ಬಳ್ಳಾರಿಯಲ್ಲಿ ಜೂ.2ರಿಂದ 3 ದಿನಗಳ ಕಾಲ ಬ್ಯಾಂಕ್ ಬಂದ್:ಡಿಸಿ ಮಾಲಪಾಟಿ

0
128

ಬಳ್ಳಾರಿ,ಮೇ 31 : ಬಳ್ಳಾರಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಅನ್ನು ಜೂ.7ರವರೆಗೆ ಮುಂದುವರಿಸಲಾಗಿದ್ದು,ಜೂ.2ರಿಂದ ಮೂರು ದಿನಗಳ ಕಾಲ ಬ್ಯಾಂಕ್‍ಗಳು ಹಾಗೂ ಹಣಕಾಸು ವ್ಯವಹಾರ ಹೊಂದಿರುವ ಸಂಸ್ಥೆಗಳ ಚಟುವಟಿಕೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದ್ದಾರೆ.
ಜೂ.2ರಿಂದ 3 ದಿನಗಳ ಕಾಲ ಬಂದ್ ಮಾಡಲಾಗವುದು.ಇದರ ಜೊತೆಗೆ ಶನಿವಾರ ಮತ್ತು ಭಾನುವಾರ ಯತಾರೀತಿ ಬ್ಯಾಂಕ್‍ಗಳು ಬಂದ್ ಇರಲಿವೆ. ಒಟ್ಟಿನಲ್ಲಿ 5 ದಿನಗಳ ಕಾಲ ಬ್ಯಾಂಕ್ ಚಟುವಟಿಕೆಗಳನ್ನು ಬಂದ್ ಮಾಡಲಾಗುತ್ತಿದೆ ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದ ಡಿಸಿ ಮಾಲಪಾಟಿ ಅವರು, ಎಲ್ಲ ಎಟಿಎಂಗಳನ್ನು ಪೂರ್ಣಪ್ರಮಾಣದಲ್ಲಿ ಹಣವಿರುವಂತೆ ನೋಡಿಕೊಳ್ಳಲಾಗುತ್ತದೆ.ಜನರು ಅನಗತ್ಯ ಭಯಗೊಂಡು ಬ್ಯಾಂಕ್‍ಗಳ ಮುಂದೆ ಬಂದು ನಿಂತು ವ್ಯವಹಾರ ಮಾಡಬೇಡಿ ಎಂದು ಅವರು ಮನವಿ ಮಾಡಿದರು.
ಇನ್ನೂ ಒಂದು ವಾರ ಕಟ್ಟುನಿಟ್ಟಾಗಿ ಪಾಲಿಸಿದರೇ ಸೊಂಕು ನಿಯಂತ್ರಣಕ್ಕೆ ಬರಲಿದ್ದು,ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮತಿ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here