ಹಗರಿಬೊಮ್ಮನಹಳ್ಳಿ ಎಫ್ ಸಿ ಐ ಗೋಡೊನ್ ನಲ್ಲಿ ಬಸವರಾಜ್ ಎಂಬ ಹೆಗ್ಗಣ

0
413

ಹಗರಿಬೊಮ್ಮನಹಳ್ಳಿಯ ಆಹಾರ ಇಲಾಖೆಯ ಗೋಡೌನ್ ಮ್ಯಾನೇಜರ್ (ಎಫ್‍ಸಿಐ) ಆಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜ ಎಂಬ ವ್ಯಕ್ತಿ ಹಲವು ವರ್ಷಗಳಿಂದ ಆಹಾರ ಇಲಾಖೆಯನ್ನೇ ಹುರಿದು ಮುಕ್ಕುತ್ತಿದ್ದಾರೆ. ಕೆಸಿಎಸ್‍ಆರ್ ರೂಲ್ಸ್ ಪ್ರಕಾರ ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಉದ್ಯೋಗಿ 3 ವರ್ಷಗಳಿಗಿಂತ ಹೆಚ್ಚು ಒಂದೇ ಸ್ಥಳದಲ್ಲಿ ಕೆಲಸ ಮಾಡುವಂತಿಲ್ಲ. ಆದರೆ ಈ ಬಸವರಾಜ ಈತ `ಸಿ.? ಗ್ರೂಪ್
ದರ್ಜೆಯ ನೌಕರನಾಗಿದ್ದುಕೊಂಡು ಹೈಯರ್ ಆಫೀಸರ್ ತರಹ ಪೋಜು ಕೊಟ್ಟುಕೊಂಡು ಇಲಾಖೆಯಲ್ಲಿ ಇಲ್ಲೀಗಲ್ ದಂಧೆಯಲ್ಲಿ
ತೊಡಗಿದ್ದಾನೆ.

ನ್ಯಾಯಬೆಲೆ ಅಂಗಡಿ ಮಾಲೀಕರಿಗೇ ಪಂಗನಾಮ :-
ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 47 ನ್ಯಾಯಬೆಲೆ ಅಂಗಡಿಗಳಿದ್ದು, ಈ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆಯಾಗುವ ಅಕ್ಕಿ ಪ್ರತಿ ತಿಂಗಳಿಗೆ 8,56,795 ಕ್ವಿಂಟಾಲ್. ಇದರ ಶೇ. 5ರಷ್ಟು ರಾಗಿ, ಗೋಧಿ ಇತ್ಯಾದಿ, ಸರ್ಕಾರವು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಅನ್ಯಾಯವಾಗಬಾರೆಂದು ಪ್ರತಿ 50 ಕೆ.ಜಿ. ಚೀಲಕ್ಕೆ 565 ಗ್ರಾಂ. ಅಕ್ಕಿಯನ್ನು ಖಾಲಿ ಚೀಲದ ಬಾಬತ್ತಾಗಿ ಕೊಡುತ್ತದೆ. ಹಾಗೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಆ ರೀತಿ ಕೊಟ್ಟಾಗ ಮಾತ್ರ ಅವರಿಗೆ ನ್ಯಾಯ ಸಿಗುತ್ತದೆ. ಪಡಿತರ ತೆಗೆದುಕೊಳ್ಳುವ ಜನರಿಗೂ ಅನ್ಯಾಯವಾಗುವುದಿಲ್ಲ.

ಆದರೆ ಎಫ್‍ಸಿಐ ಗೋಡೌನ್ ಮೇನೇಜರ್ ಬಸವರಾಜ ಎಂಬ ಅಸ್ಸಾಮಿ ಪ್ರತಿ ಚೀಲಕ್ಕೆ ಬರುವ 565 ಗ್ರಾಂ. ಅಕ್ಕಿಯನ್ನು ಮಾಲೀಕರಿಗೆ ಕೊಡದೇ ಒಟ್ಟು 47 ನ್ಯಾಯಬೆಲೆ ಅಂಗಡಿಗಳಿಗೆ ಹೋಗುವ ಲಕ್ಷಾಂತರ ಕೆ.ಜಿ., ನಿರ್ಧಿಷ್ಟವಾಗಿ ಹೇಳುವುದಾದರೆ ಪ್ರತಿ ತಿಂಗಳಿಗೆ 200 ಟನ್‍ನಷ್ಟು ಅಕ್ಕಿಯನ್ನು ತಾನೊಬ್ಬನೇ ಕಬಳಿಸುತ್ತಿದ್ದಾನೆಂದರೆ ಈತನಿಗೆ ಹೇಳುವವರು ಕೇಳುವವರು ಯಾರೂ ಇಲ್ಲವೇ ಈತ ಆಡಿದ್ದೇ ಆಟ, ಮಾಡಿದ್ದೇ ಪಾತ್ರ ಎಂಬಂತಾಗಿ ಬಿಟ್ಟಿದೆ. ಈತನ ಆಟಾಟೋಪಗಳು ಮೇಲಾಧಿಕಾರಿಗಳ ಕಣ್ಣಿಗೆ ಕಾಣಿಸುತ್ತಿಲ್ಲವೇ ?

ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ತಲುಪಬೇಕಾಗಿರುವ ಪ್ರತಿ 50 ಕೆ.ಜಿ. ಚೀಲದ 565 ಗ್ರಾಂ ಕಡಿಮೆಯಾದರೆ ಒಟ್ಟು ದೊಡ್ಡ ಮೊತ್ತದ ಕ್ವಿಂಟಾಲ್ ಅಕ್ಕಿಗೆ ಎಷ್ಟು ತೂಕ ಕಡಿಮೆಯಾಯಿತು. ಈ ಖೋತಾವನ್ನು ನ್ಯಾಯಬೆಲೆ ಅಂಗಡಿಯವರು ಹೇಗೆ ಸರಿಪಡಿಸಿ ಕೊಳ್ಳುತ್ತಾರೆ.

ಒಟ್ಟಿನಲ್ಲಿ ಅಂತಿಮವಾಗಿ ಗ್ರಾಹಕರ ತಲೆಯ ಮೇಲೆಯೇ ಇದರ ಹೊರೆ. ಈತ ಇಂತಹ ಉದ್ಯೋಗ ಮಾಡಿ ಪ್ರತಿ ತಿಂಗಳಿಗೆ 2 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚು ಹಣವನ್ನು ಲಪಟಾಯಿಸುತ್ತಾನೆಂದರೆ ಈತನ ಭ್ರಷ್ಟತನಕ್ಕೆ ಏನನ್ನಬೇಕು ? ಈ ಕಮೀಷನ್ ಅಕ್ಕಿ ಹಾಗೂ ಇತರೆ ಪಡಿತರವನ್ನು ಹೇಗೆ ಸಾಗಿಸುತ್ತಾರೆ ?

ಈ ಎಲ್ಲಾ ಚಟುವಟಿಕೆಗಳು ನಡೆಯುತ್ತಿರುವುದು ಪಟ್ಟಣದ ಎಪಿಎಂಸಿಯಲ್ಲಿ ರಾತ್ರಿ 7 ಗಂಟೆ ಆಯಿತೆಂದರೆ ಸಾಕು ಇಲ್ಲಿ ಸಂಪೂರ್ಣ ಸ್ತಬ್ಧ. ಕೆಲವೊಂದು ಅನೈತಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ ಎಂದು ಕೇಳಲ್ಪಟ್ಟಿದ್ದೇವೆ. ಆದರೆ ಮಧ್ಯರಾತ್ರಿ 12ರ ನಂತರ ಇಂಥ ಕಳ್ಳತನದ ಪಡಿತರವನ್ನು ಕಾಳಸಂತೆಗೆ ಸಾಗಿಸುವ ಚಟುವಟಿಕೆ ಬಿರುಸಾಗಿರುತ್ತದೆ ಎಂದು ಕಣ್ಣಾರೆ ಕಂಡವರು ಹೇಳುತ್ತಾರೆ.
ಇದಕ್ಕೆ ಬಿಗಿ ಬಂದೋಬಸ್ತ್ ಯಾವುದೂ ಇಲ್ಲದಂತಾಗಿದೆ.ಇದು ಬಹುದೊಡ್ಡ ದುರಂತ.

ಪಡಿತರ ಸರಬರಾಜು ಮಾಡುವ ಲಾರಿಗಳ ಟೆಂಡರ್ ಆಗಿದೆಯಾ ? ಸರಕಾರದ ಯಾವುದೇ ಮಾಲುಗಳು, ಸಾಮಾಗ್ರಿಗಳು, ಪರಿಕರಗಳು ಮುಂತಾದ ವಸ್ತುಗಳ ಸಾಗಾಟ ಮಾಡಬೇಕಾದರೆ, ಅದಕ್ಕೆ ಟೆಂಡರ್ ಕರೆದು, ಯಾರು ಕಡಿಮೆ ರೇಟ್‍ಗೆ ಮಾಲು
ಹೊಡೆಯುತ್ತಾರೋ ಅವರಿಗೆ ಸರ್ಕಾರ ಇಂಥಾ ಪರವಾನಗಿಯನ್ನು ಕೊಡಬೇಕು. ಆದರೆ ಈ ಮೇನೇಜರ್ ಬಸವರಾಜನಿಗೆ ಈ ಯಾವ ನಿಯಮಗಳು ಅನ್ವಯಿಸುವುದಿಲ್ಲ. ನೀತಿ-ನಿಯಮಗಳನ್ನು ಗಾಳಿಗೆ ತೂರಿ, ಖಾಸಗಿ ಮಾಲೀಕರ ಲಾರಿಗಳನ್ನು ಬಾಡಿಗೆಗೆ
ತೆಗೆದುಕೊಂಡು ಅವರಿಗೂ ಸರಿಯಾದ ನ್ಯಾಯಯುತ ಬಾಡಿಗೆ ಕೊಡದೇ ತನಗೆ ತಿಳಿದೆಷ್ಟೋ ಹಣ ಕೊಟ್ಟುಕೊಂಡು ಅಲ್ಲೂ ತನ್ನ ಬಾಡಿಗೆ ಕಮೀಷನ್ ಕಮಾಯಿಸುತ್ತಾನೆಯೆಂದರೆ ಈತನ ಕೈ ಚಳಕ ಅದೆಷ್ಟು ಇರಬೇಕು ನೀವೆ ಹೇಳಿ.

