ಒಂದೇ ತಿಂಗಳಿನಲ್ಲಿ 931 ಭೂಮಿ ಪ್ರಕರಣಗಳು ಇತ್ಯರ್ಥ -ಯಶವಂತ ವಿ. ಗುರುಕರ್

0
112

ಕಲಬುರಗಿ,ಮಾ.10 -ಜಿಲ್ಲೆಯಾದ್ಯಂತ ಕಳೆದ ಫೆಬ್ರವರಿ ಮಾಹೆಯಲ್ಲಿ ಕಂದಾಯ ಇಲಾಖೆಯ ನ್ಯಾಯಾಲಯಗಳಲ್ಲಿ ವಿವಿಧ ಕಾಯ್ದೆ ಕಲಂಗಳಡಿ ದಾಖಲಾದ ಅರೆ ನ್ಯಾಯಾಲಯ ಪ್ರಕರಣಗಳ ಪೈಕಿ ಬಾಕಿಯಿದ್ದ 2067 ಭೂಮಿ ಪ್ರಕರಣಗಳಲ್ಲಿ 931 ಪ್ರಕರಣಗಳನ್ನು ದಾಖಲೆ ಪ್ರಮಾಣದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದರು.
ಗುರುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯ ತಹಶೀಲ್ದಾರ, ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ಹಂತದ ನ್ಯಾಯಾಲಯಗಳಲ್ಲಿ ಪಹಣಿ, ಪೆÇೀಡಿ ಹೀಗೆ ಜಮೀನಿಗೆ ಸಂಬಂಧಿಸಿದ ಪ್ರಕರಣಗಳನ್ನು ಅದ್ಯತೆ ಮೇಲೆ ವಿಲೇವಾರಿ ಮಾಡಲಾಗಿದೆ. ಇದು ಜಿಲ್ಲೆಯ ಮಟ್ಟಕ್ಕೆ ಐತಿಹಾಸಿಕ ದಾಖಲಾಗಿದೆ ಎಂದರು.
ಇನ್ನು ಬಾಕಿಯಿರುವ 1136 ಪ್ರಕರಣಗಳನ್ನು ಸಹ ಮುಂದಿನ 2 ತಿಂಗಳಲ್ಲಿ ವಿಲೇವಾರಿ ಮಾಡಲಾಗುವುದು. ವಿಲೇವಾರಿ ಮಾಡಲಾದ ಪ್ರಕರಣಗಳಲ್ಲಿ 2013 ರಿಂದಲು ಬಾಕಿ ಇದ್ದವು ಎಂದರು.
ಉಕ್ರೇನ್ ದಿಂದ ಆರು ಜನ ತಾಯ್ನಾಡಿಗೆ; ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿದ ಜಿಲ್ಲೆಯ ಆರು ಜನ ಪೈಕಿ ನಾಲ್ವರು ಕಲಬುರಗಿಗೆ ಮರಳಿದ್ದು, ಇಬ್ಬರು ಬೀದರ ಜಿಲ್ಲೆಗೆ ವಾಪಸ್ಸಾಗಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಡಿ.ಸಿ. ತಿಳಿಸಿದರು.

ಮಾರ್ಚ್ 24 ರಂದು
ನಿವೃತ್ತ ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಲೋಕ ಅದಾಲತ್
ಕಲಬುರಗಿ,ಮಾ.10.(ಕ.ವಾ)-ನಿವೃತ್ತ ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಅದಾಲತ್‍ನ್ನು ಇದೇ ಮಾರ್ಚ್ 24 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫ್‍ರೆನ್ಸ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಕಲಬುರಗಿ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಈ ಸಂಬಂಧ ನಿವೃತ್ತ ಸರ್ಕಾರಿ ನೌಕರರು ತಮ್ಮ ಕುಂದುಕೊರತೆಗಳೇನಾದರೂ ಇದ್ದಲ್ಲಿ ಕಲಬುರಗಿ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸೂಕ್ತ ದಾಖಲೆಗಳೊಂದಿಗೆ 2022ರ ಮಾರ್ಚ್ 21 ರೊಳಗಾಗಿ ತಮ್ಮ ಅಹವಾಲನ್ನು ಸಲ್ಲಿಸಬೇಕು. ನಂತರ ಸದರಿ ನಿವೃತ್ತ ಸರ್ಕಾರಿ ನೌಕರರು ಮೇಲ್ಕಂಡ ದಿನದಂದು ನಡೆಯುವ ಪಿಂಚಣಿ ಅದಾಲತ್‍ದಲ್ಲಿ ಭಾಗವಹಿಸಬೇಕೆಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here