ತಾಲೂಕಿನಾದ್ಯಂತ 17 ಸಾವಿರ ನಕಲಿ ಮತದಾರರಿದ್ದು,ನಕಲಿ ಮತದಾರರು ಪಕ್ಷಕ್ಕೆ ಮಾರಕ; ವೈ ಎಂ ಸತೀಶ್

0
57

ಸಂಡೂರು:ಫೆ:5: :ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ 10 ವರ್ಷಗಳನ್ನು ಪೂರೈಸಿದೆ ಈ ಸುಸಂದರ್ಭದಲ್ಲಿ ಹತ್ತು ವರ್ಷಗಳ ಸಾಧನೆಯನ್ನ ಮತದಾರ ಪ್ರಭುಗಳಿಗೆ ತಿಳಿಸಿಕೊಡುವ ಮಹತ್ತರವಾದ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರ ಹೆಗಲ ಮೇಲಿದೆ ಎಂದು ವಿಧಾನಪರಿಷತ್ ಸದಸ್ಯ ವೈ ಎಂ ಸತೀಶ್ ತಿಳಿಸಿದರು.

ಅವರು ಪಟ್ಟಣದ ಕಾರ್ತಿಕ್ ಘೋರ್ಪಡೆಯವರ ನಿವಾಸದ ಅವರಣದಲ್ಲಿ ತಾಲೂಕು ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಠಿಸಿ ಮಾತನಾಡಿ ನಾವು ಪ್ರತಿ ಗ್ರಾಮಕ್ಕೆ , ಭೂತ್ ಮಟ್ಟಕ್ಕೆ ತಲುಪಿಸಲು ಪ್ರಮುಖವಾಗಿ ಬಿಜೆಪಿಯ ಹಿರಿಯ ನಾಯಕ. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಅಭಿವೃದ್ಧಿ ಕೆಲಸ ಮಾಡಿಯೂ ಚುನಾವಣೆಯಲ್ಲಿ ಸೋತಿದ್ದು ಏಕೆ ಎಂದು ಕೇಳಿದ ಸುದ್ದಿಗಾರರ ಪ್ರಶ್ನೆಗೆ ನಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನ ನಮ್ಮ ಕಾರ್ಯಕರ್ತರು ಮತದಾರರ ಬಳಿ ಕೊಂಡುಯುವಲ್ಲಿ ಸೋತಿದ್ದಾರೆ ಎಂದು ತಿಳಿಸಿದ್ದರು ಅದು ನಿಜವೂ ಆಗಿತ್ತು. ಹಾಗಾಗಿ ಈ ಬಾರಿ ಬಿಜೆಪಿ ಪಕ್ಷ ತನ್ನ ಹತ್ತು ವರ್ಷಗಳ ಅವಧಿಯಲ್ಲಿ ಸರ್ಕಾರ ಮಾಡಿದ ಸಾಧನೆಯನ್ನು ಮತದಾರ ಪ್ರಭುಗಳ ಮನಮುಟ್ಟುವಂತೆ ಹೇಳುವ ಮೂಲಕ ಮೋದಿಜಿ ಅವರ ನೇತೃತ್ವದ ಬಿಜೆಪಿ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಶ್ರಮಿಸಬೇಕು

