ಮೈತುಂಬಿ ಕೊಳ್ಳುತ್ತಿದೆ ತುಂಗಭದ್ರೆಗೆ ಮಲೆನಾಡ ಸಂಭ್ರಮ: 82ಸಾವಿರ ಕ್ಯೂಸೆಕ್ಸ್ ಒಳಹರಿವು.

0
54

ಹೊಸಪೇಟೆ:ಜುಲೈ:08:-ಕಲ್ಯಾಣ ಕರ್ನಾಟಕ ಸೇರಿದಂತೆ ನೆರೆಯ ಆಂದ್ರಾ ಮತ್ತು ತೆಲಂಗಾಣ ರಾಜ್ಯದ ಜೀವನಾಡಿ ತುಂಗಭದ್ರಾ ಜಲಾಶಯ ಮೈತುಂಬಿಕೊಳ್ಳುತ್ತಿದೆ.
ಕಳೆದ ಎರಡು ದಿನಗಳಿಂದ ಜಲಾನಯನ ಪ್ರದೇಶ ಸೇರಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮಳೆ ಸುರಿಯುತ್ತಿದೆ. ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ಅಂದಾಜು 82 ಸಾವಿರ ಕ್ಯೂಸೆಕ್ಸೆ ನೀರು ಸದ್ಯ ಹರಿದು ಬರುತ್ತಿದ್ದು ಸಂಜೆಯ ವೇಳೆಗೆ ಲಕ್ಷ ತಲುಪುವ ಸಾಧ್ಯತೆಯಿದೆ. ಇದೆ ಸ್ಥಿತಿ ಮುಂದಿನ ಎರಡು ಮೂರು ದಿನಗಳಕಾಲ ಮುಂದುವರೆದರೆ ಜಲಾಶಯ ಭರ್ತಿಯಾಗುವುದು ಖಚಿತವಾಗಿದೆ.
ಅಷ್ಟೇ ಪ್ರಮಾಣದ ನೀರು ನದಿಗೂ ಹರಿಬಿಡುವ ಸಾಧ್ಯತೆ ಇದ್ದು ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆಗೂ ಮುಂದಾಗಿದೆ.
ಜಲಾನಯನ ಪ್ರದೇಶ ಮಲೆನಾಡಿನಾದ್ಯಂತ ಹಾಗೂ ಇತರೆ ವಿಜಯನಗರದ ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿಗಳಲ್ಲಿಯೂ ಉತ್ತಮ ಮಳೆಯಾಗುತ್ತಿದೆ.
ಜನ ಜಾನುವಾರುಗಳು ನದಿಯತ್ತ ಸುಳಿಯದಂತೆ
ವಿಜಯನಗರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದ್ದಾರೆ.
ತುಂಗ ಜಲಾಶಯದಿಂದ ಇಂದು ಸಹ 54ಕ್ಯೂಸೆಕ್ಸ್ ನೀರು ನದಿಗೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶ ಸೇರಿದಂತೆ ಕೆರೆ, ನದಿ ತೀರಕ್ಕೆ ಸಾರ್ವಜನಿಕರು ಹೋಗದಂತೆ ಜಾಗೃತೆ ವಹಿಸಲಾಗಿದೆ ನಿರ್ಬಂಧ ಹಾಗೂ ಮೈಕುಗಳ ಮೂಲಕವೂ ಮಾಹಿತಿ ಮಾಡಲಾಗುತ್ತಿದೆ.
ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರುವಂತೆ ವಿಪತ್ತು ನಿರ್ವಹಣೆಯನ್ನು ಚಾಚೂ ತಪ್ಪದೇ ಪಾಲಿಸುವಂತೆ ಸೂಚಿಸಲಾಗಿದೆ. ವಿವಿಧ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ಗ್ರಾಮ ಲೆಕ್ಕಾಧಿಕಾರಿಗಳು (ನದಿ ಪಾತ್ರದ ಗ್ರಾಮ ಲೆಕ್ಕಿಗರು) ನೇಮಕಮಾಡಲಾಗಿದೆ. ಅವರು ಸದಾ ಜಾಗೃತರಾಗಿರುವಂತೆ ಸೂಚಿಸಲಾಗಿದೆ.

ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 08394-295655 ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡುವಂತೆ ತಿಳಿಸಲಾಗಿದೆ.
ನೀರಿನ ಮಟ್ಟ.
ಜಲಾಶಯದ ಗರಿಷ್ಠ ಮಟ್ಟ1633 ಅಡಿ, ಇಂದು 1621.19 ಅಡಿ, ನೀರು ಸಂಗ್ರಹಣಾ ಸಾಮರ್ಥ್ಯ 105.788 ಟಿಎಂಸಿ, ಇಂದಿನ ಸಾಮರ್ಥ್ಯ 64.728, ಒಳಹರಿವು:82103 ಕ್ಯೂಸೆಕ್ಸ್, ಹೊರಹರಿವು 221 ಕ್ಯೂಸೆಕ್ಸ್ ಆಗಿದೆ.

ವರದಿ:-ಪಿ.ವಿ. ಕಾವ್ಯ

LEAVE A REPLY

Please enter your comment!
Please enter your name here