ಹುಟ್ಟು ಹಬ್ಬವನ್ನು ಯೋಗ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿದ್ದು ಸಮಾಜಕ್ಕೆ ಪೂರಕ- ಡಾ.ಚನ್ನಬಸಪ್ಪ

0
22

ಇಡಿ ಜಗತ್ತು ಇಂದು ಯೋಗವನ್ನು ಗೌರವಿಸುತ್ತಿದೆ, ಅನುಸರಿಸುತ್ತಿದೆ, ಅಲ್ಲದೆ ಅದಕ್ಕೆ ತನ್ನದೇ ಅದ ವಿಶೇಷ ಸ್ಥಾನವನ್ನು ನೀಡಿದೆ, ಅಂತಹ ಯೋಗಮಾಡುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉತ್ತಮವಾದ ಪ್ರದರ್ಶನ ವ್ಯವಸ್ಥೆ ಮಾಡುವುದರ ಜೊತೆಗೆ ಉಚಿತವಾಗಿ ಯೋಗ ಡ್ರೆಸ್ ಕೊಟ್ಟು ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ಉತ್ತಮವಾದ ಬೆಳವಣಿಗೆ ಸಮಾಜಕ್ಕೆ ಪೂರಕವಾದುದು ಎಂದು ಡಾ.ಚನ್ನಬಸಪ್ಪ ತಿಳಿಸಿದರು.
ಅವರು ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿಯ ರೇಣುಕಾ ದರ್ಶಿನಿ ಹೋಟಲ್ ಮಾಲೀಕರಾದ ರಮೇಶ್ ಅವರು ತಮ್ಮ ಮಗ ಜೀವನ ಅವರ ಹುಟ್ಟು ಹಬ್ಬವನ್ನು ಯೋಗ ಪ್ರದರ್ಶನ ಮಾಡಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಿ ಆಚರಿಸಿದ್ದು ಅದನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಗುಡೇಕೋಟೆ ನಾಗರಾಜ ಅವರು ಮಾತನಾಡಿ ಸಂಡೂರಿನಲ್ಲಿ ರಾಜ್ಯಮಟ್ಟಕ್ಕೆ ಹೋಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ವಿದ್ಯಾರ್ಥಿಗಳು ಎಂದರೆ ಅದಕ್ಕೆ ನಿರಂತರ ಪ್ರೋತ್ಸಾಹ ಅತಿ ಅಗತ್ಯವಾಗಿದೆ, ಅಂತಹ ಪ್ರೋತ್ಸಾಹ ಕಾರ್ಯವನ್ನು ತಮ್ಮ ಹುಟ್ಟು ಹಬ್ಬದ ಮೂಲಕ ನೀಡಿದ್ದು ಇನ್ನೂ ಮಾದರಿಯಾಗಿದೆ ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದರು.

ಮುಖ್ಯ ಅತಿಥಿಗಳಾಗಿ ನೀಲಮ್ಮ, ಶ್ರೀಮತಿ ಪಟ್ನಶೆಟ್ಟಿ, ಲಾರಿಮಾಲೀಕರ ಸಂಘದ ಅಧ್ಯಕ್ಷ ನಾಗರಾಜ, ಯೋಗ ಶಿಕ್ಷಕ ವೆಂಕಟರಾವ್, ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು, ಪುರಸಭೆಯ ಸದಸ್ಯರಾದ ಹಟ್ಟಿ ರತ್ನಮ್ಮ, ಹಟ್ಟಿ ಕುಮಾರಸ್ವಾಮಿ, ಎನ್.ಟಿ.ಅರ್. ಆಶಾ ನರಸಿಂಹ, ಮುಖ್ಯ ಶಿಕ್ಷಕರಾದ ಹೆಚ್.ಎನ್. ಬೊಸ್ಲೆ ಇತರರು ಎಲ್ಲಾ ಲಾರಿ ಮಾಲೀಕರು, ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here