ನಗರದ ವಿಮ್ಸ್ ಆವರಣದಲ್ಲಿ ಎಐಯುಟಿಯುಸಿ ಗುತ್ತಿಗೆ ನೌಕರರಿಂದ ಪ್ರತಿಭಟನೆ

0
93

ಬಳ್ಳಾರಿ:ಡಿ:08:- ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ವಿಮ್ಸ್ ಗುತ್ತಿಗೆ ನೌಕರರ ಸಂಘದ ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರದ ಭಾಗವಾಗಿ ಪ್ರತಿಭಟನೆಯನ್ನು ನಡೆಸಲಾಯಿತು. ವಿಮ್ಸ್ ಗುತ್ತಿಗೆ ಕಾರ್ಮಿಕರಿಗೆ ತಮ್ಮ ತಮ್ಮ ಕೆಲಸಕ್ಕೆ ತಕ್ಕಂತೆ ಕನಿಷ್ಠ ವೇತನವನ್ನು ಖಾತ್ರಿಪಡಿಸಬೇಕು, ರಜೆ ಸೌಲಭ್ಯ, ಪಿಎಫ್ ಸೌಲಭ್ಯ ಕೋವಿಡ್ ವಿಶೇಷ ಭತ್ಯೆ ನೀಡಬೇಕು ಮುಂತಾದ ಬೇಡಿಕೆಗಳಿಗಾಗಿ ಆಗ್ರಹಿಸಿ ವಿಮ್ಸ್ ಆವರಣದಲ್ಲಿ ಇಂದು ಪ್ರತಿಭಟನೆಯನ್ನು ನಡೆಸಲಾಯಿತು.

“ಕಳೆದ ಹಲವು ತಿಂಗಳಿಂದ ಸಾಕಷ್ಟು ಬಾರಿ ಮಾತುಕತೆಯಾಗಿದ್ದರು ವಿಮ್ಸ್ ಆಡಳಿತ ಮಂಡಳಿ, ಕಂಟ್ರಾಕ್ಟರ್ಗಳಾಗಲಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈಗ ಅನಿವಾರ್ಯವಾಗಿ ವಿಮ್ಸ್ ಗುತ್ತಿಗೆ ಕಾರ್ಮಿಕರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಒಂದು ವೇಳೆ ವಿಮ್ಸ್ ಆಡಳಿತ ಮಂಡಳಿ ಇದಕ್ಕೆ ಸೂಕ್ತವಾಗಿ ಸ್ಪಂದಿಸದೆ ಇದ್ದರೆ ಬೇಡಿಕೆ ಈಡೇರುವವರೆಗೂ ಹೋರಾಟವನ್ನು ಮುಂದುವರಿಸಲಾಗುವುದು” ಎಂದು ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಹಾಗೂ ವಿಮ್ಸ್ ಗುತ್ತಿಗೆ ನೌಕರರ ಸಂಘದ ಕಾರ್ಯದರ್ಶಿಗಳಾದ ದೇವದಾಸ್ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಡಾ. ಪ್ರಮೋದ್, ಸುರೇಶ್, ಗುತ್ತಿಗೆ ನೌಕರರ ಸಂಘದ ಲಕ್ಷ್ಮಿ ಹೊನ್ನೂರು ಬೀ,ದುರ್ಗಮ್ಮ, ಆರೋಗ್ಯ ಮೇರಿ, ಪಾರ್ವತಿ, ನಾಗಲಕ್ಷ್ಮಿ,, ಚಂದ್ರಮ್ಮ, ಹುಲಗಪ್ಪ, ಪ್ರಕಾಶ್, ಮುಂತಾದವರು ಪಾಲ್ಗೊಂಡಿದ್ದರು.

ವರದಿ:-ಮಹೇಶ್

LEAVE A REPLY

Please enter your comment!
Please enter your name here