ಭಕ್ತರ ಇಷ್ಟಾರ್ಥ ಈಡೇರಿಸೋ ಶ್ರೀ ವಡನಬೈಲು ಪದ್ಮಾವತಿ ದೇವಿ ಮಾಹಾತ್ಮೆ..!!

0
92

ಮಲೆನಾಡು ಭಾಗದ ಜನರಿಗೆ ಈ ದೇವಿ ಮೇಲೆ ಎಲ್ಲಿಲ್ಲದ ಭಕ್ತಿ. ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಜನರಿಗಂತೂ ಈ ಶಕ್ತಿ ಮೇಲೆ ಅಪಾರ ನಂಬಿಕೆ. ಭಕ್ತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆಯೊಂದಿಗೆ ಈ ಸನ್ನಿದಿಗೆ ಬರೋ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಕ್ಷೇತ್ರದಲ್ಲಿ ನೀಡುವ ಹುತ್ತದ ಮಣ್ಣಿನ ತೀರ್ಥ ಸೇವಿಸಿದರೆ, ಸಂಕಷ್ಟಗಳು ಪರಿಹಾರವಾಗಿ, ಸುಖ ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಭಕ್ತರದ್ದು.

ಹೌದಾ.. ಯಾವುದಪ್ಪ ಆ ದೇವಸ್ಥಾನ ಎಂದರೇ.. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ಸಮೀಪದ ವಡನ್‌ ಬೈಲ್‌ನಲ್ಲಿರುವ ಪದ್ಮಾವತಿ ದೇವಿಯ ಸನ್ನಿಧಿಯೇ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಜಾಗ. ಜೋಗದಿಂದ ಸುಮಾರು 8 ಕಿಮೀ ದೂರ ಸಾಗಿದರೆ ಈ ದೇವಸ್ಥಾನ ಸಿಗುತ್ತದೆ. ಇಲ್ಲಿನ ಪದ್ಮಾವತಿ ದೇವಿಯ ಶಿಲೆಗೆ ಸುಮಾರು 300 ವರ್ಷಗಳ ಇತಿಹಾಸವಿದ್ದು, ಇಲ್ಲಿ ಪ್ರತಿಷ್ಠಾಪನೆಗೂ ಮುನ್ನ ಹೆಬ್ಬೈಲು ಎಂಬ ಗ್ರಾಮದಲ್ಲಿ ದೇವಿ ಮೂರ್ತಿ ಇತ್ತು. ಲಿಂಗನಮಕ್ಕಿ ಜಲಾಶಯ ನಿರ್ಮಾಣದ ಸಮಯದಲ್ಲಿ ಈ ಮೂರ್ತಿಯನ್ನು ವಡನ್‌ ಬೈಲುವಿಗೆ ತರಲಾಗಿತ್ತು. ಇಲ್ಲಿನ ಪದ್ಮಾವತಿ ದೇವಿಯ ಇತಿಹಾಸ ನೋಡಿದರೆ ಒಂದಿಷ್ಟು ಸ್ವಾರಸ್ಯ ಕಂಡುಬರುತ್ತದೆ. ಹೆಬ್ಬೈಲುವಿನಲ್ಲಿ 25 ಅಡಿ ಹುತ್ತದಿಂದ ಸುತ್ತುವರಿದಿದ್ದ ಪದ್ಮಾವತಿ ದೇವಿಯ ಮೂರ್ತಿಗೆ ಜಲಾಶಯ ನಿರ್ಮಾಣದ ವೇಳೆ ಪೂಜೆ ನಿಂತಿತ್ತು. ಬಳಿಕ ದೇವಸ್ಥಾನದ ವಂಶಸ್ಥ ವೀರ ರಾಜಯ್ಯ ಜೈನ್ ಅವರಿಗೆ ಕನಸಿನಲ್ಲಿ ಬಂದು ದೇವಿ ಪೂಜೆ ಮಾಡಲು ಸೂಚನೆ ನೀಡುತ್ತಾಳೆ.

