ತೋರಣಗಲ್ಲುನಲ್ಲಿ ದಲಿತಪರ ಸಂಘಟನೆಗಳಿಂದ ನ್ಯಾಯದೀಶರ ವಜಾಕ್ಕೆ ಆಗ್ರಹ

0
121

ಸಂಡೂರು:ಪೆ:02:-ತಾಲೂಕಿನ ತೋರಣಗಲ್ಲು ಗ್ರಾಮದ ದಲಿತ ಯುವಕರ ಸಂಘಟನೆ ಮತ್ತು ದಲಿತ ಯುವಜನರ ನೇತೃತ್ವದಲ್ಲಿ ರಾಯಚೂರ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಮಲ್ಲಿಕಾರ್ಜುನ ಗೌಡರ ಸಂವಿಧಾನ ಶಿಲ್ಪಿ ಡಾ.ಬಿ.ಆರ್, ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅವಮಾನವನ್ನು ಖಂಡಿಸಿ,ತೋರಣಗಲ್ಲು ಉಪತಹಾಶಿಲ್ದಾರರು ಇವರ ಮೂಲಕ ನ್ಯಾಯಾಧೀಶರು ಉಚ್ಚ ನ್ಯಾಯಾಲಯ ಸುಪ್ರೀಂ ಕೋರ್ಟ್ ನವದೆಹಲಿ ಇವರಿಗೆ ಮನವಿ ಪತ್ರ ಕಳುಹಿಸಲಾಯಿತು.

ಆರಂಭದಲ್ಲಿ ಡಿವೈಎಫ್ಐ ಸಂಡೂರು ತಾಲೂಕು ಕ್ರೀಡಾ ಕಾರ್ಯದರ್ಶಿ ನಾಗಭೂಷಣ ರವರು ಮಾತನಾಡಿ ಗಣರಾಜ್ಯೋತ್ಸವ ದಿನದಂದು ಒಂದು ನ್ಯಾಯ ದೊರಕಿಸಿಕೊಡುವಂತಹ ರಾಯಚೂರು ಜಿಲ್ಲೆಯ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುತ್ತೇನೆ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವುದು ಕೇವಲ ಒಂದು ಜಾತಿಗೆ ಮಾತ್ರವಲ್ಲ ಭಾರತ ದೇಶದ ಅಂತರ್ಜಾತಿ ಮತ್ತು ಅಂರ್ತಧರ್ಮಿಯ ಎಲ್ಲಾ ಜನಸಾಮಾನ್ಯರಿಗೆ ಅವಮಾನವಾದಂತೆ ಹಾಗಾಗೀ ಈ ನಾಡಿನ ಪ್ರತಿಯೊಬ್ಬರೂ ಪ್ರತಿಭಟಿಸಬೇಕು ಎಂದು ಮುಖ್ಯಮಂತ್ರಿಗಳಾದ ಮಾನ್ಯ ಬಸವರಾಜ್ ಬೊಮ್ಮಯಿರವರು ಈ ಕೂಡಲೇ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ಅಗತ್ಯ ಕ್ರಮ ಜರುಗಿಸಿ ಸೇವೆಯಿಂದ ವಜಾಗೋಳಿಸಬೇಕು ಎಂದು ಗಮನಕ್ಕೆ ತಂದು ಒತ್ತಾಯಿಸಿದರು.

ಡಿವೈಎಫ್ಐ ಸಂಡೂರು ತಾಲ್ಲೂಕು ಅಧ್ಯಕ್ಷರಾದ ಶಿವು ಮಾತನಾಡಿ ರಾಯಚೂರು ಜಿಲ್ಲೆಯ ಜಿಲ್ಲಾ ನ್ಯಾಯಸಲಯದಲ್ಲಿ ದಿನಾಂಕ 26-01-2022 ರಂದು ನಡೆದ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಸಂದರ್ಭದಲ್ಲಿ ಅಲ್ಲಿ ಮಹಾತ್ಮ ಗಾಂಧೀಜಿ ಚಿತ್ರಪಟದ ಜೊತೆ ಇಡಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಚಿತ್ರಪಟವನ್ನು ತೆಗೆದರೆ ಮಾತ್ರ ಧ್ವಜಾರೋಹಣ ಮಾಡುವೆನೆಂದು ಸಂವಿಧಾನ ಶಿಲ್ಪಿಗೆ ಮತ್ತು ಆ ಮೂಲಕ ಭಾರತದ ಸಂವಿಧಾನಕ್ಕೆ ಅಪಮಾನ ಎಸಗಿದ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಮಲ್ಲಿಕಾರ್ಜುನ ಗೌಡರ ಕ್ರಮವನ್ನು ಡಿವೈಎಫ್ಐ ಬಲವಾಗಿ ಖಂಡಿಸುತ್ತದೆ. ಗಣರಾಜ್ಯೋತ್ಸವದ ದಿನವೇ ಸಂವಿಧಾನ ಶಿಲ್ಪಿಗೆ, ಅದು ಕೂಡಾ ನ್ಯಾಯಾಧೀಶರೊಬ್ಬರಿಂದ ಆಗಿರುವ ಅಪಮಾನವು ಅಕ್ಷಮ್ಯವಾಗಿದ್ದು ಈ ಕುರಿತು ಅಗತ್ಯ ಕ್ರಮವಹಿಸುವಂತೆ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿಗಳನ್ನು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.

ದಲಿತ ಯುವಕರ ಸಂಘದ ಅಧ್ಯಕ್ಷರಾದ ಅಂಜಿನಿ ತೋರಣಗಲ್ಲು ಗ್ರಾಮ ಇವರು ಮಾತನಾಡಿ ನ್ಯಾಯಾಲಯಗಳಲ್ಲಿ ಇಂತಹ ಜಾತೀವಾದಿ/ ಕೋಮುವಾದಿ ಮನಸ್ಸುಗಳು ತುಂಬಾ ಅಪಾಯಕರ ಎಂದು ಹೇಳಿದೆ. ರಾಜ್ಯದಾದ್ಯಂತ ಈ ಸಂವಿಧಾನ ವಿರೋಧಿ ಘಟನೆಯನ್ನು ಖಂಡಿಸಿ ಪ್ರತಿಭಟನೆ ಮಾಡಲಾಗಿದ್ದು ಇಂದು ತೋರಣಗಲ್ಲು ಗ್ರಾಮದ ದಲಿತ ಯುವಕರ ಸಂಘ ಮತ್ತು ದಲಿತ ಯುವಜನರು ಹಾಗೂ ಬಂಧುಮಿತ್ರರೊಂದಿಗೆ ಪ್ರತಿಭಟಿಸಿ ಮನವಿ ಪತ್ರವನ್ನು ಮಾನ್ಯ ಉಪಾತಹಾಶೀಲ್ದಾರರು ಮೂಲಕ ಮನವಿಪತ್ರ ಸಲ್ಲಿಸಿದರು

ಈ ಸಂದರ್ಭದಲ್ಲಿ ಬಂಡಿ ಸ್ವಾಮಿ ಹಿರಿಯ ದಲಿತ ಮುಖಂಡರು ಮತ್ತು ಸ್ವಾಮಿ.ಹೆಚ್ ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷರು ಹಾಗೂ ಸುರೇಂದ್ರ, ಕರಿಭೇಶ, ಅಭಿ, ಶೆಕ್ಷ, ರಾಹುಲ್, ಶಂಕರ,ಹೊನ್ನರಸ್ವಾಮಿ, ತಾಯಪ್ಪ ಇತರರು ಭಾಗವಹಿಸಿದ್ದರು..

LEAVE A REPLY

Please enter your comment!
Please enter your name here