ದುಶ್ಚಟಗಳು ವ್ಯಕ್ತಿಯ ಬದುಕು,ಕುಟುಂಬ, ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತವೆ; ಶಿಕ್ಷಕ ಸಂತೋಷ್ ಬಂಡೆ

0
47

ವಿಜಯಪುರ:ಅ:01:- ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ- ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ ಎಂದು ಶಿಕ್ಷಕ ಸಂತೋಷ್ ಬಂಡೆ ಹೇಳಿದರು.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರಿಯ ರೋಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಡಾ. ಮಹಾಂತಶಿವಯೋಗಿಗಳ ಜನ್ಮದಿನದ ನಿಮಿತ್ತ ಆಚರಿಸುವ ‘ವ್ಯಸನ ಮುಕ್ತ ದಿನಾಚರಣೆ’ಯನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಓದು, ಕ್ರೀಡೆಗಳಲ್ಲಿ ಕ್ರಿಯಾಶೀಲರಾಗಿ ಆರೋಗ್ಯ ಪೂರ್ಣವಾಗಿ ಬದುಕು ರೂಡಿಸಿಕೊಳ್ಳಬೇಕು. ಮನೆಯಲ್ಲಿ ದುಶ್ಚಟಗಳಿಗೆ ಅಂಟಿಕೊಂಡ ತಂದೆ, ಸಹೋದರರಿಗೆ ಅದರಿಂದ ಆಗುವ ದುಷ್ಪರಿಣಾಮಗಳ ತಿಳುವಳಿಕೆಯಿಂದ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಕೆಜಿಎಸ್ ಮುಖ್ಯ ಶಿಕ್ಷಕಿ ವಿ ವೈ ಪತ್ತಾರ್, ಶಿಕ್ಷಕರಾದ ಎಸ್ ಎಸ್ ಅರಬ, ಎನ್ ಬಿ ಚೌದರಿ, ಎಸ್ ಪಿ ಪೂಜಾರಿ, ಎಸ್ ಬಿ ಕುಲಕರ್ಣಿ, ಎಸ್ ಎಂ ಪಂಚಮುಖಿ, ಎಸ್ ಡಿ ಬಿರಾದಾರ್, ಜೆ ಎಂ ಪತಂಗಿ, ಸಾವಿತ್ರಿ ಸಂಗಮದ, ಜೆ ಸಿ ಗುಣಕಿ, ಎಂ ಎಂ ಪತ್ತಾರ, ಸುರೇಶ್ ಡಿ, ಎಸ್‌ಎನ್ ಡೆಂಗಿ, ಎಲ್ಲಮ್ಮ ಸಾಲೋಟಗಿ, ಹಾಗೂ ಆಶಾ ಕೊರವಳ್ಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here