ಈ ವೇಳೆ ವೀರ ರಾಜಯ್ಯ ಮೊದಲಿದ್ದಂಗೆ ಮೂರ್ತಿ ಸುತ್ತ ಹುತ್ತ ನಿರ್ಮಾಣವಾದರೇ ಮಾತ್ರ ಪೂಜೆ ಸಲ್ಲಿಸುತ್ತೇನೆ ಎಂದು ಸವಾಲು ಹಾಕುತ್ತಾರೆ. ಮರುದಿನವೇ ಮೂರ್ತಿ ಸುತ್ತ ಹುತ್ತ ನಿರ್ಮಾಣವಾಗಿದ್ದರಿಂದ ಮತ್ತೆ ಪೂಜೆ ಶುರುವಾಗುತ್ತದೆ. ಈಗ ದೇವಿಯ ಮೂರ್ತಿ ಸುತ್ತಲು ಸುಮಾರು 12 ಅಡಿ ಎತ್ತರದ ಹುತ್ತ ಸುತ್ತುವರೆದಿದೆ. ಪ್ರತಿ ನಿತ್ಯ ನೂರಾರು ಜನ ಭಕ್ತರು ಬಂದು ತಮ್ಮ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಇಲ್ಲಿ ಬರುವಂತಹ ಭಕ್ತರಿಗೆ ಹುತ್ತದ ಮಣ್ಣು ಹಾಕಿರುವಂತ ತೀರ್ಥ ಸೇವನೆಗೆ ನೀಡಲಾಗುತ್ತೇ. ಈ ತೀರ್ಥ ಸೇವನೆ ಮಾಡಿದರೆ ಸಾಕು, ಸಕಲ ಚರ್ಮ ರೋಗಗಳು ವಾಸಿಯಾದ ಉದಾಹರಣೆಗಳು ಇವೆ. ಅಲ್ಲದೇ ಸಂತಾನ ಭಾಗ್ಯವಿಲ್ಲದವರು ಇಲ್ಲಿಗೆ ಬಂದು ದೇವಿಯಲ್ಲಿ ಹರಕೆ ಹೊತ್ತರೆ ಸಾಕು ಮಕ್ಕಳ ಭಾಗ್ಯವನ್ನು ಕರುಣಿಸುತ್ತಾಳೆ ಪದ್ಮಾವತಿ. ಇಂತಹ ವಿಸ್ಮಯಗಳಿಂದಾಗಿ ದೇವಿಗೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

■ಪದ್ಮಾವತಿ ದೇವಸ್ಥಾನ, ವಡಂಬೈಲು;

ಶಿವಮೊಗ್ಗ ಜಿಲ್ಲೆಯ ಸಾಗರ  ತಾಲ್ಲೂಕಿನಲ್ಲಿರುವ ಜೋಗದಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ವಡಂಬೈಲು ಎಂಬಲ್ಲಿ ಈ ಕ್ಷೇತ್ರವಿದೆ. 

ಶರಾವತಿ ವಿದ್ಯದಾಗಾರದ ಪ್ರದೇಶವಾದ್ದರಿಂದ ಜೋಗದಿಂದ ಮೊದಲು ಅನುಮತಿ ಪತ್ರವನ್ನು ತೆಗೆದುಕೊಂಡು ಹೋಗಬೇಕು. ಚೆಕ್ ಪೋಸ್ಟ್ ಕೂಡ ಇದೆ. ಪ್ರಕೃತಿಯ ಮಡಿಲಲ್ಲಿ ಶ್ರೀ ಪದ್ಮಾವತಿ ಅಮ್ಮನವರ ದೇವಾಲಯವಿದೆ. 
ಶರಾವತಿ ತಟದಲ್ಲಿರುವ ಈ ದೇವಾಲಯ ಶರಾವತಿಯ ಹಿನ್ನೀರಿನಿಂದ ಆವೃತವಾಗಿದೆ. ದೇವಾಲಯದ ಸುತ್ತಮುತ್ತಲ ಪ್ರದೇಶ ಹಸಿರು ವನರಾಜಶಿಯಿಂದ ಕಂಗೊಳಿಸುತ್ತಿದೆ. ಶಾಂತಿ ಧಾಮವಾಗಿರುವ ಈ ದೇವಾಲಯವುಜೈನ ಪರಂಪರೆಯ ಇತಿಹಾಸವನ್ನು ಹೊಂದಿದೆ. ಅತಿ ಎತ್ತರವಾಗಿರುವ ಆದಿಶೇಷನ ವಿಗ್ರಹವೂ ಇಲ್ಲಿ ಇದೆ. ಈ ದೇವಾಲಯಕ್ಕೆ ರಾಜ್ಯದ ಅನೇಕ ಕಡೆಗಳಿಂದ ಭಕ್ತಾದಿಗಳು ಬರುತ್ತಾರೆ. ಇಲ್ಲಿ ಬಂದ ಭಕ್ತಾದಿಗಳಿಗೆ ವಸತಿ ಊಟದ ವ್ಯವಸ್ಥೆಯೂ ಇದೆ.

