವುದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಅಗತ್ಯವಿದೆ. ದೇವಸ್ಥಾನದ 500 ಎಕರೆ ಜಾಗ ದೇವಸ್ಥಾನಕ್ಕೆ ದೊರೆತರೆ, ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು. ಈ ಕುರಿತಂತೆ ನಾನು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿಯವರಿಗೆ ಪತ್ರ ಬರೆದಿದ್ದೇನೆ. ಅವರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ಪತ್ರವನ್ನು ಈಗ ಇಲಾಖೆಯ ಆಯುಕ್ತರಿಗೆ ಕಳುಹಿಸಲಾಗಿದೆ ಎಂದರು.

ಈ ಟ್ರಸ್ಟ್‌ನಲ್ಲಿ 6 ಜನರ ಸದಸ್ಯರಿರಬೇಕು. ಅದರಲ್ಲಿ ನಮ್ಮ ತಂದೆಯವರಾದ ದಿ.ಯಶವಂತರಾವ್ ಘೋರ್ಪಡೆಯವರ ನಾಲ್ಕು ಮಕ್ಕಳ ಕುಟುಂಬದವರಲ್ಲಿ ಒಬ್ಬೊಬ್ಬರನ್ನು ಟ್ರಸ್ಟಿಗಳನ್ನಾಗಿ, ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾ‌ರ್ ಅವರನ್ನು ಹಾಗೂ ಪದನಿಮಿತ್ತ ಸದಸ್ಯರನ್ನಾಗಿಸಬೇಕು. ಇದರಿಂದ ದೇವಸ್ಥಾನದ ಜಾಗದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮತ್ತು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗಲಿದೆ. ದೇವಸ್ಥಾನವೂ ಅಭಿವೃದ್ಧಿ ಕಾಣಲಿದೆ ಎಂದು ಪತ್ರದಲ್ಲಿ ತಿಳಿಸಿದ್ದೇನೆ. ಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದರು.


■ದೇವಸ್ಥಾನದ ಜಾಗವನ್ನು ಹದ್ದುಬಸ್ತುಗೊಳಿಸುವುದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಅಗತ್ಯ.

■ದೇವಸ್ಥಾನದ 500 ಎಕರೆ ಜಾಗ ದೇವಸ್ಥಾನಕ್ಕೆ ದೊರೆತರೆ, ಉತ್ತಮ ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು

■ಈ ಕುರಿತಂತೆ ನಾನು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿಯವರಿಗೆ ಪತ್ರ ಬರೆದಿದ್ದೇನೆ: ವೆಂಕಟರಾವ್

■ನೂತನ ಟ್ರಸ್ಟ್‌ನಿಂದ ದೇವಸ್ಥಾನದ ಜಾಗದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮತ್ತು ಸುವ್ಯವಸ್ಥೆ ಕಾಪಾಡಲು ಅನುಕೂಲ

LEAVE A REPLY

Please enter your comment!
Please enter your name here