ಸದೃಡ ಭಾರತ ನಿರ್ಮಾಣ ಮಹಿಳೆಯರಿಂದ ಸಾಧ್ಯ: ಡಾ.ಪ್ರಿಯಾಂಕ.

0
55

ದಾವಣಗೆರೆ ಮಾ.08:ಸದೃಢ ಭಾರತ ನಿರ್ಮಾಣ ಮಾಡಲು ಮಹಿಳೆಯರ ಪಾತ್ರ ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಪ್ರಿಯಾಂಕ ತಿಳಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಭಾರತ ಸೇವಾದಳ ಜಾಗೃತ ಮಹಿಳಾ ಸಮಾಜ, ಸೇವಾ ಸಮಾಜ, ಅಕ್ಕಮಹಾದೇವಿ ಸಮಾಜದ ವತಿಯಿಂದ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ, ಮಹಿಳಾ ಜಾಗೃತಿ ಮತ್ತು ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವವೇ ಎದುರಿಸಿದ ಕೊರಾನಾ ಮಹಾಮಾರಿಯಿಂದ ಆದ ಪರಿಣಾಮಗಳ ಬಗ್ಗೆ ಮಾತನಾಡಿದರು. ಕೊರೊನ ಸಂದರ್ಭದಲ್ಲಿ ಮಹಿಳಾ ವೈದ್ಯರು, ಆಶಾ ಕಾರ್ಯಕರ್ತೆಯರು, ಮಹಿಳಾ ನರ್ಸ್‍ಗಳು ಪ್ರಾಣದ ಹಂಗು ತೊರೆದು ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಕರ್ನಾಟಕದಲ್ಲಿ ಜನರಿಗೆ ಆದ ಉಸಿರಾಟದ ತೊಂದರೆ ಜ್ವರ,ಶೀತ, ಗಂಟಲು ಕೆರೆತ, ಸಾವಿನ ಬಗ್ಗೆ ಮಾಹಿತಿಯನ್ನು ನೀಡಿದರು ಸರ್ಕಾರವು ಲಸಿಕೆಯನ್ನು ನೀಡುತ್ತಿದ್ದು ಇದರ ಸದುಪಯೋಗ ಪಡೆಯಬೇಕೆಂದು ಸಾರ್ವಜನಿಕರಿಗೆ ತಿಳಿಸಿದರು. ಈಗಾಗಲೇ ಬೇಸಿಗೆಕಾಲ ಆರಂಭವಾಗಿದ್ದು ಜಾತ್ರೆಗಳು ಹಬ್ಬ-ಹರಿದಿನಗಳು ಸಭೆ-ಸಮಾರಂಭಗಳು ನಡೆಯುತ್ತಿರುವುದರಿಂದ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಆರೋಗ್ಯದ ಕಡೆ ಗಮನವನ್ನು ಹರಿಸಬೇಕು ನಿಯಮಿತವಾಗಿ ಯೋಗ ಅಭ್ಯಾಸಗಳನ್ನು ಮಾಡಬೇಕು ಪ್ರಾಣಾಯಾಮಗಳನ್ನು ಮಾಡಬೇಕು ಹಣ್ಣುಗಳು ಹಸಿರು ತರಕಾರಿ ಸೊಪ್ಪುಗಳನ್ನು ಧಾನ್ಯಗಳನ್ನು ಉಪಯೋಗಿಸಬೇಕು ಎಂದರು ದೇಹದ ಶುಭ್ರತೆಯ ಜೊತೆಗೆ ಸ್ವಚ್ಛವಾದ ಮಾಸ್ಕ್ ಧರಿಸಬೇಕು ಸ್ಯಾನಿಟೈಸರ್ ಉಪಯೋಗಿಸಬೇಕು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕೊರನ ಸಂದರ್ಭದಲ್ಲಿ ಭಾರತ ಸೇವಾದಳ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸುಮತಿ ಜಯಪ್ಪ ಮಾತನಾಡಿ ಮಹಿಳೆ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಎಲ್ಲಾ ಕ್ಷೇತ್ರದಲ್ಲೂ ಸಹ ಸಕ್ರಿಯವಾಗಿ ಪಾಲ್ಗೊಂಡು ಜಾಗೃತಿಯನ್ನು ಹೊಂದಬೇಕೆಂದು ತಿಳಿಸಿದರು ಒನಕೆ ಓಬವ್ವ ಇಂದಿರಾಗಾಂಧಿ ಕಿತ್ತೂರಾಣಿ ಚೆನ್ನಮ್ಮ ಕ್ಯಾಪ್ಟನ್ ಲಕ್ಷ್ಮೀದೇವಿ ಇಂತಹ ನೂರಾರು ಜನರ ಆದರ್ಶವನ್ನು ನಾವು ರೂಢಿಸಿಕೊಳ್ಳಬೇಕೆಂದರು.
ನ್ಯಾಯವಾದಿಗಳಾದ ಮಂಜುಳಾ ಮಾತನಾಡಿ ಕಾನೂನಿನ ಬಗ್ಗೆ ಮಹಿಳೆಯರು ಸರಿಯಾಗಿ ಅಧ್ಯಯನ ಮಾಡಿ ತಮ್ಮ ಹಕ್ಕುಗಳಿಗೆ ಹೋರಾಟ ಮಾಡಿ ನ್ಯಾಯವನ್ನು ಪಡೆದುಕೊಳ್ಳಬೇಕೆಂದರು. ಮಹಿಳೆಯರಿಗೆ ವಿಶೇಷವಾದ ಸೌಲಭ್ಯಗಳು ಸರ್ಕಾರದಿಂದ ದೊರೆಯುತ್ತಿದ್ದು ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು. ಕಂಚಿಕೆರೆ ಸುಶೀಲಮ್ಮನವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಸ್ಕ್, ಸ್ಯಾನಿಟೈಸರ್ ಗಳನ್ನು ವಿತರಿಸಿದರು. ಎಂ ವಲಯದ ಸಂಘಟಕರಾದ ಅಣ್ಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಿಳೆಯರನ್ನು ಗೌರವಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here