ಕ್ಷಯ ಮುಕ್ತ ರಾಷ್ಟ್ರವಾಗಿಸಲು ಎಲ್ಲರೂ ಕೈಜೋಡಿಸಿ: ಡಾ.ಗೋಪಾಲ್ ರಾವ್,

0
1148

ಸಂಡೂರು:24:ಮಾ:- ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ, ಸಮುದಾಯ ಆರೋಗ್ಯ ಕೇಂದ್ರ, ತೋರಣಗಲ್ಲು, ಹಾಗೂ ಒ.ಪಿ.ಜೆ ನರ್ಸಿಂಗ್ ಕಾಲೇಜು, ಇವರ ಸಹಯೋಗದಲ್ಲಿ ” ವಿಶ್ವ ಕ್ಷಯರೋಗ ದಿನ ” ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,

ಈ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ಗೋಪಾಲ್ ರಾವ್ ಅವರು , 2025 ಕ್ಕೆ ಕ್ಷಯ ಮುಕ್ತ ರಾಷ್ಟ್ರ ನಿರ್ಮಾಣದ ಗುರಿಯನ್ನು ಸಾಧಿಸಲು ಪ್ರಯತ್ನ ನಡೆದಿದೆ, ಇಲಾಖೆಯ ಪ್ರಯತ್ನಕ್ಕೆ ಜನರು ಪೂರ್ಣ ಸಹಕಾರ ನೀಡಬೇಕಿದೆ, ಕ್ಷಯರೋಗದ ಲಕ್ಷಣಗಳು ಎರಡು ವಾರಕ್ಕಿಂತ ಹೆಚ್ಚು ದಿನ ಕೆಮ್ಮು, ಕಫದಲ್ಲಿ ರಕ್ತ, ಜ್ವರ, ಹಸಿವೆ ಇಲ್ಲದಿರುವುದು, ದಿನೆ ದಿನೆ ತೂಕ ಕಡಿಮೆ ಯಾಗುತ್ತಿರುವುದು ಇಂತಹ ಲಕ್ಷಣಗಳು ಇದ್ದವರು ತಪಾಸಣೆಗೆ ಒಳಗಾಗಬೇಕು, ದೀರ್ಘಕಾಲದ ಕಾಯಿಲೆ ಮಧುಮೇಹ, ಬಿ.ಪಿ, ಹೆಚ್.ಐ.ವಿ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಇರುವವರು, ಮದ್ಯಪಾನ, ಧೂಮಪಾನ, ತಂಬಾಕು ಸೇವನೆ ಮಾಡುವವರು, ಸ್ಲಮ್, ಚಿಕ್ಕ ಕೋಣೆಯಲ್ಲಿ ಬಹಳ ಜನ ವಾಸ ವಿರುವವರು, ಧೂಳು, ಗಣಿ ಕಾರ್ಖಾನೆ ಯಲ್ಲಿ ಕೆಲಸ ಮಾಡುವವರು ಅತೀ ಅಪಾಯದಲ್ಲಿ ಇರುವವರಿಗೆ, ಹಿಂದೆ ಕ್ಷಯರೋಗಕ್ಕೆ ಚಿಕಿತ್ಸೆ ಪಡೆದ ಅವರ ಕುಟುಂಬ, ಅಕ್ಕಪಕ್ಕದ ಕುಟುಂಬದವರಿಗೆ ಯಾವುದಾದರೂ ಲಕ್ಷಣಗಳು ಕಂಡು ಬಂದರೆ ತಕ್ಷಣ ಕಫ ಪರೀಕ್ಷೆ, ಎಕ್ಸ್ ರೇ ಮಾಡಿಸಬೇಕು, ರೋಗ ಪತ್ತೆಯಾದರೆ ಆರು ತಿಂಗಳು ಪೂರ್ಣ ಚಿಕಿತ್ಸೆ ತೆಗೆದುಕೊಳ್ಳಬೇಕು, ರೋಗಿಗಳನ್ನು ಪತ್ತೆ ಹಚ್ಚಲು ಜನರ ಸಹಕಾರ ಮುಖ್ಯವಾಗಿದೆ ಹೀಗೆ ಎಲ್ಲರೂ ಕೈ ಜೋಡಿಸಿದರೆ ಕ್ಷಯ ಮುಕ್ತ ರಾಷ್ಟ್ರ ರೂಪಿಸಬಹುದು ಎಂದು ತಿಳಿಸಿದರು,

