ಬಳ್ಳಾರಿಯಲ್ಲಿ ರೆಮ್ ಡಿಸಿವರ್ ಅಕ್ರಮ ದಂಧೆ ಪ್ರಕರಣ ಮತ್ತೆ ಮೂವರ ಪ್ರತಿಷ್ಟಿತರ ಬಂಧನ

0
171

ಬಳ್ಳಾರಿ ಮೇ 13 : ಕೋವಿಡ್ ಸೋಂಕು‌ ನಿವಾರಣೆಗೆ ಸಹಕಾರಿಯಾಗಬಲ್ಲ 3 ಸಾವಿರದ ರೆಮ್ ಡಿಸಿವಿರ್ ಇಂಜೆಕ್ಷನ್ ನನ್ನು 30 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ದಂಧೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂರು ಜನ ಪ್ರತಿಷ್ಟಿತ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರು ಉಧ್ಯಮಿ ಪೋಲಾ ಪ್ರವೀಣ್, ಉದ್ಯಮಿ, ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ, ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯ ಸಿಂಡಿಕೇಟ್ ಸದಸ್ಯ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ ಮತ್ತು ಮಂಜುನಾಥ ಮೆಡಕಲ್ ಎಜೆನ್ಸಿಯ ಮಾಲೀಕ ವೆಂಕಟೇಶ್ ಬಾಬು.

ನಗರದ ಎಂ.ಜಿ.ಬಳಿಯ ಕಿಶೋರ್ ಕುಮಾರ್ ಎಂಬಾತ ರೆಮ್ ಡಿಸಿವರ್ ಇಂಜಕ್ಷನ್ ನನ್ನು ಅಧಿಕ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ.
ಆತನಿಂದ ಆರು ಇಂಜೆಕ್ಷನ್ ಪಡೆದು ಕೆಲ ದಿನಗಳ ಹಿಂದೆ ಬಂಧಿಸಲಾಗಿತ್ತು.

ಜನ ಪ್ರತಿನಿಧಿಗಳ ಒತ್ತಡದಿಂದ ಪೊಲೀಸರು ಈ ಪ್ರಕರಣದಲ್ಲಿ ಆರೋಪಿ ಕಿಶೋರ್ ಹಿಂದೆ ನಗರದ ಪ್ರಬಲ ಶಕ್ತಿಗಳನ್ನು ಕೈ ಬಿಡುತ್ತಿದ್ದಾರೆ. ಅದಕ್ಕಾಗಿ ಆಡಳಿತಾರೂಡ ಬಿಜೆಪಿ ಪಕ್ಷದ ಮುಖಂಡರಿಂದ ಮೇಲಿನಿಂದ ಒತ್ತಡ ಬಂದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಅಷ್ಟೇ ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಈ ವಿಷಯ ನುಂಗಲಾರದ ಬಿಸಿ ತುಪ್ಪ ವಾಗಿ ಪರಿಣಮಿಸಿತ್ತು. ಮಾಧ್ಯಮಗಳ ಪ್ರಶ್ನೆಗಳಿಂದ ಪ್ರಕರಣದ ಆರೋಪಿಗಳನ್ನು ರಕ್ಷಿಸಲ್ಲ. ಸಧ್ಯದಲ್ಲೆ ಎಲ್ಲರನ್ನೂ ಬಂಧಿಸಲಿದೆ ಎಂದಿದ್ದರು. ಇದಕ್ಕೆ ಎಸ್ಪಿ ಅಡಾವತ್ ಸಹ ಹೌದು ಎಂದಿದ್ದರು.
ಈಗ ಪ್ರಕರಣದಲ್ಲಿ ಪೋಲೋ ಪ್ರವೀಣ್, ಮರ್ಚೇಡ್ ಮಲ್ಲಿಕಾರ್ಜುನಗೌಡ ಮತ್ತು
ಮಂಜುನಾಥ ಮೆಡಿಕಲ್ ಎಜೆನ್ಸಿಯ ಮಾಲೀಕ‌ ವೆಂಕಟೇಶ್ ಬಾಬು ಅವರನ್ನು ಬಂಧಿಸಿದೆ. ಆದರೆ ಇದರಲ್ಲಿ ಇವರಷ್ಷೇ ಅಲ್ಲ ಇನ್ನು ಪ್ರತಿಷ್ಟಿತರಾದ, ವೈದ್ಯಕೀಯ ‌ವೃತ್ತಿಯಲ್ಲಿ‌ ಇರುವವರನ್ನು ರಕ್ಷಿಸಲಾಗಿದೆ ಎಂಬ‌ ಮಾತುಗಳು ಕೇಳಿಬಬಂದಿವೆ. ಪೊಲೀಸರು ಅವರನ್ನು ಬಂಧಿಸುತ್ತಾರ ಎಂಬುದನ್ನು ಕಾದು‌ ನೋಡಬೇಕಿದೆ

LEAVE A REPLY

Please enter your comment!
Please enter your name here