ಕನ್ನಯ್ಯಲಾಲ್ ಕೊಲೆ ಖಂಡಿಸಿ ಶ್ರೀ ರಾಮ ಸೇನೆಯಿಂದ ಹೊಸಪೇಟೆ ಬಂದ್ ಯಶ್ವಸಿ

0
162

ವಿಜಯನಗರ:ಹೊಸಪೇಟೆ:ಜು:2: ರಾಜಸ್ಥಾನದ ಉದಯಪುರದಲ್ಲಿ ನಡೆದ ಕೊಲೆ ಘಟನೆಯನ್ನು ಖಂಡಿಸಿ ಶ್ರೀ ರಾಮ ಸೇನೆಯ ನೇತ್ರತ್ವದಲ್ಲಿ ಹಿಂದೂಪರ ಸಂಘಟನೆಗಳ ಸ್ವಯಂ ಪ್ರೇರಿತ “ಹೊಸಪೇಟೆ ಬಂದ್ ” ಭಾಗಶಃ ಯಶಸ್ವಿಯಾಗಿದೆ
ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಜಗದೀಶ್ ಕಮಾಟಗಿ ಮನವಿಯಂತೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಘಟನೆ‌ ಖಂಡನೀಯ, ಮತಾಂದರ ಈ ಕೃತ್ಯ ನಾಗರಿಕ ಸಮಾಜ ತಲೆತಗ್ಗಿಸುವಂತೆ‌ಮಾಡಿದೆ. ಪ್ರಧಾನಿಗೂ ಇಂತಹ ಮತಾಂದರಿಂದಲೇ ಕೊಲೆ ಬೆದರಿಕೆಯೂ ಇದ್ದು ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಸಲ್ಲಿಸುವ ಮನವಿಯಲ್ಲಿ ಕನ್ನಯ್ಯ ಕುಟುಂಬಕ್ಕೆ ರಾಜಸ್ಥಾನ ಸರ್ಕಾರ 50 ಲಕ್ಷ ಸಹಾಯಹಸ್ತ ನೀಡಬೇಕು, ಅಪರಾಧಿಗಳು ಒಪ್ಪಿಗೆ ಸೂಚಿಸಿದ್ದು ತಕ್ಷಣವೇ ಶಿಕ್ಷೆಗೆ‌ ಗುರಿಪಡಿಸಬೇಕು, ನ್ಯಾಯಾಲಯದ ಪ್ರಕ್ರೀಯೆ ಒಂದು ತಿಂಗಳೊಳಗೆ ಮುಕ್ತಾಯ ಮಾಡಬೇಕು ಎಂದು‌‌ ಒತ್ತಾಯಿಸುವುದಾಗಿ ತಿಳಿಸಿದ್ದರು.ಆದರೆ ಸಭೆ ಆರಂಭವಾಗುತ್ತದ್ದಂತೆ ಬಂಧನದ ಹೈಡ್ರಾಮಾ ಒಂದು ರೀತಿಯ ಚರ್ಚೆಗೆ ಗ್ರಾಸ ವಾಯಿತು.
ಪ್ರಧಾನ ಕಾರ್ಯದರ್ಶಿ ನಾಗರಾಜ್, ಉಪಾಧ್ಯಕ್ಷ ಸುರೇಶ ಬಂಗಾರಿ, ನಗರಘಟಕದ ಅಧ್ಯಕ್ಷ ಅನುಪಕುಮಾರ ಸೇರಿದಂತೆ ನೂರಾ ಸಂಖ್ಯೆಯ ಕಾರ್ಯಕರ್ತರು ಹಾಜರಿದ್ದರು.

ಭಾಗಶಃ ಯಶಸ್ವಿ:ಬಜಾರ್ ಬಂದ್ ಹಿಂದೂ ಕಾರ್ಯಕರ್ತನ ಕೊಲೆ ಖಂಡಿಸಿ ಶ್ರೀ ರಾಮ ಸೇನೆ ಕರೆ ನೀಡಿದ್ದ ” “ಹೊಸಪೇಟೆ ಬಂದ್” ಬಾಗಶಃ ಯಶಸ್ವಿಯಾಯಿತು. ಮೇನ್ ಬಜಾರ್ ಸಂಪೂರ್ಣ ಬಂದ್ ಆದರೆ ಕಾರ್ಯಕರ್ತರ ಬಂಧನದ ನಂತರ ಇತರೆಡೆಗಳಲ್ಲಿಯೂ ಅಂಗಡಿ ಮುಂಗಟ್ಟುಗಳು ಬಂದ್ ಆದವು ಗಾಂಧಿ ಪ್ರತಿಮೆಯ ಎದುರು ಅಭಿನವಶ್ರೀ ನೇತ್ರತ್ವದಲ್ಲಿ ಮೌನ ಪ್ರತಿಭಟನೆ ಆರಂಭವಾಗುತ್ತದ್ದಂತೆ ಅದರ ಸುತ್ತಲಿನ ಅಂಗಡಿ ಮುಂಗಟ್ಟುಗಳು ಬಂದ್ ಆದವು ಎಂದಿನಂತೆ ಆಟೋ, ಬಸ್, ಶಾಲಾ ಕಾಲೇಜುಗಳು ಮಾತ್ರ ಎಂದಿನಂತಿದ್ದು.

ವರದಿ:-ಪಿ.ವಿ.ಕಾವ್ಯ

LEAVE A REPLY

Please enter your comment!
Please enter your name here