ಇಲ್ಲಿಂದ ಸುಮಾರು 2ಕಿ.ಮೀ. ದೂರದಲ್ಲಿ ಒಂದು ಶಿವನ ದೇವಾಲಯವಿದೆ. ಇದಕ್ಕೆ ಮರಾಠಿಕೇರಿ ಶ್ವೇತ ಲಿಂಗ ಎಂದು ಕರೆಯುವರು. ಸುಮಾರು 15ನೇ ಶತಮಾನದ ಇತಿಹಾಸ ಹೊಂದಿರುವ ಈ ದೇವಾಲಯವನ್ನು ರಾಣಿ ಚೆನ್ನ ಭೈರಾದೇವಿಯು ನಿರ್ಮಿಸಿದಳು. ಬಂಕನಬಳ್ಳು ಬಸದಿಯ ಪ್ರಾಂಗಣದೊಳಗೆ ಇದ್ದ ಇದು ವಟ್ಟಕ್ಕಿ ಮನೆತನದ ಸುಪರ್ಧಿಯಲ್ಲಿತ್ತು. (ಶಾಸನದ ಕಲ್ಲು ನೀರಿನಲ್ಲಿ ಮುಳುಗಡೆಯಾಗಿದೆ.) ವಟ್ಟಕ್ಕಿ ಮನೆತನದವರೇ ಇದರ ವಾರಸ್ದಾರರಾಗಿದ್ದರು. ಶಿವನ ಪೂಜೆಯನ್ನು ಪಾರಂಪರಿಕವಾಗಿ ಬಂಕನಬಳ್ಳು ಮನೆತನ ನಡೆಸಿಕೊಂಡು ಹೋಗುತ್ತಿತ್ತು.

ಈ ದೇವಾಲಯದ ಶಿವಲಿಂಗವು ಬಿಳಿ ಬಣ್ಣದಲ್ಲಿದ್ದು ಶ್ವೇತಲಿಂಗವಾಗಿದೆ. ನಾಡಿನಲ್ಲಿ ಎಲ್ಲೂ ಕಾಣ ಸಿಗದ ಅಪರೂಪದ ೨ನೇ ಶಿವಲಿಂಗ ಇದಾಗಿದೆ. ಬಂಕನಬಳ್ಳು ಬಸದಿಯು 1920 ರಲ್ಲಿ ಬಿದರೂರು ಹಾಗು ಮಳಲಿಗೆ ಸ್ಥಳಾಂತರಿಸಲಾಯಿತು. ಆದರೆ ಶಿವಲಿಂಗ ಹಾಗು ನಾಗರ ನೂರಾರು ವಿಗ್ರಹಗಳು ಕ್ಷೇತ್ರಪಾಲ ದೇವರು ಅಲ್ಲಿಯೇ ಇದ್ದವು. ಕಾಲಕ್ರಮೇಣ 1940ರಿಂದ ಬಂಕನಬಳ್ಳಿನ ಈ ಮೇಲಿನ ದೇವರುಗಳನ್ನು ಒಳಗೊಂಡಂತೆ ಹುಳಗೋಡು, ಕೇದಿಗೆಪಾಲು, ಸುಂಕದಮನೆ ಹೆರ್ಕಣಿ ವರೆಗೂ ಪೂಜಾ ಕಾರ್ಯವನ್ನು ಹಂಜಕ್ಕಿಯ ಪುಟ್ಟಸ್ವಾಮಿ ಹಾಗು ಪುಟ್ಟಯ್ಯಗೌಡರು ನೆರವೇರಿಸಿಕೊಂಡು ಬಂದಿದ್ದರು. ಈ ಪೂಜಾ ಅಧಿಕಾರವನ್ನು ವಟ್ಟಕ್ಕಿ ಪದ್ಮಯ್ಯಗೌಡರು ನೀಡಿದ್ದರು. 1963 ರವರೆಗೂ ಸತತವಾಗಿ 23 ವರ್ಷ ಹಂಜಕ್ಕಿ ಮನೆತನವೇ ಶಿವಲಿಂಗದ ಪೂಜಾಕರ್ತರಾಗಿದ್ದರು. 1963 ಸೆಪ್ಟೆಂಬರ್ ತಿಂಗಳಲ್ಲಿ ವಟ್ಟಕ್ಕಿ ಬೊಮ್ಮಯ್ಯಗೌಡರು ಹಾಗು ಹಂಜಕ್ಕಿ ಪುಟ್ಟಯ್ಯಗೌಡರ ಆಣತಿಯಂತೆ ಈಗಿರುವ ಸ್ಥಳಕ್ಕೆ ಶಿವಲಿಂಗವನ್ನು ಸ್ಥಳಾಂತರಿಸಲಾಯಿತು.