ಜಿಂದಾಲ್ ನರ್ಸಿಂಗ್ ಸ್ಟೂಡೆಂಟ್ಸ್ ಬೀದಿ ನಾಟಕದ ಮೂಲಕ ಒಂದು ಕುಟುಂಬ ರೋಗದ ನಿರ್ಲಕ್ಷ ಸ್ವಾಭಾವದಿಂದ ತೊಂದರೆಗೆ ಒಳಗಾಗುವ ಮತ್ತು ಎರಡನೇ ಕುಟುಂಬದ ರೋಗಿ ಕೆಲವುದಿನ ಚಿಕಿತ್ಸೆ ಪಡೆಯುತ್ತಾ ಲಕ್ಷಣಗಳು ಕಡಿಮೆಯಾಗಿದೆ ಮತ್ತೆಕೇ ಆರು ತಿಂಗಳ ಮಾತ್ರೆ ಸೇವನೆ ಎಂದು ರೋಗ ಉಲ್ಬಣವಾಗುವ ಎರಡು ಕುಟುಂಬಗಳ ಸನ್ನಿವೇಶವನ್ನು ಉತ್ತಮವಾಗಿ ಅಭಿನಯಿಸಿ, ಕ್ಷಯ ರೋಗ ಪತ್ತೆ, ಪರೀಕ್ಷೆ, ಚಿಕಿತ್ಸೆ ದೊರೆಯುವ, ಚಿಕಿತ್ಸೆಯ ಅಡ್ಡ ಪರಿಣಾಮಗಳು, ನಿಕ್ಷಯ ಸಹಾಯ ಧನ ದ ವಿವರ ಎಲ್ಲಾ ಮಾಹಿತಿಗಳನ್ನು ನೀಡಿದರು, ಜಾಗೃತಿ ಕಾರ್ಯಕ್ರಮ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು,

ಕ್ಷೇತ್ರ‌ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಕ್ಷಯ ಮುಕ್ತ ರಾಷ್ಟ್ರ ನಿರ್ಮಾಣದ ಗುರಿ ಸಾಧಿಸಲು ಇನ್ನೂ ಶ್ರಮ ಪಡಬೇಕಿದೆ,ಲಕ್ಷಣ ಇರುವ ಜನರು ಸ್ವಯಂ ಪ್ರೇರಿತರಾಗಿ ಬೇಗ ಪರೀಕ್ಷೆಗೆ ಒಳಗಾಗ ಬೇಕು, ಸಾಮಾಜಿಕ ಕಳಂಕ ಎಂಬ ಭಾವನೆಯಿಂದ ರೋಗ ಉಲ್ಬಣ ವಾಗುವುದೇ ವಿನಃ ರೋಗಿಗಳಿಗೆ ಅಪಾಯಕಾರಿ ಕ್ಷಯವಾಗಿ ಪರಿಣಮಿಸುವುದು, ಇ ವರ್ಷದ ಘೋಷಣೆಯಂತೆ ಎಲ್ಲಾ ಸಂಪನ್ಮಾಲಗಳ ನ್ನು ಬಳಸಿಕೊಂಡು ಕ್ಷಯರೋಗ ನಿರ್ಮೂಲನೆ ಮಾಡುವುದು ಮತ್ತು ನಮ್ಮೆಲ್ಲರ ಗುರಿ ಕ್ಷಯರೋಗದ ಲಕ್ಷಣಗಳು ಇರುವವರನ್ನು ಪತ್ತೆ ಹಚ್ಚುವುದು, ಪರೀಕ್ಷೆಗೆ ಒಳಪಡಿಸುವುದು,ರೋಗ ದೃಡಪಟ್ಟರೆ ಪೂರ್ಣ ಚಿಕಿತ್ಸೆ ನೀಡುವುದು, ರೋಗಿಗಳ ಸಂಪರ್ಕಿತರನ್ನು ತಪಾಸಣೆಗೆ ಒಳಪಡಿಸುವುದು, ಅವರಲ್ಲಿ ರೋಗ ಕಂಡು ಬಂದರೆ ಅವರಿಗೂ ಚಿಕಿತ್ಸೆ ಕೊಡಿಸುವುದು, ಹೀಗೆ ಮಾಡಿದಲ್ಲಿ ಕ್ಷಯ ಮುಕ್ತ ರಾಷ್ಟ್ರವಾಗುವ ದಿನಗಳು ದೂರವಿಲ್ಲ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ಡಾ.ವೆಂಕಟೇಶ್ವರ ರೆಡ್ಡಿ, ಡಾ.ದೀಪಾ ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಫಾರ್ಮಸಿ ಅಧಿಕಾರಿ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್, ಒ.ಪಿ.ಜೆ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಆನಂದ್ ಕುದರಿ, ಸಹ ಪ್ರಾಚಾರ್ಯರಾದ ಶಿವರಾಜ್, ಉಪ ಪ್ರಾಚಾರ್ಯರಾದ ಎಮ್. ವಿಜಯಲಕ್ಷ್ಮಿ, ಪದ್ಮಾ ಬೀದಿ ನಾಟಕ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಾದ ಜ್ಯೋತಿ, ಪಾರ್ವತಿ, ಹಂಸ,ಅಂಕಿತಾ, ವಾಣಿ, ಭುವನೇಶ್ವರಿ, ಶಿಲ್ಪ, ಕೃತಿಕಾ, ಅಮೃತಾ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

LEAVE A REPLY

Please enter your comment!
Please enter your name here