ಎನ್‍ಸಿಸಿ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನ ಆಚರಣೆ

0
91

ಬಳ್ಳಾರಿ,ಜೂ.21: ಎನ್‍ಸಿಸಿ ಕರ್ನಾಟಕ ಬೆಟಾಲಿಯನ್-34 ವತಿಯಿಂದ ಬಳ್ಳಾರಿ,ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ವಿವಿಧ ಶಾಲಾ-ಕಾಲೇಜುಗಳಲ್ಲಿ ಎನ್‍ಸಿಸಿ ವಿದ್ಯಾರ್ಥಿಗಳು ಸೋಮವಾರ ಅಂತರಾಷ್ಟ್ರೀಯ ಯೋಗ ದಿನ ಆಚರಿಸಿದರು.
ಎನ್‍ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ರಾಜೇಂದರ್ ಮಲಿಕ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಯೋಗಮಂತ್ರವನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಆಡಳಿತಾಧಿಕಾರಿ ಕರ್ನಲ್ ಅಯ್ಯುಪ್ ಕೆ.ಎ, 1112 ಎನ್‍ಸಿಸಿ ಕೆಡೆಟ್‍ಗಳು, 13 ಸೇನಾ ತರಬೇತಿದಾರರು, 29 ಎನ್‍ಸಿಸಿ ಅಧಿಕಾರಿಗಳು ತಮ್ಮ ತಮ್ಮ ಮನೆಗಳಲ್ಲಿಯೇ ಯೋಗಭ್ಯಾಸ ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ದಿನ ಆಚರಿಸಿದರು.
ಎನ್‍ಸಿಸಿ ಕೆಡೆಟ್‍ಗಳ ಜೊತೆಗೆ ಕುಟುಂಬದ ಸದಸ್ಯರು ಸಹ ಯೋಗ ದಿನಾಚರಣೆ ಪ್ರಯುಕ್ತ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here