ರೈತರ ಬೆನ್ನೆಲುಬಾಗಿ ನಾನಿದ್ದೇನೆ: ಶಾಸಕ ಬಿ.ನಾಗೇಂದ್ರ

0
88

ಬಳ್ಳಾರಿ:ಡಿ:27:- ಸಿಡಿಗಿನಮೊಳ ಗ್ರಾಮದಲ್ಲಿ ಸುಮಾರು 150 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯನ್ನು ಬೆಳೆದಿದ್ದು ಕಳೆದ ಒಂದು ವರ್ಷದಿಂದ ರೈತರು ಗಾಳಿ ಮಳೆ ಬಿಸಿಲು ಚಳಿ ಎನ್ನದೆ ಕಷ್ಟ ಪಟ್ಟು ಬೆಳೆದ ಬೆಳೆಯು ಕಟಾವಿಗೆ ಬಂದಿದೆ, ಕಬ್ಬು ಕಟಾವು ಒಪ್ಪಂದವನ್ನು ರೈತರು ಸಿರುಗುಪ್ಪ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು.

ಒಪ್ಪಂದದಂತೆ ಸುಮಾರು 40 ಎಕರೆ ಕಬ್ಬು ಕಟಾವು ಅದ ನಂತರ ಸಕ್ಕರೆ ಕಾರ್ಖಾನೆ ಮಾಲೀಕರು ಸೂಕ್ತ ಬೆಲೆ ನೀಡದೆ.ಕಬ್ಬು ಕಟಾವು ಮಿಷನ್ನನ್ನು ಹಿಂತಿರುಗಿ ಬರುವಂತೆ ಸಕ್ಕರೆ ಕಾರ್ಖಾನೆ ಮಾಲೀಕರು ಮಿಷನ್ ಡ್ರೈವರ್ ಗೆ ಹೇಳಿದ್ದಾರೆ ತಕ್ಷಣ ವಿಷಯ ತಿಳಿದ ರೈತರು ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ ಆಪ್ತ ಸಹಾಯಕರಾದ ದುರ್ಗಾ ಪ್ರಸಾದ್ ರವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರವನ್ನು ತಿಳಿಸಿದ್ದಾರೆ.

ತಕ್ಷಣ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರ ಆಪ್ತ ಸಹಾಯಕರಾದ ದುರ್ಗಾ ಪ್ರಸಾದ್ ರವರು ಈ ವಿಚಾರವನ್ನು ಶಾಸಕರ ಗಮನಕ್ಕೆ ತಂದಿದ್ದಾರೆ ಶಾಸಕರಾದ ಬಿ.ನಾಗೇಂದ್ರರವರು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಾತನಾಡಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಅಂತ ಹೇಳಿದ್ದಾರೆ,ಆದಷ್ಟು ಬೇಗ ರೈತರ ಸಮಸ್ಯೆಯನ್ನು ಬಗೆಹರಿಸಿ ಕೊಡಿ,ರೈತರೊಂದಿಗೆ ಯಾರು ಇಲ್ಲ ಅಂತಾ ನಿರ್ಲಕ್ಷ್ಯವಹಿಸಬೇಡಿ
ರೈತರಿಗೆ ಸದಾಕಾಲ ನಾನಿದ್ದೇನೆ ಎಂದು ಹೇಳಿ ಸುಮಾರು ಅರ್ಧ ಗಂಟೆ ಕಾಲ ದೂರವಾಣಿಯಲ್ಲಿ ಮಾತನಾಡಿ ರೈತರ ಬೆನ್ನೆಲುಬಾಗಿ ನಿಂತಿದ್ದಾರೆ

LEAVE A REPLY

Please enter your comment!
Please enter your name here