ಜಿಲ್ಲಾ ಆರ್ಥಿಕ ಅಭಿವೃದ್ಧಿಗೆ ಸಹಕರಿಸಲು ಸೂಚನೆ

0
97

ಹಾಸನ ಅ.21 – ವಿವಿಧ ಇಲಾಖೆಗಳ ಅರ್ಹ ಫಲಾನುಭವಿಗಳ ಬಾಕಿ ಇರುವ ಎಲ್ಲಾ ಸಾಲದ ಅರ್ಜಿಗಳನ್ನು ವಿಲೇವಾರಿ ಮಾಡಿ ಅತಿ ಶೀಘ್ರವಾಗಿ ಸಾಲ ವಿತರಣೆ ಮಾಡುವ ಮೂಲಕ ಜಿಲ್ಲಾ ಆರ್ಥಿಕ ಅಭಿವೃದ್ಧಿಗೆ ಸಹಕರಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್ ಅವರು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಇತ್ತೀಚೆಗೆ ಕೆನರಾ ಬ್ಯಾಂಕ್, ಲೀಡ್ ಬ್ಯಾಂಕ್ ಹಾಸನ ವತಿಯಿಂದ ಜೂನ್ 2021 ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ತ್ರೈಮಾಸಿಕ ಸಮಾಲೋಚನಾ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ವಿವಿಧ ಇಲಾಖೆಗಳು ನೀಡಿರುವ ಅನೇಕ ಸಾಲದ ಪ್ರಗತಿ ಪರಿಶೀಲಿಸಿದರು.

ಬೀದಿ ಬದಿ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯ ಮೊದಲನೇ ಹಂತದ ಸಾಲ ರೂ 10,000 ಮರು ಪಾವತಿ ಮಾಡಿದ ಕೂಡಲೇ ಎರಡನೇ ಹಂತದ ಸಾಲ ರೂ 20,000 ಪಡೆಯುವಂತೆ ತಿಳಿಸಿದರಲ್ಲದೇ, ಇನ್ನೂ ಸಾಲ ಪಡೆಯದಿರುವ ಬೀದಿ ಬದಿ ವ್ಯಾಪಾರಿಗಳು ಕೂಡಲೇ ಬ್ಯಾಂಕಿಗೆ ಭೇಟಿ ನೀಡಿ ಸಾಲ ಸೌಲಭ್ಯ ಪಡೆಯುವಂತೆ ಸೂಚಿಸಿದರು.

ಕೋವಿಡ್‍ನಿಂದಾಗಿ ಜನರು ಸಂಕಷ್ಟದಲ್ಲಿದ್ದು, ಅವರಿಗೆ ಸಹಾಯ ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದ ಅವರು ಬ್ಯಾಂಕುಗಳಲ್ಲಿ ದೊರೆಯುವ ಹಲವಾರು ಸಾಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ರೇವತಿ ಸುಧಾಕರ್ ಅವರು ಮಾತನಾಡಿ ಬ್ಯಾಂಕುಗಳಿಗೆ ಕಳುಹಿಸುವ ಸಾಲದ ಪ್ರಸ್ತುತ ಎಲ್ಲಾ ಅರ್ಜಿಗಳನ್ನು ಆದಷ್ಟು ಬೇಗ ಪರಿಶೀಲಿಸಿ ಕೂಡಲೇ ಸಾಲ ಮಂಜೂರು ಮಾಡುವುದಾಗಿ ತಿಳಿಸಿದರು.

ಬ್ಯಾಂಕ್ ವ್ಯವಹಾರಗಳು ಗ್ರಾಹಕರಿಗೆ ತಲುಪಿಸಲಾಗುತ್ತಿದ್ದು, ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಪ್ರಧಾನಮಂತ್ರಿ ಆತ್ಮ ನಿರ್ಭರ ನಿಧಿ (ಪಿ.ಎಂ ಸ್ವನಿಧಿ)ü ಯೋಜನೆ ಅರಸೀಕೆರೆ ತಾಲ್ಲೂಕಿನ ಪಿ.ಎಂ.ಎ.ವೈ-ಎ.ಹೆಚ್.ಪಿ ಸಾಲ ಬಾಕಿ ಇರುವ ಅರ್ಜಿಗಳ ಬಗ್ಗೆ ಮಾತನಾಡಿದ ಅವರು ಎಲ್ಲ ಬೀದಿಬದಿ ವ್ಯಾಪಾರಿಗಳು ಆದಷ್ಟು ಬೇಗನೆ ಬ್ಯಾಂಕುಗಳಿಗೆ ಭೇಟಿ ನೀಡಿ ಸಾಲ ಪಡೆಯುವಂತೆ ತಿಳಿಸಿದರು.

ನಬಾರ್ಡ್‍ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ಮಾಲಿನಿ ಸುವರ್ಣ ಅವರು ಹಾಜರಿದ್ದು, 2022 23 ರ ಸಾಮಥ್ರ್ಯ ಆಧಾರಿತ ಯೋಜನೆ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಹಲವಾರು ಕೃಷಿ ಚಟುವಟಿಕೆಗಳಿಗೆ ನಬಾರ್ಡ್‍ನಿಂದ ಸಿಗುವ ಸಹಾಯಧನವನ್ನು ವಿವರಿಸಿದರು. ಫ್ರೂಟ್ಸ್, ಪಿಎಂಎಫ್‍ಎಂಇ, ಎಐಎಫ್ ಮೊದಲಾದ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿದರು.

ಸಭೆಯಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಸಹಾಯಕ ಮಹಾಪ್ರಬಂಧಕರಾದ ಸುನಿಲ್ ಕುಮಾರ್, ಹೆಚ್.ಡಿ.ಸಿ.ಸಿ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್. ಪಿ ಕುಮಾರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಪ್ರಬಂಧಕರಾದ ಶಿವರಾಮ್, ಬ್ಯಾಂಕ್ ಅಧಿಕಾರಿಗಳು, ಸರ್ಕಾರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here