ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

0
94

ಬಳ್ಳಾರಿ,ಜು.01: ಬಳ್ಳಾರಿ ನಗರದ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಮ್ಸ್ ವೈದ್ಯಕೀಯ ಶಿಕ್ಷಕರು, ಸಿಬ್ಬಂದಿಯವರು ಮತ್ತು ನಗರದ ಬೆಸ್ಟ್ ಕಾಲೇಜಿನ ಹಾಗೂ ಕುಡಿತಿನಿಯ ರಾಯಲ್ ಪೀಪಲ್ ಇಂಟರ್‍ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ವಿಮ್ಸ್‍ನ ವೈದ್ಯಭವನದಲ್ಲಿ “ರಾಷ್ಟ್ರೀಯ ವೈದ್ಯರ ದಿನಾಚರಣೆ” ಆಚರಿಸಲಾಯಿತು.
ವೈದ್ಯರ ದಿನಾಚರಣೆ ಕಾರ್ಯಕ್ರಮಕ್ಕೆ ವಿಮ್ಸ್‍ನ ನಿರ್ದೇಶಕರಾದ ಡಾ.ಗಂಗಾಧರಗೌಡ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಮ್ಸ್ ಸಂಸ್ಥೆಯು ಯಾವಾಗಲೂ ಜನರ ಆರೋಗ್ಯ ಕಾಪಾಡುವಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದರು.
ಯುವ ವೈದ್ಯರಿಗೆ ಮೌಲ್ಯಗಳ ಹಾಗೂ ಸೇವಾ ಮನೋಭಾವದ ಬಗ್ಗೆ ಕಿವಿಮಾತುಗಳನ್ನು ಹೇಳಿದರು.
ವಿಮ್ಸ್ ಸಂಸ್ಥೆಯ ಅಭಿವೃದ್ದಿಗೆ ಸದಾ ಸಹಕಾರ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರಿಂದ ಉದ್ಘಾಟನೆಗೊಂಡಿದ್ದ ಬ್ಯಾಟರಿ ಚಾಲಿತ ವಾಹನಗಳನ್ನು ರೋಗಿಗಳಿಗಾಗಿ ಲೋಕಾರ್ಪಣೆ ಮಾಡಲಾಯಿತು .
ಕಾರ್ಯಕ್ರಮದಲ್ಲಿ ವಿಮ್ಸ್‍ನ ಪ್ರಾಂಶುಪಾಲರಾದ ಡಾ.ಕೃಷ್ಣಸ್ವಾಮಿ, ವಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಯೋಗೇಶ್, ಟ್ರಾಮಾಕೇರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಶಿವ ನಾಯ್ಕ್, ಸರ್ಕಾರಿ ವೆಲ್ಲೆಸ್ಲಿ ಕ್ಷಯರೋಗ ಮತ್ತು ಎದೆರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸುರೇಶ್ ಸಿ.ಎಂ, ವೈದ್ಯಕೀಯ ಶಿಕ್ಷಕರ ಸಂಘದ ಡಾ.ರಾಮರಾಜ್, ಡಾ.ಆಶಾರಾಣಿ, ಡಾ.ರಘುವೀರ್ ಮತ್ತು ಸಂಸ್ಥೆಯ ಭೋದಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here