ಯೋಗ ತರಬೇತಿ ಹಾಗೂ ವನಮಹೋತ್ಸವ ಕಾರ್ಯಕ್ರಮ

0
185

ಕೊಟ್ಟೂರು:ಜುಲೈ:03:-ಗಂಗೋತ್ರಿ ಬಿ ಎಸ್ ಡಬ್ಯೂ ಪದವಿ ಮಹಾವಿದ್ಯಾಲಯ ಕೊಟ್ಟೂರು ರಾಷ್ಟ್ರೀಯ ಸೇವಾ ಯೋಜನಾ ಶಿಬಿರ ಹಾಗೂ ಗ್ರಾಮೀಣ ಸಮಾಜ ಕಾರ್ಯ ಶಿಬಿರದ ನಾಲ್ಕನೇ ದಿನದ ಅಂಗವಾಗಿ ಯೋಗ ತರಬೇತಿ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.

ಇದಕ್ಕೆ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿರುವ ಖ್ಯಾತ ಯೋಗ ತಜ್ಞರು ಮತ್ತು ಪರಿಸರ ಪ್ರೇಮಿಯಾಗಿರುವ ಶ್ರೀ ಬಂಜಾರ್ ನಾಗರಾಜ್ ಸರ್ ದೈಹಿಕ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಶಾಲೆ ಚೌಡಾಪುರ ಹಾಗೂ ಕೊಟ್ಟೂರಿನ ಪರಿಸರ ಕಾಳಜಿವುಳ್ಳ ಹಸಿರು ಹೊನಲು ತಂಡ ಕೊಟ್ಟೂರಿನ ಸದಸ್ಯರು ಈ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಬಂಜಾರ್ ನಾಗರಾಜ್ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಮಾಡಿಸಿದರು ನಂತರ ವನಮಹೋತ್ಸವ ಕಾರ್ಯಕ್ರಮ ವನ್ನು ಹಸಿರು ಹೊನಲು ತಂಡ ಹಾಗೂ ಶಿಬಿರರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಸಿ ಬಿ ರಜತ್ ಕಾರ್ಯದರ್ಶಿಗಳು ಶ್ರೀ ಗುರು ಬಸವೇಶ್ವರ ವಿದ್ಯಾಭಿರುದ್ಧಿ ಸಂಸ್ಥೆ ಮತ್ತು ಪರಿಸರ ಕಾಳಜಿ ಹೊಂದಿದ ಹಸಿರು ಹೊನಲು ತಂಡದ ಸದಸ್ಯರಾದ ನಾಗರಾಜ ಸರ್, ಜಡಿಯಪ್ಪ, ನಾಗರಾಜ್ ಜಿ ಬಿ ಸರ್, ಚಂದ್ರಣ್ಣ ರವರು ಭಾಗವಹಿಸಿದ್ದರು, ಶಿಬಿರದ ನಿರ್ದೇಶಕ ಗುರುಬಸವರಾಜ ಎ. ಎಂ ಎಂ. ಶಿಬಿರದ ಸಂಯೋಜಕ ಶಶಿಕಿರಣ ಕೆ, ಸಹ ಶಿಬಿರಾಧಿಕಾರಿಗಳಾದ ಪ್ರಫುಲ್ ಚಂದ್ರ, ಪೂರ್ಣಚಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here