■ಅಮ್ಮನಿಗೆ ಬಳೆ ಹರಕೆ ಮಾಡಿಕೊಂಡರೆ ನೂರಕ್ಕೆ ನೂರರಷ್ಟು ಸಮಸ್ಯೆಗಳಿಗೆ ಪರಿಹಾರ;

ಅಮ್ಮನಿಗೆ ಬಳೆ ಹರಕೆ ಮಾಡಿಕೊಂಡರೆ ನೂರಕ್ಕೆ ನೂರರಷ್ಟು ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.ಮನುಷ್ಯನಾಗಿ ಹುಟ್ಟಿದಂತಹ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯಾದಂತಹ ಸಮಸ್ಯೆಗಳು ಇರುತ್ತದೆ ಇದನ್ನು ನಾವು ನೋಡಿರುತ್ತೇವೆ ಏಕೆಂದರೆ ನಮ್ಮ ಜೀವನದಲ್ಲಿ ಕೂಡ ಹಲವಾರು ರೀತಿಯಾದಂತಹ ಸಮಸ್ಯೆಗಳು ಬರುತ್ತದೆ. ಆದರೆ ಈ ಸಮಸ್ಯೆಗಳಿಗೆ ಭಯಪಟ್ಟು ಕೈಕಟ್ಟಿ ಕೂರುವ ಬದಲು ಕೆಲವೊಮ್ಮೆ ಧೈರ್ಯವಾಗಿ ಮುನ್ನಾಗಬೇಕಾಗುತ್ತದೆ. ಈ ಧೈರ್ಯ ಬೇಕು ಅಂದರೆ ನಮಗೆ ದೈವಬಲ ಬೇಕಾಗುತ್ತದೆ. ಹಾಗಾಗಿ ನಾನು ನಿಮಗೆ ಒಂದು ಅದ್ಭುತವಾದಂತಹ ದೇವಸ್ಥಾನದ ಬಗ್ಗೆ ತಿಳಿಸುತ್ತಿದ್ದೇನೆ ಈ ದೇವಸ್ಥಾನಕ್ಕೆ ಹೋಗಿ ಮನಸ್ಪೂರ್ವಕವಾಗಿ ತಾಯಿಯನ್ನು ಬೇಡಿಕೊಂಡರೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಕೋರಿಕೆಗಳು ಇಡೇರುತ್ತದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಇದೆ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡಂತಹ ಸಾಕಷ್ಟು ಜನರ ಕಾರ್ಯಗಳು ಈಡೇರಿದೆ.

ಹಾಗಾಗಿ ಈ ದೇವಸ್ಥಾನ ತುಂಬಾನೇ ಪ್ರಸಿದ್ಧಿಯಾಗಿದೆ ಇಲ್ಲಿನ ದೇವಸ್ಥಾನಕ್ಕೆ ಬಂದು ಮನಸ್ಸಿನಲ್ಲಿ ಬೇಡಿಕೊಂಡ ಎಲ್ಲಾ ಕೆಲಸಗಳು ಕೂಡ ನೆರವೇರುತ್ತದೆ. ಮಕ್ಕಳು ಇಲ್ಲದವರಿಗೆ ಮಕ್ಕಳ ಯೋಗ, ಮದುವೆಯಾಗದವರಿಗೆ ಕಂಕಣಬಲ, ಕೋರ್ಟು ಕೇಸು ಕಚೇರಿ ಅಂತ ಅಲೆಯುತ್ತ ಇರುವವರಿಗೆ ಅವರ ಪರವಾಗಿ ಜಯ, ಉದ್ಯೋಗದಲ್ಲಿ ಸಾಕಷ್ಟು ಕಷ್ಟವನ್ನು ಅನುಭವಿಸುತ್ತಿದ್ದಾರೆ ಅದರಿಂದ ಪರಿಹಾರ. ಹೀಗೆ ನಾನಾ ರೀತಿಯಾದಂತಹ ತೊಂದರೆಗಳಿಗೆ ಇಲ್ಲಿ ನೆಲೆಸಿರುವಂತಹ ತಾಯಿ ಪದ್ಮಾವತಿ ದೇವಿಯ ಪರಿಹಾರವನ್ನು ನೀಡುತ್ತಾಳೆ. ಹಾಗಾಗಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಈ ದೇವಸ್ಥಾನಕ್ಕೆ ಬಂದು ಹೋದ ಒಂದೆರಡು ದಿನಗಳ ಒಳಗಾಗಿಯೇ ತಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಾಗುತ್ತದೆ. ಹಾಗಾಗಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ

LEAVE A REPLY

Please enter your comment!
Please enter your name here