ವಿದ್ಯುತ್ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಹಾಗೂ ರೈತಸಂಘ, ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದಿಂದ ಪ್ರತಿಭಟನೆ

0
327

ಕೊಟ್ಟೂರು: ಪಟ್ಟಣದ ಜೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಶನಿವಾರ ಸರ್ಕಾರದ ವಿರುದ್ಧ ಜನತಾದಳ ಜಾತ್ಯಾತೀತ ಪಕ್ಷ ಹಾಗೂ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. ನಂತರ ಎಇ ಅಧಿಕಾರಿಯಾಗಿ ಚೇತನ್ ಕುಮಾರ್ ಗೆ ಮನವಿ ಪತ್ರ ಸಲ್ಲಿಸಿ ನಂತರ ಮಾತನಾಡಿದ ಜೆಡಿಎಸ್ ಮುಖಂಡರಾದ ಗೋಪಿನಾಥ್ ಸರ್ಕಾರ ವಿದ್ಯುತ್ ಬೆಲೆ ಏರಿಕೆಯಿಂದ ಸಣ್ಣಪುಟ್ಟ ಅಂಗಡಿಯ ಹಾಗೂ ಸಣ್ಣ ಉದ್ಯಮಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಕೂಡಲೇ ಸರ್ಕಾರ ವಿದ್ಯುತ್ ದರವನ್ನು ಕಡಿಮೆಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಆಗ್ರಹಿಸಿದರು.

ನಂತರ ರೈತ ಮುಖಂಡರಾದ ಜೈ ಪ್ರಕಾಶ್ ನಾಯಕ್ ಮಾತನಾಡಿ ಗ್ರಾಹಕರಿಗೆ ಬಿಲ್ಲಿನ ಬಗ್ಗೆ ಸರಿಯಾಗಿ ಮನವರಿಕೆ ಮಾಡಿ ನಿಮ್ಮ ಸಿಬ್ಬಂದಿಯವರಿಗೆ ತಿಳಿಸಿ ಎಂದು ಹೇಳಿದರು.ಇಲ್ಲವಾದಲ್ಲಿ ನಿಮ್ಮ ಕಛೇರಿಗೆ ಮುಂದಿನ ದಿನಗಳಲ್ಲಿ ಮುತ್ತಿಗೆ ಹಾಕಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆಯಲ್ಲಿ ಸಿಪಿಐ ವೆಂಕಟಸ್ವಾಮಿ ಪಿಎಸ್ಐ ವಿಜಯಕೃಷ್ಣ .ಜಾತ್ಯತೀತ ಜನತಾದಳ ಮುಖಂಡ ಗೋಪಿ, ಭರಮ ರೆಡ್ಡಿ, ದೇವೇಂದ್ರ ಗೌಡ ಹಾಗೂ ರೈತ ಸಂಘದ ಭರ್ಮಪ್ಪ, ಆಟೋ ಚಾಲಕ ಸಂಘದ ಅಧ್ಯಕ್ಷ ಶಿವಯ್ಯ, ದೊಡ್ ವೀರಪ್ಪ, ಸುರೇಶ್, ಬಿ.ಎಸ್.ಆರ್, ಮೂಗಣ್ಣ,ರೈತ ಸಂಘದ ಪಿ ಮಂಜುನಾಥ,
ಹೊನ್ನುರಸಾಬ್, ಕೊಟ್ರಯ್ಯಸ್ವಾಮಿ . ಮುಂತಾದವರಿದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here