ತುಳಿತಕ್ಕೊಳಗಾದವರ ಪ್ರತಿಯೊಬ್ಬರಿಗೆ ಬಿಜೆಪಿ ಮೀಸಲಾತಿ ಲಾಭ ನೀಡಿದೆ.

0
246

ಕೊಟ್ಟೂರು:ಬಿಜೆಪಿ ಸರ್ಕಾರ ಒಳ ಮೀಸಲಾತಿಯ ಲಾಭ ಪ್ರತಿಯೊಬ್ಬ ತುಳಿತಕ್ಕೊಳಗಾದ ಜನರಿಗೆ ಸಿಗಬೇಕು ಎನ್ನುವ ಕಾರಣಕ್ಕಾಗಿ ಅವರ ಹಿತ ಕಾಪಾಡಿದೆ. ಇದರ ಜೊತೆಗೆ ಒಳ ಮೀಸಲಾತಿಯಿಂದ ಯಾರಿಗೂ ಹೊಡೆತ ಬೀಳದಂತೆ ಗಮನ ಹರಿಸಿದೆ ಎಂದು ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಲ್ಲಾಹುಣ್ಸಿ ರಾಮಣ್ಣ ಹೇಳಿದರು.

ಶನಿವಾರ ನಡೆದ ಪಟ್ಟಣದ ಶ್ರೀಗುರುಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಸವರಾಜ್‌ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಡಬಲ್ ಇಂಜಿನ್ ಸರ್ಕಾರವನ್ನು ನಡೆಸುತ್ತ ಹಲವು ಬಗೆಯ ಜನಪರ ಯೋಜನೆಗಳು ಮತ್ತು ಅಭಿವೃದ್ದಿ ಕಾರ್ಯಗಳು ಕೈಗೊಂಡಿದ್ದು ಇವರ ಈ ಬಗೆಯ ಕಾರ್ಯತತ್ಪರತೆಯೇ ನನ್ನ ಗೆಲುವಿಗೆ ಖಂಡಿತ ಕಾರಣವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಆಸೆ ಹೊಂದಿ ಪಕ್ಷದ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದೆ. ಆದರೆ ಬಿಜೆಪಿ ತತ್ವಸಿದ್ದಾಂತ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷದ ಟಿಕೇಟ್ ನೀಡಿ ಆತನೊಂದಿಗೆ ಎಲ್ಲ ಬಗೆಯ ಸಮುದಾಯದವರಿಗೆ ಸಾಮಾಜಿಕ ಒದಗಿಸಿ ಕೊಟ್ಟಿದೆ ಎಂಬುದನ್ನು ನನಗೆ ಟಿಕೇಟ್ ನೀಡುವ ಮೂಲಕ ತೋರಿಸಿಕೊಟ್ಟಿದೆ ಎಂದರು.

ಸಂಸದ ವೈ.ದೇವೇಂದ್ರಪ್ಪ ಮಾತನಾಡಿ ಜಿಲ್ಲೆಯಲ್ಲಿ ನಡೆಯಲಿರುವ ಬಾರಿ ಪ್ರಮಾಣದ ಅಭಿವೃದ್ದಿ ಕಾಮಗಾರಿಗಳು ನಡೆಯಲು ಡಬಲ್ ಇಂಜಿನ್ ಸರ್ಕಾರ ಖಂಡಿತ ಕಾರಣ. ಈ ಕಾರಣಕ್ಕಾಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜನತೆ ಮತ್ತಷ್ಟು ಅಭಿವೃದ್ದಿ ಹೊಂದಲು ಬಿಜೆಪಿ ಅಭ್ಯರ್ಥಿ ಬಲ್ಲಾಹುಣ್ಸಿ ರಾಮಣ್ಣನವರಿಗೆ ಗೆಲುವು ಸಾಧಿಸಿ ಕೊಡಬೇಕೆಂದು ಕೋರಿದರು.

ನಿವೃತ್ತ ಐ.ಎ.ಎಸ್. ಅಧಿಕಾರಿ ಲಕ್ಷಿನಾರಾಯಣ, ಹೆಚ್.ಬಿ.ಜಯಪ್ರಕಾಶ, ನಂಜನಗೌಡ, ವೀರೇಶಸ್ವಾಮಿ, ಎಸ್.ತಿಂದಪ್ಪ, ಕೆ.ಎಸ್.ಈಶ್ವರಗೌಡ, ಜಿ.ಸಿದ್ದಯ್ಯ, ಕೃಷ್ಣ ನಾಯ್ಕ, ಭದ್ರವಾಡಿ ಚಂದ್ರಶೇಖರ, ಬುಡ್ಡಿಬಸವರಾಜ, ಕಿಚಡಿ ಕೊಟ್ರೇಶ, ರಾಜೇಶ ಕಾರ್ವ, ಸಭೆಯನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.

ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ, ಮುತುಗನಹಳ್ಳಿ ಕೊಟ್ರೇಶ, ಬಿ.ಭರಮನಗೌಡ, ಟಿ.ಹೆಚ್.ಕೊಟ್ರೇಶ, ಪೂಜಾರ್ ಉಮೇಶ, ಮಲ್ಲಿಕಾರ್ಜುನ, ಮತ್ತಿತರರು ವೇದಿಕೆಯಲ್ಲಿದ್ದರು.
ಬಿಜೆಪಿ ಮಂಡಲ್ ಕಾರ್ಯದರ್ಶಿ ಡಾ.ರಾಕೇಶ ನಿರೂಪಿಸಿದರು. ಮಲ್ಲಿಕಾರ್ಜುನ. ವಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here