ತಾಲೂಕಿನಾದ್ಯಂತ 17 ಸಾವಿರ ನಕಲಿ ಮತದಾರರಿದ್ದು ನಕಲಿ ಮತದಾರರು ಪಕ್ಷಕ್ಕೆ ಮಾರಕವಾಗುತ್ತಾರೆ ಆದ್ದರಿಂದ ಪಟ್ಟಿಯಿಂದ ಕೈ ಬಿಡುವಂತೆ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಬೇಕು, ಅಲ್ಲದೆ ಕೇಂದ್ರ ಸರ್ಕಾರ ಮಾಡಿದ ಗರೀಬ್ ಕಲ್ಯಾಣ 80 ಕೋಟಿ ಬಡವರಿಗೆ, 8727 ಜನೌಷಧಿಕೇಂದ್ರ ಸ್ಥಾಪನೆ, ಸುಕನ್ಯಾ ಸಮೃದ್ದೀ ಯೋಜನೆಯ 2252894 ಫಲಾನುಭವಿಗಳು, ಪ್ರಧಾನಮಂತ್ರಿ ಮುದ್ರಾಯೋಜನೆ 1,47,863.89 ಕೋಟಿ ನೀಡಿಕೆ, ಬೆಳೆ ವಿಮೆಯೋಜನೆ 90ಲಕ್ಷ ರೈತರಿಗೆ, ಮೇಕ್ ಇನ್ ಇಂಡಿಯಾ 4000 ಅಧಿಕ ಹೂಡಿಕೆ, ಎಲ್.ಪಿ.ಜಿ ಉಚಿತ ವಿತರಣೆ, ಕಿಸಾನ್ ಸಮ್ಮಾನ್ ನಿಧಿ, ಹೀಗೆ ಹತ್ತು ಹಲವು ಯೋಜನೆಗಳನ್ನು ಜನತೆಗೆ ತಿಳಿಸಿ ಮನವರಿಕೆ ಮಾಡಿ ಎಂದು ಕರೆ ನೀಡಿದರು.

ನಿಕಟಪೂರ್ವ ಜಿಲ್ಲಾಧ್ಯಕ್ಷ ಮುರಾರಿಗೌಡ ಮಾತನಾಡಿ ಇದೇ ತಿಂಗಳ ಒಂಬತ್ತನೇ ತಾರೀಖಿನಿಂದ 11ರವರೆಗೆ ಗ್ರಾಮ ಚಲೋ ಅಭಿಯಾನ ದೇಶದಾದ್ಯಂತ ನರೇಂದ್ರ ಮೋದಿ ಅವರಿಂದ ಚಾಲನೆ ದೊರೆತ ನಂತರ ಚಾಲನೆಗೊಳ್ಳಲಿದೆ ಕಾರ್ಯಕರ್ತರೆಲ್ಲರು ಗ್ರಾಮ, ಬೂತ್ ಮಟ್ಟಗಳಲ್ಲಿ ಸಂಘ ಸಂಸ್ಥೆಗಳ ಮುಖಂಡರನ್ನು, ಹಿರಿಯ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಅಭ್ಯರ್ಥಿ ಯಾರೇ ಆಗಿರಲಿ ಬಿಜೆಪಿ ಮತ್ತು ನರೇಂದ್ರ ಮೋದಿಯವರ ಬಲ ತುಂಬುವ ಕೆಲಸ ಮಾಡುವುದರ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನ ಗೆಲ್ಲಿಸಿಕೊಳ್ಳೋಣ ಆ ಮೂಲಕ ಸದೃಢ ಭಾರತದ ನಿರ್ಮಾಣ ಮಾಡೋಣ ಎಂದರು.

ಮಂಡಲ ಅಧ್ಯಕ್ಷ ಜಿ ಟಿ ಪಂಪಾಪತಿ ಗ್ರಾಮ ಚಲೋ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ತೆಗೆದುಕೊಳ್ಳಬೇಕಾದ ಜವಾಬ್ದಾರಿ ಮತದಾರರೊಂದಿಗೆ ಚರ್ಚಿಸಬೇಕಾದ ವಿಷಯಗಳ ಕುರಿತು ಮಾತನಾಡಿದರು.

ಈ ಸಂಧರ್ಭದಲ್ಲಿ ವಾಡ ಮಾಜಿ ಅಧ್ಯಕ್ಷ ಕರಡಿ ಯರಿಸ್ವಾಮಿ. ಪ್ರವೀಣ್ ಕುಮಾರ್. ದರೋಜಿ ರಮೇಶ್ ಪುರುಷೋತ್ತಮ, ಕೃಷ್ಣಪ್ಪ,ಪುಷ್ಪಾ, ರಾಮಂಜಿನೆಯ, ನಾನಾ ನಿಕ್ಕಂ, ಗಂಡಿ ಮಾರಪ್ಪ, ಸುಬ್ಬಣ್ಣ, ಸೇರಿದಂತೆ ತಾಲೂಕು ಮಟ್ಟದ ಮತ್ತು ಬೂತ್ ಮಟ್ಟದ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here