ಮಾಳಾಪುರದ ಜಮೀನು ಖರೀದಿಯಲ್ಲಿ ನಾವುಗಳು ಕಾನೂನು ಉಲ್ಲಂಘಿಸಿಲ್ಲ: ಸಂತೋಷ್ ಲಾಡ್

0
148

ಸಂಡೂರು ತಾಲೂಕಿನ ಮಾಳಾಪುರ ಗ್ರಾಮದಲ್ಲಿ ನಾನು ನಮ್ಮ ಕುಟುಂಬಸ್ಥರು 1996ರಲ್ಲಿ ಹೊನ್ನೂರಪ್ಪ ಅವರಿಂದ 47 ಎಕರೆ ಖರೀದಿ ಮಾಡಿದೆ. ಇದು ಕಾನೂನಿನ ಪ್ರಕಾರವೇ ನಡೆದಿದೆ. 1981 ರಿಂದ ನಾವು ಖರೀದಿ ಮಾಡುವವರೆಗೂ ಹೊನ್ನೂರಪ್ಪ ಹೆಸರಿನಲ್ಲಿಯೇ ಪಹಣಿ ಇದೆ.
ಖರೀದಿ ಮಾಡಿದ ಜಮೀನಿಗೆ ತೆರಿಗೆ ಪಾವತಿಸುತ್ತಾ ಬಂದಿದೆ. ಕೃಷಿ ಚಟುವಟಿಕೆಗಳನ್ನು ಆದ್ಯತೆ ಮೇರೆಗೆ ಮಾಡುತ್ತಿದೆ ಎಂದು

ಅವರು ಶನಿವಾರ ಬಳ್ಳಾರಿಯ ಪತ್ರಿಕಾ ಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

ಆದರೆ ಈಗ ಕೆಲವರು ಈ ಜಮೀನು ನಮ್ಮದು ಹಲವು ದಶಕಗಳಿಂದ ನಾವು ಉಳುಮೆ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಸೇರಿದ ಜಮೀನನ್ನು ಲಾಡ್ ಕುಟುಂಬ ಅಕ್ರಮವಾಗಿ ಮಾಡಿಸಿಕೊಂಡಿದ್ದಾರೆ. ಎಂದು ಹೋರಾಟ, ಪ್ರತಿಭಟನೆ, ಮಾಡಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಲ್ಲ.

ಸರ್ಕಾರಿ ಜಮೀನಾಗಿದ್ದರೆ, ಇಲ್ಲವೇ ಹೊನ್ನೂರಪ್ಪ ಜಮೀನನ್ನು ಸರ್ಕಾರ ಪರಭಾರೆ ಮಾಡಿದ್ದರ ಬಗ್ಗೆ ಕಾನೂನಿನ ತೊಡಕಿದ್ದರೆ, ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಲಿ ನಮ್ಮದೇನು ಅಭ್ಯಂತರವಿಲ್ಲ ಎಂದರು.

ನಮಗೆ ಜಮೀನಿಲ್ಲ ನಾವು ಬಡವರು ಎಂದು ಅವರುಗಳು ಬಂದು ನಮ್ಮ ಬಳಿ ಕೇಳಿದ್ದರೆ ಕೊಟ್ಟು ಬಿಡುತ್ತಿದ್ದೆವು ಆದರೆ ಕೆಲವರ ಮಾತು ಕೇಳಿ ಮಾಧ್ಯಮಗಳಲ್ಲಿ ನಮ್ಮ ಕುಟುಂಬ ಅನ್ಯಾಯ ಮಾಡಿದೆಂದು ಪ್ರತಿಬಿಂಬಿಸಿದ್ದರ ಬಗ್ಗೆ ನಮಗೆ ನೋವಾಗಿದೆ ಎಂದರು.

ಇದುವರೆಗೂ ನಮ್ಮ ಬಳಿ ಬಂದು ಅವರು ಕೇಳಿಲ್ಲ. ಅಂತಹ ಪರಿಸ್ಥಿತಿ ಬಂದರೆ ಮುಂದೆ ನೋಡೋಣ, ಈಗ ಪ್ರಕರಣ ನ್ಯಾಯಾಲಯದಲ್ಲಿದೆ. ಈಗಾಗಲೇ ಕೆಳಹಂತದ ನ್ಯಾಯಾಲಯಗಳಲ್ಲಿ ತಮ್ಮ ಪರ ಆಗಿರುವುದನ್ನು ವಿವರಿಸಿದರು.

