ಡಾ.ಸಿ.ಎನ್.ಅಶ್ವತ್ ನಾರಾಯಣ ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ; ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಒತ್ತಾಯ

0
333

ಕೊಟ್ಟೂರು:ಪೆ:20:- ಡಾ.ಸಿ.ಎನ್. ಅಶ್ವತ್‌ನಾರಾಯಣ ಮಾನ್ಯ ಉನ್ನತ ಸಚಿವರು ಕರ್ನಾಟಕ ಸರ್ಕಾರ ಇವರು ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಸಿದ್ದರಾಮಯ್ಯನವರನ್ನು ಹೊಡೆದುಹಾಕಿ ಎಂದು ಹೇಳಿಕೆ ಕೊಟ್ಟಿರುತ್ತಾರೆ.

ಸನ್ಮಾನ್ಯ ಸಿದ್ದರಾಮಯ್ಯ ನವರು ಕರ್ನಾಟಕ ಮಾಜಿ ಮುಖ್ಯಮಂತಿಗಳು ಹಾಗೂ ವಿರೋಧ ಪಕ್ಷದ ನಾಯಕ ನಾಯಕರಾಗಿದ್ದು.ನಮ್ಮ ನಾಡಿನ ದೀನ ದಲಿತರ ಸೋಶಿತ ಸಮುದಾಯದ ಪರವಾಗಿ ಘಟ್ಟಿಯಾಗಿ ನಿಂತು ಹೋರಾಡುತ್ತಿರುವ ಕೆಲವು ನಾಯರಲ್ಲಿ ಒಬ್ಬರು ಎಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಳುತ್ತೇವೆ. ಇಂತಹ ಒಬ್ಬ ಅಪ್ರತಿಮ ಹೋರಾಟಗಾರ ಅತ್ಯಂತ ಹಿರಿಯ ಆಡಳಿತಗಾರರ ಜನಪ್ರಿಯತೆ ಕಂಡು ಬರುವಂತಹ ಚುನಾವಣೆಯಲ್ಲಿ ತಮ್ಮ ಬಿಜೆಪಿ ಪಕ್ಷಕ್ಕೆ ಸೋಲು ಉಂಟಾಗುವ ಭೀತಿಯಲ್ಲಿ ಇರುವ ಬಿಜೆಪಿ ನಾಯಕರು ಗಳಿಗೆ ಪ್ರತಿದಿನ ಒಂದಲ್ಲ ಒಂದು ವೇದಿಕೆಯಲ್ಲಿ ಸಿದ್ದರಾಮಯ್ಯನವರನ್ನು ಕಟು ಶಬ್ಧಗಳಲ್ಲಿ ಟೀಕೆಗಳನ್ನು ನಡೆಸುತ್ತಿದ್ದು. ಇದರ ಮುಂದವರೆದ ಭಾಗವಾಗಿ ಡಾ.ಸಿ.ಎನ್. ಅಶ್ವತ್‌ನಾರಾಯಣ ಮಾನ್ಯ ಉನ್ನತ
ಶಿಕ್ಷಣ ಸಚಿವರು ಅತ್ಯಂತ ಕೀಳು ಮನಸ್ಥಿತಿಯನ್ನು ಪ್ರದರ್ಶಿಸುತ್ತ ಸಿದ್ದರಾಮಯ್ಯನವರನ್ನು ಹೊಡೆದು ಹಾಕಿ ಎನ್ನುವ ಪದಬಳಕೆ ನಡೆಸಿ ರಾಜ್ಯದಲ್ಲಿನ ಕೋಟ್ಯಾಂತರ ಅಭಿಮಾನಿಗಳಿಗೆ ನೋವು ಉಂಟು ಮಾಡಿದ್ದಾರೆ.

ರಾಜ್ಯದಲ್ಲಿ ಒಬ್ಬ ಜವಾಬ್ದಾರಿಯುತ ಸಚಿವರಾಗಿ ತಮ್ಮ ನಡೆನುಡಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಸಚಿವರೊಬ್ಬರು ವಿರೋಧ ಪಕ್ಷಗಳ ನಾಯಕರ ಬಗ್ಗೆ ಭಿನ್ನಾಭಿಪ್ರಾಯ ಅಥವಾ ವಿರೋಧವಿದ್ದಲ್ಲಿ ರಾಜಕಾರಣದ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ವಿರೋಧ ವ್ಯಕ್ತಪಡಿಸಬೇಕೆ ವಿನಃ ವ್ಯಕ್ತಿಘತವಾಗಿ ವಿರೋಧ ಅಥವಾ ಅವಹೇಳನ ಮಾಡುವದನ್ನು ನಾವುಗಳು ತೀವ್ರವಾಗಿ ಖಂಡಿಸುತ್ತೇವೆ.

ನಾಡಿನ ಒಬ್ಬ ಹಿರಿಯ ಮುತ್ಸದ್ದಿಯನ್ನು ಟೀಕಿಸುವ ಭರದಲ್ಲಿ ತಮ್ಮ ವಿವೇಚನೆಯನ್ನು ಮರೆತು ಅನಾಗರೀಕರಂತೆ ವರ್ತಿಸಿರುವ ಸಚಿವರ ನಡೆಯಿಂದ ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿರುತ್ತದೆ. ಆದ್ದರಿಂದ ತಾವುಗಳು ಕೂಡಲೇ ಸದರಿ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ಡಾ.ಸಿ.ಎನ್. ಅಶ್ವತ್‌ ನಾರಾಯಣ ಉನ್ನತ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಇವರನ್ನು ಘನ ಸರ್ಕಾರದ ಸಚಿವ ಸಂಪುಟದಿಂದ ವಜಾಗೊಳಿಸಿ ಸಿದ್ದರಾಮಯ್ಯನವರ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ವಿಜಯನಗರ ಜಿಲ್ಲೆಯ ಕೊಟ್ಟೂರು ಕಾಂಗ್ರೆಸ್ ಸಮಿತಿ ವತಿಯಿಂದ ಈ ಮೂಲಕ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಐ ಎಂ ದಾರುಕೇಶ್. ಹರಾಳು ನಂಜಪ್ಪ. ಅಡಕಿ ಮಂಜುನಾಥ್. ಗೂಳಿ ಮಲ್ಲಿಕಾರ್ಜುನ್. ಚಿನ್ನನಹಳ್ಳಿ ಮುಗಪ್ಪ. ಕನ್ನಹಳ್ಳಿ ರಾಜಣ್ಣ. ಅಚಮನಿ ಮಲ್ಲಿಕಾರ್ಜುನ್. ಪೂಜಾರ್ ನಾಗಪ್ಪ. ಅಶೋಕ್ ಇಂಜಿನಿಯರ್. ಶಿವಕುಮಾರ್ ಗೌಡ.ಮೊರೂರು ಕೊಟ್ರೇಶ್. ಉಮಾಪತಿ. ಎಲ್ಐಸಿ ಮೂಗಣ್ಣ. ಮಾನಸ ರಾಜಣ್ಣ. ಇನ್ನೂ ಪ್ರಮುಖ ಮುಖಂಡರು ಇದ್ದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here