ಕೊಟ್ಟೂರು ತಾಲೂಕು ಕಛೇರಿಯಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ

0
268

ಕೊಟ್ಟೂರು:ಆಗಸ್ಟ್:19:- ತಾಲೂಕ ಕಛೇರಿಯಲ್ಲಿ ಮಹಾತ್ಮಗಾಂಧೀಜಿ ಸಭಾಂಗಣದಲ್ಲಿ ಶ್ರೀ ಕೃಷ್ಣ ಜಯಂತಿಯನ್ನು ಆಚರಿಸಲಾಯಿತು.
ಕೊಟ್ಟೂರು ತಾಲೂಕಿನ ಚಿರಿಬಿ ಗ್ರಾಮದಲ್ಲಿ ಗೊಲ್ಲ @ ಯಾದವ ಸಮುದಾಯದವರಿದ್ದು, ಕೂಡ್ಲಿಗಿ ತಾಲೂಕಿನಲ್ಲಿ 40 ಗೊಲ್ಲರ ಹಟ್ಟಿಗಳಿದ್ದು, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾದವ ಸಮುದಾಯದವರಿದ್ದಾರೆ. ಈಬಾರಿ ಸರಳವಾಗಿ ಆಚರಿಸಲು ಸಮುದಾಯದವರು ವಿನಂತಿಸಿಕೊಂಡಿದ್ದರಿಂದ ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಟಾರ್ಚನೆಯಲ್ಲಿ ಮಾಡಿ ತಹಶೀಲ್ದಾರರಾದ ಎಂ.ಕುಮಾರಸ್ವಾಮಿ ಸರಳವಾಗಿ ಜಯಂತಿಯನ್ನು ಆಚರಿಸಿದರು.

ಕಂಸ, ಜರಾಸಂಧ, ಕಾಳಿಂಗ ಸರ್ಪ ಮುಂತಾದ ದುಷ್ಟರನ್ನ ಸಂಹರಿಸಿದ ಕೃಷ್ಣ ಧರ್ಮ ರಕ್ಷಣೆಗಾಗಿ ಅವತರಿಸಿದ ವಿಷ್ಣುವಿನ ಅವತಾರಗಳಲ್ಲಿ ಒಂದಾಗಿದೆ. ಮಹಾಭಾರತದಲ್ಲಿ ಧರ್ಮದ ರಕ್ಷಣೆಗಾಗಿ, ಒಳ್ಳೆಯವರ ಉಳಿಸಲು ಪಾಂಡವರ ಪರವಾಗಿ ನಿಂತು ಸಾರಥಿಯಾಗಿ ಮುನ್ನೆಡಸಿ ರಕ್ಷಿಸಿದ ಅವತಾರ ಪುರುಷ. ಇಂತಹ ಧರ್ಮರಕ್ಷಕ, ಯಾದವ ಅಥವಾ ಗೊಲ್ಲ ಸಮುದಾಯದ ಆರಾಧ್ಯ ದೈವ ಪುರುಷನಾದ ಶ್ರೀಕೃಷ್ಣನ ಜಯಂತಿಯನ್ನು ಆಚರಿಸುವುದು ಅರ್ಥಪೂರ್ಣವಾಗಿದೆ ಎಂದರು.

ಈ ಸಮಯದಲ್ಲಿ ಕೊಟ್ಟೂರು ತಾಲೂಕಿನ ಗೊಲ್ಲ ಸಮುದಾಯದ ಸಿ ಪಿ ಅಶೋಕ ಯಾದವ, ಎಸ್.ಗಂಗಾಧರ ಚಿರಿಬಿ ಗ್ರಾ ಪಂ ಸದಸ್ಯರು, ಆನಂದ ಎಸ್ ಪಿ, ಬೆಂಕಿ ರಾಮಪ್ಪ ಮಾಜಿ ಗ್ರಾ ಪಂ ಸದಸ್ಯರು, ಕೆ ಹನುಮಂತಪ್ಪ, ಡಿ ಜಿ ಸಿದ್ದೇಶ್, ಕೊಟ್ರೇಶ್ ಪಿ ಕೆ , ಎಸ್ ಜಿ ಸೋಮಪ್ಪ, ಎನ್ ಜಗದೀಶ ಹಾಜರಿದ್ದರು. ಶಿರಸ್ತೇದಾರರಾದ ನಾಗರಾಜ್ ಕೆ, ಕಂದಾಯ ನಿರೀಕ್ಷರಾದ ಡಿ ಶಿವಕುಮಾರ್, ಸಿಬ್ಬಂದಿಯಾದ ರವಿ ಹರಪನಹಳ್ಳಿ, ವಿಜಯಕುಮಾರ್, ಸಿರಾಜ್ ವುದ್ದೀನ್, ಸಿ ಮ ಗುರುಬಸವರಾಜ ಮುಂತಾದ ಸಿಬ್ಬಂದಿ ಹಾಜರಿದ್ದರು.

ವರದಿ:-ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here