ಪಿಯುಸಿ ಪ್ರಥಮ ವರ್ಗಕ್ಕೆ ಪರೀಕ್ಷೆ ಇಲ್ಲ, ದ್ವಿತೀಯ ಪರೀಕ್ಷೆ ಮುಂದಕ್ಕೆ ಕೊರೋನಾ ಹಿನ್ನೆಲೆಯಲ್ಲಿ ಈ ನಿರ್ಧಾರ

0
80

ಬೆಂಗಳೂರು ಮೇ 4 ರಾಜ್ಯದಲ್ಲಿ ಮೇ 24ರಂದು ಜೂನ್ 16ರ ವರೆಗೆ ನಡೆಯಬೇಕಿದ್ದ ಪಿಯುಸಿ ದ್ವಿತೀಯ ವರ್ಗದ ಪರೀಕ್ಷೆಗಳನ್ನು ಅನಿರ್ಧಿಷ್ಟಕಾಲ ಮುಂದೂಡಲಾಗಿದೆ.

ಪಿಯುಸಿ ಪ್ರಥಮ ವರ್ಗಕ್ಕೆ ಪರೀಕ್ಷೆ ರದ್ದುಪಡಿಸಿ ಎಲ್ಲರೂ ದ್ವಿತೀಯ ವರ್ಗಕ್ಕೆ ಉತ್ತೀರ್ಣ ಎಂದು ಘೋಷಿಸಲಾಗಿದೆ.

ರಾಜ್ಯದಲ್ಲಿ ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಅಧಿಕಾರಿಗಳು ಕೋವಿಡ್ ಕೆಲಸದಲ್ಲಿ ತೊಡಗಿರುವುದರಿಂದ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಲ್ಲ ಮತ್ತು ಸಾಧ್ಯವಿಲ್ಲ ಎನ್ನವು ತೀರ್ಮಾನಕ್ಕೆ ಪಿಯು ಪರೀಕ್ಷಾ ಮಂಡಲಿ ಬಂದಿದೆ. ಹಾಗಾಗಿ ಪರೀಕ್ಷೆಯನ್ನು ಮುಂದಕ್ಕೆ ಹಾಕಿದ್ದು, ಮುಂದಿನ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ವಿದ್ಯಾರ್ಥಿಗಳು ಮನೆಯಲ್ಲೇ ಇದ್ದು ಪರೀಕ್ಷೆ ಸಿದ್ಧತೆ ಮಾಡಿಕೊಳ್ಳಬೇಕು. ಉಪನ್ಯಾಸಕರೂ ಮನೆಯಲ್ಲೇ ಇದ್ದು ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಸಹಾಯ ನೀಡಬೇಕು ಎಂದು ಸೂಚಿಸಲಾಗಿದೆ. ಪಿಯುಸಿ ಪ್ರಥಮ ವರ್ಷದ ಪರೀಕ್ಷೆಯನ್ನು ರದ್ಧುಪಡಿಸಲಾಗಿದೆ. ಪ್ರಥಮ ವರ್ಷದ ಎಲ್ಲರೂ ಉತ್ತೀರ್ಣ ಎಂದು ಘೋಷಿಸಲಾಗಿದೆ.

LEAVE A REPLY

Please enter your comment!
Please enter your name here