ಸರ್ಕಾರ ಕರೆಯುವ ಟೆಂಡರ್ ಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ :-
ಪ್ರತಿ ವರ್ಷ ಸರ್ಕಾರ ಟೆಂಡರ್ ಕರೆಯುತ್ತಿಲ್ಲ ಎಂದಲ್ಲ. ಕರೆಯುತ್ತದೆ. ಆದರೆ ಈ ಬಸವರಾಜ ಬೆಂಗಳೂರಿನ ಮೂಲದವನೇ ಆದ್ದರಿಂದ ಡೈರೆಕ್ಟ್ ಬೆಂಗಳೂರಿನ ಕಮೀಷನರ್ ಆಫೀಸಿಗೆ ಹೋಗಿ ಅಲ್ಲಿನ ಅಧಿಕಾರಿಗಳಿಗೆ ಕೈ ತುಂಬಾ ಹಣ ನೀಡಿ, ಟೆಂಡರ್‍ನ್ನು ಟುಸ್ ಪಟಾಕಿಯನ್ನಾಗಿ ಮಾಡುತ್ತಾನೆಯೆಂದರೆ ಈತನು ಅದೆಷ್ಟು
ಪ್ರಭಾವವನ್ನು ಬೆಳೆಸಿಕೊಂಡಿರಬೇಕು ನೀವೇ ಊಹಿಸಿ.

ಕೆಲಮೊಮ್ಮೆ ದೀರ್ಘ ಗೈರು..?
ಪ್ರತಿ ತಿಂಗಳು ಲಾರಿ ಲೈನಿಂಗ್‍ಗಳು 10ನೇ ತಾರೀಖಿನ ಮೇಲೆ ಶುರುವಾಗುತ್ತದೆ. ಆದರೆ ಈತ ಅದೇ ಸಮಯದಲ್ಲಿದ್ದು, ಇಲ್ಲಿನ ವ್ಯವಹಾರಗಳನ್ನು ಇಲ್ಲಿನ ಖಾಸಗಿ ಸಹಾಯಕರ ಮೇಲೆ ಬಿಟ್ಟು 8-10 ದಿನಗಳ ರಜೆ ಹಾಕಿ ಹೋಗುತ್ತಾನೆಂದರೆ, ಈತನಿಗೆ ಯಾರದಾದರೂ ಹೆದರಿಕೆಯಿದೆಯಾ? ಇಂಥಾ ಅನೀತಿ ಕೆಲಸಗಳು ಕಮೀಷನ್ ದಂಧೆಯ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಮೇಲಿನ ಎಲ್ಲಾ ಅಧಿಕಾರಿಗಳಿಗೆ ಪಾಲು ಕೊಡಬೇಕೆಂದು ವಾದಿಸುತ್ತಾನಂತೆ.

ಒಬ್ಬ ಮಾಮೂಲಿ “ಸಿ’’ ಗ್ರೂಪ್ ನೌಕರ ಬ್ರಿಜ್ ಕಾರಿನಲ್ಲಿ ಓಡಾಡಿಕೊಂಡು
ಉನ್ನತಾಧಿಕಾರಿಗಳ ತರಹ ದರ್ಪಗಳನ್ನು ತೋರಿಸಿಕೊಂಡು ಓಡಾಡುತ್ತಿರುವುದು ಮೇಲಾಧಿಕಾರಿಗಳಾದ ಫುಡ್ ಶಿರಸ್ತೇದಾರರಿಗಾಗಲೀ, ತಾಲ್ಲೂಕು ದಂಡಾಧಿಕಾರಿಗಳಿಗೆ ಇಂಥವರು ಕಾಣುತ್ತಿಲ್ಲವೇ? ಇಂಥವನನ್ನು ಹೀಗೇಯೇ ಬಿಟ್ಟರೆ ಬೆಂಗಳೂರಿನ ಬೊಮ್ಮಸಂದ್ರವನ್ನೇ ಕೊಂಡು ತನ್ನ ಸಾಮ್ರಾಜ್ಯ ಸ್ಥಾಪಿಸಿಕೊಳ್ಳುವ
ದಿನಗಳು ದೂರವಿಲ್ಲ ಏನಂತೀರಾ..

LEAVE A REPLY

Please enter your comment!
Please enter your name here