ಬೆಲೆಯೇರಿಕೆಯ ವಿರುದ್ಧ ಪ್ರತಿಭಟನೆ ಅಖಿಲ ಭಾರತ ಯುವಜನ ಫೆಡರೇಷನ್ AIYF ತಾಲೂಕು ಸಮಿತಿ ಕೂಡ್ಲಿಗಿ

0
90

ವರದಿ:-ಇಬ್ರಾಹಿಮ್ ಖಲೀಲ್

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಅಖಿಲ ಭಾರತ ಯುವಜನ ಫೆಡರೇಷನ್ ತಾಲೂಕು ಸಮಿತಿಯು ರಾಜ್ಯ ಸಮಿತಿ ಕರೆಯ ಮೇರೆಗೆ ಡಿಜಿಟಲ್ ಪ್ರತಿಭಟನೆಯನ್ನು ಈ ದಿನ ಮಾಡಲು ಕರೆ ನೀಡಿದ್ದು ಅದರ ಅಂಗವಾಗಿ ಕೂಡ್ಲಿಗಿ ತಾಲೂಕಿನ ಮರಬನಹಳ್ಳಿ ಗುಡೆಕೋಟೆ ಚಿಕ್ಕಜೋಗಿಹಳ್ಳಿ ಹಾಗೂ ಗಜಾಪುರ ಗ್ರಾಮಗಳಲ್ಲಿ ಮನೆಗಳಲ್ಲಿಯೇ ಬೆಲೆ ಏರಿಕೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ
ಮಹಾಮಾರಿಯ ಭೀತಿಯಿಂದ ಜನರ ಬದುಕು ಸಂಪೂರ್ಣ ನಾಶವಾಗಿದೆ. ಜನರು ಉದ್ಯೋಗವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರಗಳು ಲಾಕ್ ಡೌನ್ ಘೋಷಿಸಿ ಕೆಲವೇ ವರ್ಗದ ಜನರಿಗೆ ಅಲ್ಪ ಪರಿಹಾರವನ್ನು ಘೋಷಿಸಿ ತಮ್ಮ ಕರ್ತವ್ಯ ಮುಗಿಯಿತು ಎಂಬಂತೆ ವರ್ತಿಸುತ್ತಿವೆ. ಈ ಸಂಕಷ್ಟಗಳನ್ನು ಅನುಭವಿಸುತ್ತಾ ಬದುಕನ್ನು ಸಾಗಿಸಲು ಕಷ್ಟ ಪಡುತ್ತಿರುವ ಸಂದರ್ಭದಲ್ಲೂ ನಮ್ಮನ್ನು ಆಳುವ ಸರಕಾಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿಯಂತ್ರಣ ಮಾಡುತ್ತಿಲ್ಲ. ಈಗಾಗಲೇ ಇವಗಳ ಬೆಲೆ ಶತಕವನ್ನು ತಲುಪಿದ್ದು ಜನರಿಗೆ ಹೊರೆಯಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯೂ ಸಹಜವಾಗಿಯೇ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಪೂರಕವಾಗುತ್ತದೆ. ಅಡುಗೆ ಎಣ್ಣೆ, ಬೇಳೆ‌ಕಾಳು ಹಾಗೂ ಇತರೆ ದಿನ ನಿತ್ಯ ಆಹಾರ ಪದಾರ್ಥಗಳ ಬೆಲೆಯು ಗಗನಕ್ಕೆ ಏರುತ್ತಿದ್ದು ಸರಕಾರಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿವೆ. ಬಡ ಹಾಗೂ ಮಧ್ಯಮ ವರ್ಗದ ಜನರು ಈ ಬೆಲೆ ಏರಿಕೆಯಿಂದಾಗಿ ತತ್ತರಿಸುತ್ತಿದ್ದು, ಸರಕಾರಗಳ ಆಳ್ವಿಕೆಯಿಂದ ನಿರಾಶರಾಗಿದ್ದಾರೆ. ಕರೋನಾ ಪರಿಸ್ಥಿತಿಯಲ್ಲಿ ಜನರ ಬಳಿ ಕೆಲಸವೂ ಇಲ್ಲ ಹಾಗೆ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಹಣವೂ ಇಲ್ಲವಾಗಿದೆ. ಈ ಹಿಂದೆ BJP ವಿರೋಧ ಪಕ್ಷವಾಗಿದ್ದಾಗ ಆಗೊಮ್ಮೆ, ಈಗೊಮ್ಮೆ ಬೆಲೆ ಏರಿಕೆಯಾಗುತ್ತಿದ್ದಗಾಲೆಲ್ಲ ಬೀದಿಗಳಿದು ಪ್ರತಿಭಟನೆ ನಡೆಸುತ್ತಿತ್ತು ಆದರೆ ಈಗೆ ಅವರೆ ಸ್ವತಃ ಅವರೇ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ದಲ್ಲಿಇದ್ದರೂ ಪ್ರತಿನಿತ್ಯ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿದ್ದರು ಮಾತನಾಡುತ್ತಿಲ್ಲ‌. ಕೇಂದ್ರ ಹಾಗೂ ರಾಜ್ಯ ಸರಕಾರದ ಈ ಜನವಿರೋಧಿ ಆಡಳಿವನ್ನು AIYF ಖಂಡಿಸುತ್ತದೆ. ಜೊತೆಗೆ ಕೂಡಲೇ ಜನತೆಗೆ ಅಗತ್ಯ ವಸ್ತುಗಳ ಅನುಕೂಲಕರ ಬೆಲೆಯಲ್ಲಿ ಕೊಳ್ಳಲು ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಬೇಕೆಂದು
ಇಂದು ಈ ಡಿಜಿಟಲ್ ಪ್ರತಿಭಟನಾ ಮೂಲಕ ಒತ್ತಾಯಿಸುತ್ತ. ಈದಿನ ಪ್ರತಿಭಟನೆಯಲ್ಲಿ ಕರಿಯಪ್ಪ ಅಧ್ಯಕ್ಷರು ಜಿಎಸ್ ಬಸವರಾಜ್ ಕಾರ್ಯದರ್ಶಿ ಮಂಜುನಾಥ್ ಗುಡೆಕೋಟೆ ತಾಲೂಕು ಉಪಾಧ್ಯಕ್ಷರು ಅಶೋಕ್ ನಾಯಕ್ ಚಿಕ್ಕಜೋಗಿಹಳ್ಳಿ ನಂದಿ ಪಂಪಾಪತಿ ವಿಠ್ಠಲ್ ರೇಣುಕಮ್ಮ ಜುಬೇರ ಇಬ್ರಾಹಿಂ ಕಲೀಲ್ ಆಯುಬ್ ಫೈಜಾನ್ ಇನ್ನು ಮುಂತಾದ ಗೆಳೆಯರು ತಮ್ಮ ಗ್ರಾಮಗಳಲ್ಲಿ ತಮ್ಮ ಮನೆಗಳಲ್ಲಿ ಪ್ರತಿಭಟನೆ ಮಾಡುವುದರ ಮೂಲಕ ಬೆಲೆಯೇರಿಕೆಯ ವಿರುದ್ಧ ಸರ್ಕಾರವನ್ನು ಒತ್ತಾಯಿಸಿದ್ದಾರೆ

LEAVE A REPLY

Please enter your comment!
Please enter your name here