ಪ್ರತಿ ತಾಲ್ಲೂಕಿನಲ್ಲಿ ಆಕ್ಸಿಜನ್ ಘಟಕಕ್ಕೆ ಕ್ರಮ: ಜಿಲ್ಲಾಧಿಕಾರಿ

0
122

ಮಂಡ್ಯ.ಮೇ.12 – ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಅವಶ್ಯಕತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಪ್ರತಿ ತಾಲ್ಲೂಕಿನಲ್ಲಿ ಆಕ್ಸಿಜನ್ ಯೂನಿಟ್ ಸ್ಥಾಪನೆಯೇ ನಮ್ಮ ಉದ್ದೇಶವಾಗಿದೆ ಈ ನಿಟ್ಟಿನಲ್ಲಿ ಕಾರ್ಖಾನೆ ಮತ್ತು ಏಜೆನ್ಸಿಯವರು ಸಹಕರಿಸಲು ಮುಂದಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್ .ಅಶ್ವಥಿ ಹೇಳಿದರು.
ಆಮ್ಲಜನಕ ಘಟಕ ಸ್ಥಾಪನೆ ಸಂಬಂಧ ನಡೆದ ಜೂಮ್ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ಮಂಡ್ಯ ಮತ್ತು ಮಳವಳ್ಳಿಯಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ ಎಂದರು.
ಇನ್ನು ಹೊಂಬಾಳೆ ಗ್ರೂಪ್ ನಿಂದ 500 ಎಲ್ ಪಿಎಂ ಆಕ್ಸಿಜನ್ ಯೂನಿಟ್ ನ್ನು ಕೆ.ಆರ್ ಪೇಟೆ ಮತ್ತು ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸುವ ನೆರವಿಗೆ ಮುಂದೆ ಬಂದಿದೆ ಎಂದರು.
ಪಾಂಡವಪುರದಿಂದ 400 ಅಥವಾ 500 ಎಲ್ ಪಿ ಎಂ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ 1 ಘಟಕ ಸ್ಥಾಪನೆಗೆ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಮುರಗೇಶ್ ನಿರಾಣಿ ಷುಗರ್ ಕಂಪನಿಯವರ ಜೊತೆ ಚರ್ಚೆಯಲ್ಲಿದೆ.
ಇನ್ನು ಮನ್ ಮುಲ್ ವತಿಯಿಂದ ಮದ್ದೂರಿನ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಯೂನಿಟ್ ಸ್ಥಾಪನೆಗೆ ಮುಂದೆ ಬಂದಿದೆ ಎಂದರು.
ನಾಗಮಂಗಲದಲ್ಲಿ ಆಕ್ಸಿಜನ್ ಯೂನಿಟ್ ಸ್ಥಾಪನೆ ಸಂಬಂಧ 7 ಕೈಗಾರಿಕೆಗಳು ಮುಂದೆ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ನಾಗರಾಜು ಹಾಗೂ ಜಿಲ್ಲೆಯ ವಿವಿಧ ಕಂಪನಿಗಳ ವ್ಯವಸ್ಥಾಪಕರು ,ನಿರ್ದೇಶಕರು ಮತ್ತಿತರಿದ್ದರು.

LEAVE A REPLY

Please enter your comment!
Please enter your name here