ಬಂಜಾರ ಮಹಿಳಾ ತರಬೇತಿ ಮತ್ತು ವಸತಿ ನಿಲಯದ ಸದುಪಯೋಗ ಪಡೆದುಕೊಂಡು ಸಬಲರಾಗಬೇಕು–ಕೆ.ಸಿ. ನಾರಾಯಣಗೌಡ

0
139

ಶಿವಮೊಗ್ಗ, ಮಾರ್ಚ್ 22 : ಬಂಜಾರ ಮಹಿಳಾ ತರಬೇತಿ ಮತ್ತು ವಸತಿ ನಿಲಯವು ನಿರ್ಮಾಣವಾಗಿರುವುದು ಬಂಜಾರಾ ಮಹಿಳೆಯರಿಗೆ ತುಂಬಾ ಅನುಕೂಲವಾಗಿದ್ದು, ಉದ್ಯೋಗಸ್ಥ ಮಹಿಳೆಯರಿಗೆ ವಸತಿ ಪಡೆಯಲು ಅನುಕೂಲವಾಗಿದೆ. ಮಹಿಳೆಯರು ಸ್ವ ಉದ್ಯೋಗದ ಕುರಿತು ಹೆಚ್ಚಿನ ತರಬೇತಿ ಪಡೆದು ಸ್ವಾಬಲಂಬಿಗಳಾಗಿ ಸಬಲರಾಗಬೇಕು ಎಂದು ರೇಷ್ಮೇ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಸಿ. ನಾರಾಯಣಗೌಡ ತಿಳಿಸಿದರು
ಅವರು ಮಾ. 20 ರಂದು ಶಿವಮೊಗ್ಗ ನಗರದ ಕುವೆಂಪು ನಗರ, ರೆಡ್ಡಿ ಬಡಾವಣೆಯಲ್ಲಿ, ಕರ್ನಾಟಕ ತಾಂಡ ಅಭಿವೃದ್ದಿ ನಿಗಮ ನಿಯಮಿತ ಬೆಂಗಳೂರು ವತಿಯಿಂದ ಶಿವಮೊಗ್ಗ ಜಿಲ್ಲಾ ಬಂಜಾರ ಮಹಿಳಾ ತರಬೇತಿ ಹಾಗೂ ವಸತಿ ನಿಲಯದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪರವರು ಬಂಜಾರ ಸಮುದಾಯದ ಮಹಿಳೆಯರ ಏಳಿಗೆಗೆ ಜಿಲ್ಲಾ ಬಂಜಾರ ಮಹಿಳಾ ತರಬೇತಿ ಹಾಗೂ ವಸತಿ ನಿಲಯವನ್ನು ನಿರ್ಮಾಣ ಮಾಡಿರುವುದು ಹೆಮ್ಮೆಯ ಸಂಗತಿ ಇದರ ಸದುಪಯೋಗ ಪಡೆದುಕೊಂಡು ಮಹಿಳೆಯರ ಸಬಲೀಕರಣವಾಗಬೇಕು ಎಂದರು.
ಶಿವಮೊಗ್ಗ ಜಿಲ್ಲೆ ಸಂಸದರು ಬಿ.ವೈ ರಾಘವೇಂದ್ರ ಮಾತನಾಡಿ ಬಂಜಾರ ಸಮುದಾಯವು ಸ್ವಾಭಿಮಾನಿ ಜನಾಂಗ ಕಷ್ಟ ಜೀವಿಗಳು ಪರಿಶ್ರಮದಿಂದ ಏಳಿಗೆಹೊಂದುತ್ತಿದ್ದು, ಬಂಜಾರ ಸಮುದಾಯದ ಮಹಿಳೆಯರ ಏಳಿಗೆಗೆ ಮಹಿಳಾ ತರಬೇತಿ ಹಾಗೂ ವಸತಿ ನಿಲಯವನ್ನು ಸ್ಥಾಪನೆ ಮಾಡಿರುವುದು ತುಂಬಾ ಉಪಕಾರಿಯಾಗಿದೆ. ಬಂಜಾರ ಸಮುದಾಯದ ಮಹಿಳೆಯರ ಏಳಿಗೆಗೆ ಶ್ರಮಿಸಲಾಗುವುದು ಎಂದರು.
ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ,ಬಿ ಅಶೋಕ್ ನಾಯ್ಕ ಜಿಲ್ಲಾ ಬಂಜಾರ ಮಹಿಳಾ ತರಬೇತಿ ಹಾಗೂ ವಸತಿ ನಿಲಯವನ್ನು ನಿರ್ಮಾಣಮಾಡಿರುವುದು ಬಂಜಾರ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 200 ತಾಂಡಗಳಿದ್ದು ಇದರ ಸದುಪಯೋಗವನ್ನು ಬಂಜಾರ ಸಮುದಾಯದ ಮಹಿಳೆಯರು ಪಡೆದುಕೋಳ್ಳಲು ಸಲಹೆ ನೀಡಿದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಸವಿತಾ ಶಿವಕುಮಾರನಾಯ್ಕ ಮಾತನಾಡಿ ಶಿವಮೊಗ್ಗ ಜಿಲ್ಲೆಯಲ್ಲಿ ಈ ಕಟ್ಟಡ ನಿರ್ಮಾಣವಾಗಿದ್ದು ನಾವು ಇದರ ಉಪಯೋಗ ಪಡೆದುಕೊಳ್ಳಬೇಕು. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಇದರ ಏಕೈಕ ಮಹಿಳಾ ನಿರ್ದೇಶಕರಾಗಿ ಆಯ್ಕೆಯಾಗಿ ಶಿವಮೊಗ್ಗ ನಗರದ ಮಹಿಳಾ ವಸತಿ ಹಾಗೂ ತರಬೇತಿ ನಿಲಯ ನಿರ್ಮಾಣವಾಗಿರುವುದು ಹೆಮ್ಮಯ ಸಂಗತಿ. ವಿವಿದ ತರಬೇತಿಯನ್ನು ಈ ಕಟ್ಟಡದಲ್ಲಿ ಪಡೆದು ಮಹಿಳೆಯರು ಅಭಿವೃದ್ಧಿ ಹೊಂದಬೇಕು ಎಂದು ಆಶಾಭಾವ ವ್ಯಕ್ತ ಪಡೆಸಿದೆರು.
ಈ ಕಾರ್ಯಕ್ರಮಕ್ಕೆ ಸೂಡಾ ಸದಸ್ಯರಾದ ದೇವರಾಜ್ ನಾಯ್ಕ, ಧೀರರಾಜ ಹೊನ್ನವಿಲೆ, ಅಧ್ಯಕ್ಷರು, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ, ಮಹಾನಗರ ಪಾಲಿಕೆ ಶಿವಮೊಗ್ಗ ಹಾಗೂ ಕರ್ನಾಟಕ ತಾಂಡ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಯು. ಚಂದ್ರಾನಾಯ್ಕ, ಶಿವಮೊಗ್ಗ ವಲಯದ ಅಭಿವೃದ್ದಿ ಅಧಿಕಾರಿ ಡಿ. ಮಲ್ಲೇಶಪ್ಪ, ಸಹಾಯಕ ಅಭಿಯಂತರರಾದ ಜಗದೀಶ್ ನಾಯ್ಕ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಶಿವಮೊಗ್ಗ ಜಿಲ್ಲಾ ಬಂಜಾರ ಮಹಿಳಾ ಸೇವಾ ಸಂಘದ ಅದ್ಯಕ್ಷರಾದ ಪೆÇ್ರೀ|| ಸಾಕಮ್ಮ ಬಾಯಿ, ಕಾರ್ಯಾದರ್ಶಿ ಸುಧಾಮಣಿ ಬಿ. ಮತ್ತು ಸಂಘದ ನಿರ್ದೇಶಕರು, ಜಿಲ್ಲಾ ಬಂಜಾರ ಸಮುದಾಯದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here