ಮಹಾರುದ್ರಾಭಿಷೇಕದೊಂದಿಗೆ ಶಿವರಾತ್ರಿ ಆಚರಣೆ

0
85

ಕೊಟ್ಟೂರು: ಮಂಗಳವಾರದ ಮಹಾಶಿವರಾತ್ರಿ ಹಬ್ಬ ಇದೀಗ
ಕೊಟ್ಟೂರಿನಲ್ಲಿ ಸಾಗಿರುವ ಕೊಟ್ಟೂರೇಶ್ವರ ಜಾತ್ರೆಯ ಸಡಗರ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದಿದೆ.

ಕೊಟ್ಟೂರೇಶ್ವರನ ಜಪ ತಪ ಹಾಡುಗಳ ಮಾರ್ಧನಿ ಪಟ್ಟಣದಲ್ಲೆಡೆ ಕಳೆದ ವಾರದಿಂದ ಮೊಳಗುತ್ತಿದ್ದರೆ ಮಂಗಳವಾರ ಕೊಟ್ಟೂರಿನಲ್ಲಿ ಇದರೊಟ್ಟಿಗೆ ಶಿವನಾಮ, ಜಪ ಓಂ ನಮಃ ಶಿವಾಯ ಮಂತ್ರಗಳ ಘೋಷಣೆ ಕೇಳಿ ಬಂದು ಆಸ್ತಿಕ ಭಕ್ತರ ಧಾರ್ಮಿಕ ಕೈಂಕರ್ಯಗಳಿಗೆ ಮುದನೀಡಿತು.

ಮಹಾಶಿವರಾತ್ರಿ ಅಂಗವಾಗಿ ಸಾವಿರಾರು ಭಕ್ತರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸಿ ಭಕ್ತಿ ಸಮರ್ಪಿಸಿದರು, ಬೆಳಗಿನ ಜಾವ ಶ್ರೀಕೊಟ್ಟೂರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕದೊಂದಿಗೆ ಶಿವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಿದರು.

ಮಹಾಶಿವರಾತ್ರಿ ಅಂಗವಾಗಿ ಸಾವಿರಾರು ಭಕ್ತರು ಕೊಟ್ಟೂರೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸಿ ಭಕ್ತಿ ಸಮರ್ಪಿಸವುದು ಬೆಳಗಿನಿಂದ ನಡೆದೇಯಿದೆ. ಬೆಳಗಿನ ಜಾವ ಶ್ರೀಕೊಟ್ಟೂರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕದೊಂದಿಗೆ ಶಿವರಾತ್ರಿ ಆಚರಣೆಗೊಂಡಿತು. ಶ್ರೀಸ್ವಾಮಿಯ ಮೂರು ಪ್ರಮುಖ ಮಠಗಳಾದ ಹಿರೇಮಠ, ತೊಟ್ಟಿಲು ಮಠ, ಗಚ್ಚಿನಮಠಗಳಿಗೆ ದಂಡು ದಂಡಾಗಿ ಭಕ್ತರು ತೆರಳಿ ಪೂಜೆ ಸಲ್ಲಿಸಿದರು. ಇಲ್ಲಿನ ಈಶ್ವರ ದೇವಸ್ಥಾನವೆನಿಸಿಕೊಂಡಿರುವ
ಗದ್ದಿಕಲ್ಲೇಶ್ವರ, ಮಳೆಮಲ್ಲೇಶ್ವರ, ಸಿರಿಮಠಲಿಂಗೇಶ್ವರ, ಚಂದ್ರಮೌಳೇಶ್ವರ, ಮಾರ್ಕಂಡೇಶ್ವರ, 108 ಶಿವಲಿಂಗಗಳ ದೇವಸ್ಥಾನ, ಸೋಮಲಿಂಗೇಶ್ವರ, ರಾಮಲಿಂಗೇಶ್ವರ ಗುಡಿಗಳಿಗೆ ಭಕ್ತರು ಮಂಗಳವಾರ ಬೆಳಗ್ಗಿನಿಂದಲೇ ತೆರಳಿ ನಿರಂತರ ರುದ್ರಾಭಿಷೇಕ ಮತ್ತು ವಿಷೇಶ ಪೂಜೆಗಳನ್ನು ಕುಟುಂಬ ಸಮೇತರಾಗಿ ಸೇವೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಪಟ್ಟಣದ ಗದ್ದಿ ಕಲ್ಲೇಶ್ವರ ದೇವಸ್ಥಾನದ ಈಶ್ವರ ಲಿಂಗಮೂರ್ತಿಗೆ ಮಂಗಳವಾರ ರಾತ್ರಿಯುದ್ದಕ್ಕೂ ಮಹಾರುದ್ರಾಭಿಷೇಕ ಕೈಂಕರ್ಯವನ್ನು ಕೈಗೊಳ್ಳಲಾಗಿದೆ. ತಾಲೂಕಿನ ಉಜ್ಜಯಿನಿ ಸದ್ಧರ್ಮ ಪೀಠದಲ್ಲೂ ಸಹ ಮಹಾಶಿವರಾತ್ರಿಯ ಸಡಗರ ಸಂಭ್ರಮ ಹೆಚ್ಚಾಗಿ ಕಂಡುಬಂತು. ರಾತ್ರಿ ಸದ್ದರ್ಮ ಪೀಠದ ಒಡೆಯ ಮಹಾಮರುಳಸಿದ್ದ ಸ್ವಾಮಿಯ ಲಿಂಗಮೂರ್ತಿಗೆ ವಿಶೇಷ ಪೂಜಾ ಮಹಾರುದ್ರಾಭಿಷೇಕ ಕೈಂಕರ್ಯ ನಡೆದವು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here