ಸಂಡೂರು ತಾಲೂಕಿನ ಮಾಳಾಪುರ ಗ್ರಾಮದ ಸರ್ವೆ ನಂಬರ್ 123 ಜಮೀನಿನ ವಿವಾದ ಕುರಿತು ಇತ್ತೀಚಿಗೆ ಮಾಧ್ಯಮಗಳಲ್ಲಿ ಪ್ರಕಟ ಮತ್ತು ಬಿತ್ತರಗೊಂಡ ವಿಷಯದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನು ಏರ್ಪಡಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಸದರಿ ಜಮೀನಿಗೆ ಸಂಬಂಧಿಸಿದಂತೆ 2012-13ರಲ್ಲಿ ಹುಬ್ಬಳ್ಳಿಯ ನಿವಾಸಿಗಳಾದ ಹೊನ್ನೂರಪ್ಪ ಎನ್ನುವವರು ನಮ್ಮ ಮೇಲೆ ಒಂದು ಪ್ರಕರಣವನ್ನು ಸಂಡೂರಿನ ಮಾನ್ಯ ನ್ಯಾಯಾಲಯದಲ್ಲಿ ದಾಖಲಿಸಿದ್ದರು,
ಘನ ನ್ಯಾಯಾಲವು 2017ರ ಆಗಸ್ಟ್ 3 ರಂದು ನಮ್ಮ ಪರವಾಗಿ ತೀರ್ಪು ನೀಡಿರುತ್ತದೆ.

ತದನಂತರ ದೂರುದಾರರು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು, ಈ ಮೇಲ್ಮನವಿಯನ್ನು ಸಹ ನ್ಯಾಯಾಲಯ ವಜಾ ಮಾಡಿರುತ್ತದೆ.

ಹೊನ್ನೂರಪ್ಪ ಇವರು ನಮ್ಮ ಕುಟುಂಬದ ಸದಸ್ಯರೊಂದಿಗೆ ಮಾನ್ಯ ತಹಶೀಲ್ದಾರರು ಸಂಡೂರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಬಳ್ಳಾರಿ ಇವರನ್ನು ಪ್ರತಿವಾದಿಗಳನ್ನು ಸೇರಿಸಿ ಕೂಡ್ಲಿಗಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 2017 ರಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ.
ಈ ಪ್ರಕರಣ ಕೂಡ್ಲಿಗಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಇನ್ನೂ ಬಾಕಿ ಇದೆ.

ರಾಜಕೀಯ ಜೀವನದಲ್ಲಿ ಸಾಮಾಜಿಕ ಸೇವೆ ಮೂಲಕ ಗೌರವಿತವಾಗಿ ಬದುಕುತ್ತಿರುವ ನಾನು ಮತ್ತು ನಮ್ಮ ಕುಟುಂಬದ ಸದಸ್ಯರು ಕೆಲವರ ರಾಜಕೀಯ ಕುತಂತ್ರದಿಂದ ಮನನೊಂದಿರುವುದಾಗಿ ನೊಂದು ನುಡಿದರು. ಸದರಿ ಜಮೀನಿಗೆ ಸಂಬಂಧಿಸಿದಂತೆ ನಾವುಗಳು ಯಾರಾದರೂ ಕಾನೂನಿನ ಉಲ್ಲಂಘನೆಯನ್ನು ಮಾಡಿದ್ದಲ್ಲಿ ನ್ಯಾಯಾಲಯ ಮತ್ತು ಸರ್ಕಾರದ ಕಾನೂನಿಗೆ ಬದ್ಧರಾಗಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಈ ತುಕಾರಾಂ, ಅಕ್ಷಯ ಲಾಡ್, ಮಾಜಿ ಎಂಎಲ್ಸಿ ಕೆಎಸ್ಎಲ್ ಸ್ವಾಮಿ, ತುಮಟಿ ಲಕ್ಷ್ಮಣ್ ಸಂಡೂರ್ ತಾಲೂಕಿನ ಕಾಂಗ್ರೇಸ್ ಮುಖಂಡರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here