ಸಂವಿಧಾನದ ಪ್ರಸ್ತಾವನೆ ಹೆಮ್ಮೆಯಿಂದ ಒದುವುದು ಒಂದು ಭಾಗ್ಯ; ಡಾ. ಸಾದಿಯ,

0
316

ಸಂಡೂರು: ಸೆ: 15: ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸಂವಿಧಾನದ ಪ್ರಸ್ತಾವನೆ ಒದುವ ದಿನಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ಸಂದರ್ಭದಲ್ಲಿ ಡಾ.ಸಾದಿಯ ಅವರು ಮಾತನಾಡಿ ಬೃಹತ್ ಗಾತ್ರದ, ಲಿಖಿತ ರೂಪದ ಸಂವಿಧಾನವನ್ನು ನಾವು ಅರ್ಪಿಸಿಕೊಂಡಿದ್ದೇವೆ, ಇದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ ಸರ್ಕಾರದ ಆದೇಶದಂತೆ ಇಂದು ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಛೇರಿಗಳಲ್ಲಿ ಏಕಕಾಲದಲ್ಲಿ ಸಂವಿಧಾನ ಒದುವುದು ದಾಖಲೆಯಾಗಿದೆ, ಭಾರತವು ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವವನ್ನು ಹೊಂದಿದೆ ಸಾರ್ವಜನಿಕರಲ್ಲಿ ಸಾಮಾಜಿಕ,ಆರ್ಥಿಕ,ರಾಜಕೀಯ ನ್ಯಾಯ ಒದಗಿಸಲು, ಸರ್ವರಿಗೂ ಸ್ಥಾನಮಾನ, ಅವಕಾಶವನ್ನು ದೊರೆಯುವಂತೆ ಮಾಡಲು ರಾಷ್ಟ್ರದ ಏಕತೆಯನ್ನು ಮತ್ತು ಅಖಂಡತೆಯನ್ನು ಎತ್ತಿಹಿಡಿದು ಭ್ರಾತೃಭಾವನೆಯನ್ನು ವೃದ್ಧಿಗೊಳಿಸಲು ಸಂವಿಧಾನವನ್ನು ಅರ್ಪಿಸಿ ಕೊಂಡಿದ್ದೇವೆ , ಅದರಂತೆ ಸರ್ವರೂ ಸಂಕಲ್ಪ ಮಾಡೋಣ ಎಂದು ತಿಳಿಸದ ಅವರು ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿದರು,ಎಲ್ಲರೂ ಅನುಸರಿಸಿದರು,

ಈ ಕಾರ್ಯಕ್ರಮದಲ್ಲಿ ಡಾ.ರಜಿಯಾ ಬೇಗಂ,ಡಾ.ಜಯಶ್ರೀ, ಹರ್ಷ, ಮಂಜುನಾಥ್, ವೆಂಕಟೇಶ್, ಶಶಿಧರ, ಅನ್ಸಾರಿ,ಇಸ್ಮಾಯಿಲ್, ಮಾರೇಶ್, ಶಿವಕುಮಾರ್, ಗುರುಬಸಮ್ಮ,ಬಾಸ್ಕರ್, ರೋಜಾ,ಗೀತಾ,ಆಶಾ ಲಕ್ಷ್ಮಿ, ವಿಜಯಲಕ್ಷ್ಮಿ, ಮತ್ತು ಸಾಮಾಜಿಕ ಕಾರ್ಯಕರ್ತ ಉಮಾಮಹೇಶ್,ವೀರೇಂದ್ರ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here