ಅಕ್ರಮ ಗಣಿಗಾರಿಕೆಗಳನ್ನು ತಡೆಗಟ್ಟಿ: ಸಚಿವ ಆಚಾರ ಹಾಲಪ್ಪ ಬಸಪ್ಪ

0
107

ಇಲಾಖೆಯ ಕುಂದು ಕೊರತೆಗಳನ್ನು ಬಗೆಹರಿಸಿ ಸರಿಯಾದ ಕ್ರಮ ವಹಿಸಿ ಕರ್ತವ್ಯ ನಿರ್ವಹಿಸಿ ಹಾಗೂ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಿ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಸಚಿವ ಆಚಾರ ಹಾಲಪ್ಪ ಬಸಪ್ಪ ನವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಎಲ್ಲಾ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿದರೂ ಸಹ ಮರಳು ಕಳ್ಳಸಾಗಣಿಕೆ ನಿಂತಿಲ್ಲ ಇದನ್ನು ನಿಲ್ಲಿಸಲು ಕ್ರಮವಹಿಸಿ ಎಂದರು. ಸಮರ್ಪಕವಾದ ಚೆಕ್ ಪೆÇೀಸ್ಟ್ ಗಳನ್ನು ನಿರ್ಮಿಸಿ, ಕರ್ತವ್ಯಕ್ಕೆ ಪೆÇಲೀಸರನ್ನು ನಿಯೋಜಿಸಿ ಎಂದು ಹೇಳಿದರು.
ಅಕ್ರಮ ತಡೆಯಲು ಭೂ ವಿಜ್ಞಾನಿಗಳ ಜೊತೆ ಪೆÇಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ನಿಮ್ಮೊಂದಿಗೆ ಸದಾ ಇರುತ್ತಾರೆ, ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಎಂದರು
ಮಕ್ಕಳಿಗೆ ನೀಡುವಂತಹ ಪೌಷ್ಟಿಕ ಆಹಾರದಲ್ಲಿ ಲೋಪವಾಗದಂತೆ ಕರ್ತವ್ಯ ನಿರ್ವಹಿಸಿ, ಯಾವುದೇ ರೀತಿಯಿಂದಲೂ ಮಕ್ಕಳಿಗೆ ಅನ್ಯಾಯವಾಗಬಾರದು ಅವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಹೇಳಿದರು.
ಅಂಗನವಾಡಿಗಳಲ್ಲಿ ಪೆÇೀಷಕರು ಮತ್ತು ಪಂಚಾಯತಿ ಅಧ್ಯಕ್ಷರನ್ನು ಒಳಗೊಂಡಂತೆ ಸಮಿತಿ ರಚನೆಯಾಗಿದೆ. ಆ ಹಂತದಲ್ಲಿ ಗುಣಮಟ್ಟದ ಆಹಾರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಉತ್ತಮ ಗುಣಮಟ್ಟದಲ್ಲಿ ತಲುಪಿಸಬೇಕು ಮೊದಲು ಆಹಾರದ ಗುಣಮಟ್ಟವನ್ನು ಪರೀಕ್ಷಿಸುವ ಪ್ರಯೋಗಾಲಯವನ್ನು ಬದಲಾಯಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿಗಳನ್ನು ಸ್ವಂತ ಕಟ್ಟಡಕ್ಕೆ ವರ್ಗಾಯಿಸುವಂತೆ ಹಾಗೂ ಅವುಗಳು ಉತ್ತಮ ಸೌಕರ್ಯಗಳಿಂದ ಕೂಡಿರಬೇಕು ಎಂದು ಹೇಳಿದರು.
ಸ್ಥಳೀಯ ಮಟ್ಟದಲ್ಲಿ ಬಾಲ್ಯ ವಿವಾಹದ ವಿರುದ್ಧ ಪೆÇಲೀಸರು ಹೆಚ್ಚಿನ ನಿಗಾವಹಿಸಿ ಬಾಲ್ಯವಿವಾಹ ತಡೆಗೆ ಕ್ರಮವಹಿಸಿ ಎಂದು ಹೇಳಿದರು.
ಯು.ಡಿ.ಐ.ಡಿ ಕಾರ್ಡ್ ನ್ನು ಕೊಡುವುದರಲ್ಲಿ ಯಾವುದೇ ವಿಳಂಬ ನಡೆಸದೇ ಆದಷ್ಟು ಬೇಗ ವಿಕಲಚೇತನ ಚೇತನರಿಗೆ ತಲುಪಿಸಬೇಕಾದ ಕಾರ್ಯವನ್ನು ತುರ್ತಾಗಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆ ಕುರಿತು ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ. ಕೆ.ಸಿ. ನಾರಾಯಣ ಗೌಡ ಅವರು ನದಿಗಳಲ್ಲಿ ನಡೆಯುವ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟಿ ಹಾಗೂ ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಿ ಹಾಗೂ ಪೆÇೀಲಿಸ್ ಇಲಾಖೆ ಈ ವಿಷಯದಲ್ಲಿ ವಿಶೇಷವಾಗಿ ನಿಗಾವಹಿಸಿ ಎಂದು ಹೇಳಿದರು.
ಗಣಿ ಮತ್ತು ಭೂವಿಜ್ಞಾನದ ಅಧಿಕಾರಿಗಳು ಬಹಳ ಎಚ್ಚರ ದಿಂದ ಕರ್ತವ್ಯ ನಿರ್ವಹಿಸಿ ಬಡಜನರು ಮನೆಕಟ್ಟಲು ಅವರ ಜಮೀನಿನಲ್ಲಿ ಮರಳನ್ನು ತೆಗೆದುಕೊಳ್ಳುವವರಿಗೆ ಅವಕಾಶ ಕಲ್ಪಿಸಿಕೊಡಿ ಅವರಿಗೆ ತೊಂದರೆ ಮಾಡಬೇಡಿ ಎಂದು ಹೇಳಿದರು.
ಅಂಗನವಾಡಿಗಳನ್ನು ಬಹಳ ಸ್ವಚ್ಛತೆಯಿಂದ ಇರಬೇಕು ಅದರ ಬಗ್ಗೆ ಗಮನಹರಿಸಿ ಮಕ್ಕಳಿಗೆ ಪೌಷ್ಠಿಕ ಆಹಾರ ಸಮರ್ಪಕವಾಗಿ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಶಾಸಕರುಗಳಾದ ಸುರೇಶ್ ಗೌಡ, ಎಂ. ಶ್ರೀನಿವಾಸ್, ಡಾ.ಕೆ ಅನ್ನದಾನಿ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಜಿ.ಆರ್.ಜೆ. ದಿವ್ಯಪ್ರಭು, ವಾಣಿಜ್ಯಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ನಿರ್ದೇಶಕರಾದ ಪ್ರಿಯಾಂಕ ಮೇರಿ ಪ್ರನ್ಸಿಸ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ. ರಾಮ್ ಪ್ರಸಾಥ ಮನೋಹರ್ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಎನ್.ಯತೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here